2018: ಬಾಲಿವುಡ್ ನಲ್ಲಿ ಹೊಸ ಜೀವನ ಆರಂಭಿಸಿದ ಜೋಡಿಗಳು

ಬಾಲಿವುಡ್ ನಲ್ಲಂತೂ ಈ ವರ್ಷ ಮದುವೆ ಸೀಸನ್ ಬಲು ಜೋರಾಗಿತ್ತು. ಮೀಡಿಯಾಗಳ ಕಣ್ತಪ್ಪಿಸಿದರೂ, ನಟಿ ಶ್ರಿಯಾ ಸರಣ್ ಅದ್ಧೂರಿಯಾಗಿಯೇ ಮದುವೆ ಮಾಡಿಕೊಂಡರು.

ಇನ್ನೂ ಕಪೂರ್ ಕುಡಿ ಸೋನಂ ಕಪೂರ್ ವಿವಾಹಕ್ಕೆ ಇಡೀ ಬಾಲಿವುಡ್ ಸಾಕ್ಷಿ ಆಗಿತ್ತು. ಹಾಗೇ, ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಇಟಲಿಯ ವಿವಾಹದ ಕ್ಷಣಗಳನ್ನು ಅಭಿಮಾನಿಗಳು ಹೇಗೆ ತಾನೇ ಮರೆಯಲು ಸಾಧ್ಯ ಹೇಳಿ.?

ಕ್ರೈಸ್ತ ಮತ್ತು ಸಿಖ್ ಸಂಪ್ರದಾಯದಂತೆ ನಡೆದ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆ ಕೂಡ ಎಲ್ಲರ ಕಣ್ಣರಳಿಸಿತ್ತು. ಬನ್ನಿ ಹಾಗಾದ್ರೆ, 2018 ರಲ್ಲಿ ಹೊಸ ಜೀವನ ಆರಂಭಿಸಿದ ಬಾಲಿವುಡ್ ತಾರೆಯರ ಪಟ್ಟಿ ನೋಡಿಕೊಂಡು ಬರೋಣ..

ಶ್ರಿಯಾ ಸರಣ್-Andrei

ಶ್ರಿಯಾ ಸರಣ್-Andrei

ಮಾರ್ಚ್ 12 ರಂದು ಶ್ರಿಯಾ ಸರಣ್ ವಿವಾಹ ಮಹೋತ್ಸವ ನೆರವೇರಿತು. ದೀರ್ಘ ಕಾಲದ ಗೆಳೆಯ, ರಷ್ಯದ ಟೆನ್ನಿಸ್ ಪ್ಲೇಯರ್ Andrei Koscheev ಕೈ ಹಿಡಿದರು ನಟಿ ಶ್ರಿಯಾ ಸರಣ್. ರಾಜಸ್ಥಾನದ ಉದಯಪುರದಲ್ಲಿ ನಟಿ ಶ್ರಿಯಾ ಮದುವೆ ನಡೆಯಿತು.

ಮಿಲಿಂದ್ ಸೋಮನ್-ಅಂಕಿತಾ ಕೋನ್ವಾರ್

ಮಿಲಿಂದ್ ಸೋಮನ್-ಅಂಕಿತಾ ಕೋನ್ವಾರ್

53 ವರ್ಷ ವಯಸ್ಸಿನ ಮಿಲಿಂದ್ ಸೋಮನ್ ಮತ್ತು 27 ವರ್ಷ ವಯಸ್ಸಿನ ಅಂಕಿತಾ ಕೋನ್ವಾರ್ ಮದುವೆ ಆಗಿದ್ದು ಇದೇ ವರ್ಷ. ಮಹಾರಾಷ್ಟ್ರದ ಅಲಿಭಾಗ್ ನಲ್ಲಿ ಮಿಲಿಂದ್-ಅಂಕಿತಾ ವಿವಾಹ ನಡೆಯಿತು.

