For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಬಾಕ್ಸ್ ಆಫೀಸ್ ಫೈಟ್: ಸ್ಟಾರ್ ಚಿತ್ರಗಳ ನಡುವೆ ಮೆಗಾವಾರ್

  |

  ಕಳೆದ ವರ್ಷ ಚಿತ್ರಮಂದಿರಕ್ಕೆ ಬರಲಾಗದೇ ಕಾದು ಕುಂತಿದ್ದ ಚಿತ್ರಗಳು 2021ರಲ್ಲಿ ದಿನಾಂಕ ಕಾಯ್ದಿರಿಸಿವೆ. ಪ್ಯಾನ್ ಇಂಡಿಯಾ ಚಿತ್ರಗಳು ಹೆಚ್ಚಾಗುತ್ತಿದ್ದಂತೆ ಬಾಲಿವುಡ್ ಇಂಡಸ್ಟ್ರಿ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸೌತ್ ಸಿನಿಮಾಗಳು ನೇರವಾಗಿ ಹಿಂದಿ ವರ್ಷನ್‌ನಲ್ಲಿ ಬಿಡುಗಡೆಯಾಗುತ್ತಿವೆ. ಸೌತ್ ಚಿತ್ರಗಳ ಜೊತೆ ಹಿಂದಿ ಚಿತ್ರಗಳು ಪೈಪೋಟಿ ಎದುರಿಸಬೇಕಿದೆ.

  ಈ ಕಡೆ ಬಾಲಿವುಡ್ ಸ್ಟಾರ್‌ಗಳಿಗೆ ಬಾಲಿವುಡ್ ಸ್ಟಾರ್‌ಗಳೇ ಎದುರಾಳಿಗಳಾಗಿ ನಿಲ್ಲುವ ಪರಿಸ್ಥಿತಿ ಬಂದಿದೆ. ಹೌದು, ನಿರೀಕ್ಷೆಯ ಹಿಂದಿ ಸಿನಿಮಾಗಳು ಒಂದೊಂದೇ ರಿಲೀಸ್ ದಿನಾಂಕ ಘೋಷಿಸುತ್ತಿದ್ದು, ಬಹುತೇಕ ದೊಡ್ಡ ಚಿತ್ರಗಳು ಒಂದೇ ವಾರ ಥಿಯೇಟರ್‌ಗೆ ಬರ್ತಿದೆ. ಇದು ಸಹಜವಾಗಿ ಬಾಲಿವುಡ್ ಬಾಕ್ಸ್ ಆಫೀಸ್‌ ಮೇಲೆ ಪರಿಣಾಮ ಬೀರಲಿದೆ. ಅಷ್ಟಕ್ಕೂ ಯಾವ ಚಿತ್ರಗಳು ಒಂದೇ ದಿನಾಂಕಕ್ಕೆ ಬರುತ್ತಿವೆ? ಮುಂದೆ ಓದಿ....

  ಅಕ್ಷಯ್ ಕುಮಾರ್ v/s ಶಾಹಿದ್ ಕಪೂರ್; ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್ಅಕ್ಷಯ್ ಕುಮಾರ್ v/s ಶಾಹಿದ್ ಕಪೂರ್; ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್

  ಪೃಥ್ವಿರಾಜ್ Vs ಜೆರ್ಸಿ

  ಪೃಥ್ವಿರಾಜ್ Vs ಜೆರ್ಸಿ

  ಅಕ್ಷಯ್ ಕುಮಾರ್ ನಟನೆಯಲ್ಲಿ ತಯಾರಾಗಿರುವ ಐತಿಹಾಸಿಕ ಸಿನಿಮಾ 'ಪೃಥ್ವಿರಾಜ್' ನವೆಂಬರ್ 5ಕ್ಕೆ ತೆರೆಗೆ ಬರಲಿದೆ. ಅದೇ ದಿನ ಶಾಹೀದ್ ಕಪೂರ್ ನಟನೆಯ 'ಜೆರ್ಸಿ' ಸಿನಿಮಾನೂ ಬಿಡುಗಡೆಯಾಗಲಿದೆ. ಅಲ್ಲಿಗೆ ಬಾಕ್ಸ್ ಆಫೀಸ್‌ನಲ್ಲಿ ಅಕ್ಷಯ್ ಕಮಾರ್ ವರ್ಸಸ್ ಶಾಹೀದ್ ಕಪೂರ್ ಫೈಟ್ ಮಾಡುವಂತಾಯಿತು.

  ಅಣ್ಣಾತ್ತೆ ಚಿತ್ರವೂ ಎಂಟ್ರಿ

  ಅಣ್ಣಾತ್ತೆ ಚಿತ್ರವೂ ಎಂಟ್ರಿ

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯ 'ಅಣ್ಣಾತ್ತೆ' ಚಿತ್ರವೂ ನವೆಂಬರ್ 5 ರಂದೇ ತೆರೆಕಾಣುತ್ತಿದೆ. ಸದ್ಯಕ್ಕೆ ಈ ಸಿನಿಮಾ ಹಿಂದಿಯಲ್ಲಿ ರಿಲೀಸ್ ಮಾಡುವುದರ ಬಗ್ಗೆ ಮಾಹಿತಿ ಇಲ್ಲ. ನೇರವಾಗಿ ತಮಿಳಿನಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಒಂದು ವೇಳೆ ಹಿಂದಿಯಲ್ಲಿ ಸಿನಿಮಾ ಬಂದರೆ ಅಕ್ಷಯ್ ಕುಮಾರ್ ಮತ್ತು ಶಾಹೀದ್ ಕಪೂರ್ ಜೊತೆ ರಜನಿ ಸಹ ಬಾಕ್ಸ್ ಆಫೀಸ್‌ನಲ್ಲಿ ಫೈಟ್ ಮಾಡಲಿದ್ದಾರೆ.

  ಒಂದೇ ದಿನ 5 ಚಿತ್ರಗಳ ಬಿಡುಗಡೆ ದಿನಾಂಕ ಘೋಷಿಸಿದ ಯಶ್ ರಾಜ್ ಫಿಲಂಸ್ಒಂದೇ ದಿನ 5 ಚಿತ್ರಗಳ ಬಿಡುಗಡೆ ದಿನಾಂಕ ಘೋಷಿಸಿದ ಯಶ್ ರಾಜ್ ಫಿಲಂಸ್

  ಸಲ್ಮಾನ್ ಖಾನ್-ಜಾನ್ ಅಬ್ರಾಹಂ

  ಸಲ್ಮಾನ್ ಖಾನ್-ಜಾನ್ ಅಬ್ರಾಹಂ

  ಈದ್ ಹಬ್ಬದ ಪ್ರಯುಕ್ತ ಸಲ್ಮಾನ್ ಖಾನ್ ನಟನೆಯ 'ರಾಧೇ' ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಮೇ 12 ರಂದು 'ರಾಧೇ' ತೆರೆಕಾಣಲಿದೆ. ಅದೇ ದಿನ ಜಾನ್ ಅಬ್ರಾಹಂ ನಟನೆಯ 'ಸತ್ಯಮೇವ ಜಯತೆ-2' ಸಿನಿಮಾನೂ ರಿಲೀಸ್ ಆಗುತ್ತಿದೆ.

  ಆರ್‌ಆರ್‌ಆರ್ ವರ್ಸಸ್ ಮೈದಾನ್

  ಆರ್‌ಆರ್‌ಆರ್ ವರ್ಸಸ್ ಮೈದಾನ್

  ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಸಿನಿಮಾ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 13 ರಂದು ಬಿಡುಗಡೆಯಾಗುತ್ತಿದೆ. ಅದೇ ವಾರ ಅಂದ್ರೆ ಅಕ್ಟೋಬರ್ 15 ರಂದು ಅಜಯ್ ದೇವಗನ್ ನಟನೆಯ 'ಮೈದಾನ್' ಸಿನಿಮಾ ತೆರೆಕಾಣಲಿದೆ. ಆರ್‌ಆರ್‌ಆರ್ ಸಿನಿಮಾ ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ.

  ಜೂ.ಚಿರು ರಿಲೀಸ್ ಮಾಡಿದ ಟ್ರೈಲರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Filmibeat Kannada
  English summary
  Bollywood Box office Clash 2021: Prithviraj and Jersey movie releasing together, Radhe and Satyameva jayate 2 movie to release together.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X