ಸೋನಂ ಕಪೂರ್-ಆನಂದ್ ಅಹುಜಾ

ಸೋನಂ ಕಪೂರ್-ಆನಂದ್ ಅಹುಜಾ

ದೆಹಲಿ ಮೂಲದ ಬಿಸಿನೆಸ್ ಮ್ಯಾನ್ ಆನಂದ್ ಅಹುಜಾ ಮತ್ತು ಬಾಲಿವುಡ್ ನಟಿ ಸೋನಂ ಕಪೂರ್ ವಿವಾಹ ಮಹೋತ್ಸವ ನಡೆದಿದ್ದು ಇದೇ ವರ್ಷದ ಮೇ ತಿಂಗಳಲ್ಲಿ. ಮುಂಬೈನ ಬಾಂದ್ರಾದಲ್ಲಿ ಸಿಖ್ ಸಂಪ್ರದಾಯದಂತೆ ಸೋನಂ ಕಪೂರ್-ಆನಂದ್ ಅಹುಜಾ ಮದುವೆ ನಡೆಯಿತು.

ನೇಹಾ ಧೂಪಿಯಾ-ಅಂಗದ್ ಸಿಂಗ್ ಬೇಡಿ

ನೇಹಾ ಧೂಪಿಯಾ-ಅಂಗದ್ ಸಿಂಗ್ ಬೇಡಿ

ಬಾಲಿವುಡ್ ನಟಿ ನೇಹಾ ಧೂಪಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಗೆಳೆಯ, ನಟ ಅಂಗದ್ ಸಿಂಗ್ ಬೇಡಿ ಜೊತೆಗೆ ಮೇ ತಿಂಗಳಲ್ಲಿ ಹೊಸ ಜೀವನ ಆರಂಭಿಸಿದರು ನಟಿ ನೇಹಾ ಧೂಪಿಯಾ. ಸಿಖ್ ಸಂಪ್ರದಾಯದಂತೆ ಇವರಿಬ್ಬರ ಮದುವೆ ನಡೆಯಿತು.

ಶಿವ್ ಪಂಡಿತ್-Ameira Punvani

ಶಿವ್ ಪಂಡಿತ್-Ameira Punvani

ಇಂಡಿಯನ್ ಪ್ರೀಮಿಯರ್ ಲೀಗ್ ಎಕ್ಸ್ ಟ್ರಾ ಇನ್ನಿಂಗ್ಸ್ ಹೋಸ್ಟ್ ಮಾಡುತ್ತಿದ್ದ ಬಾಲಿವುಡ್ ನಟ ಶಿವ್ ಪಂಡಿತ್ ಹೊಸ ಬಾಳಿಗೆ ಕಾಲಿಟ್ಟರು. ಡಿಸೈನರ್ ಹಾಗೂ ಸ್ಟೈಲಿಸ್ಟ್ Ameira Punvani ರವರ ಕೈಹಿಡಿದರು ನಟ ಶಿವ್ ಪಂಡಿತ್. ಮೇ 9 ರಂದು ಶಿವ್ ಪಂಡಿತ್ ವಿವಾಹ ಸರಳವಾಗಿ ನಡೆಯಿತು.

ಹಿಮೇಶ್ ರೇಶಮ್ಮಿಯಾ-ಸೋನಿಯಾ ಕಪೂರ್

ಹಿಮೇಶ್ ರೇಶಮ್ಮಿಯಾ-ಸೋನಿಯಾ ಕಪೂರ್

ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಹಿಮೇಶ್-ಸೋನಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿಖ್ ಸಂಪ್ರದಾಯದಂತೆ ಹಿಮೇಶ್-ಸೋನಿಯಾ ವಿವಾಹ ಜರುಗಿತು. ಮುಂಬೈನಲ್ಲಿ ಇರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿಯೇ ಗಾಯಕ, ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಮಿಯಾ ಹಾಗೂ ಸೋನಿಯಾ ಕಪೂರ್ ವಿವಾಹ ನಡೆಯಿತು.

ಮಿಮೋಹ್-ಮಾದಲಸಾ ಶರ್ಮಾ

ಮಿಮೋಹ್-ಮಾದಲಸಾ ಶರ್ಮಾ

ಬಾಲಿವುಡ್ ನಲ್ಲಿ ಡಿಸ್ಕೋ ಡ್ಯಾನ್ಸರ್ ಅಂತಲೇ ಪ್ರಖ್ಯಾತಿ ಪಡೆದಿರುವ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಚಕ್ರವರ್ತಿ ಅಲಿಯಾಸ್ ಮಿಮೋಹ್ ಚಕ್ರವರ್ತಿ ಮದುವೆ ನಡೆದಿದ್ದು ಇದೇ ವರ್ಷ. ನಟಿ ಶೀಲಾ ಶರ್ಮಾ ಪುತ್ರಿ ಮಾದಲಸಾ ಶರ್ಮಾ ರವರೊಂದಿಗೆ ಮಿಮೋಹ್ ವಿವಾಹ ಜುಲೈ ತಿಂಗಳಲ್ಲಿ ಊಟಿಯಲ್ಲಿ ನಡೆಯಿತು.

ಪ್ರಿನ್ಸ್ ನರುಲಾ-ಯುವಿಕಾ

ಪ್ರಿನ್ಸ್ ನರುಲಾ-ಯುವಿಕಾ

ಹಿಂದಿ ಕಿರುತೆರೆಯ ಹ್ಯಾಂಡ್ಸಮ್ ಹಂಕ್... ಮೂರ್ಮೂರು ರಿಯಾಲಿಟಿ ಶೋಗಳ ವಿಜೇತ ಪ್ರಿನ್ಸ್ ನರುಲಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ನಟಿ ಯುವಿಕಾ ಚೌಧರಿ ಜೊತೆಗೆ ಪ್ರಿನ್ಸ್ ನರುಲಾ ಹೊಸ ಬಾಳಿಗೆ ಅಡಿಯಿಟ್ಟರು. ಅಕ್ಟೋಬರ್ 12 ರಂದು ಮುಂಬೈನ ಪ್ರತಿಷ್ಟಿತ ಹೋಟೆಲ್ ವೊಂದರಲ್ಲಿ ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ವಿವಾಹ ಮಹೋತ್ಸವ ನಡೆಯಿತು. ಪಂಜಾಬಿ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್

ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್

ನವೆಂಬರ್ 14 ಮತ್ತು 15 ರಂದು ಇಟಲಿಯ ಲೇಕ್ ಕೋಮೋದಲ್ಲಿ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್ ನಟ ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ದೀಪಿಕಾ-ರಣ್ವೀರ್ ವಿವಾಹ ಮಹೋತ್ಸವ ನಡೆಯಿತು.

ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್

ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್

ಜೋಧ್ ಪುರದ ಐತಿಹಾಸಿಕ ಉಮೈದ್ ಭವನ್ ಪ್ಯಾಲೇಸ್ ನಲ್ಲಿ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ವಿವಾಹ ಮಹೋತ್ಸವ ನಡೆಯಿತು. ಡಿಸೆಂಬರ್ 1 ರಂದು ಕ್ರೈಸ್ತ ಸಂಪ್ರದಾಯದಂತೆ ಪ್ರಿಯಾಂಕಾ-ನಿಕ್ ಮದುವೆ ನಡೆಯಿತು. ಇನ್ನೂ ಡಿಸೆಂಬರ್ 2 ರಂದು ಸಿಖ್ ಸಂಪ್ರದಾಯದಂತೆ ಪ್ರಿಯಾಂಕಾ ಕೊರಳಿಗೆ ನಿಕ್ ಜೋನಸ್ ಮಂಗಳಸೂತ್ರ ತೊಡಿಸಿದರು.

ಕಪಿಲ್ ಶರ್ಮಾ-ಗಿನ್ನಿ

ಕಪಿಲ್ ಶರ್ಮಾ-ಗಿನ್ನಿ

ಡಿಸೆಂಬರ್ 12 ರಂದು ಜಲಾಂದರ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ಕಪಿಲ್ ಶರ್ಮಾ ಮತ್ತು ಗಿನ್ನಿ ವಿವಾಹವಾದರು. ಬಹುದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ಮದುವೆ ಆಗುವ ಮೂಲಕ ನೂತನ ಜೀವನಕ್ಕೆ ಕಾಲಿಟ್ಟರು.

More from Filmibeat

English summary
Here, is the detailed report of the Stars of Bollywood who got hitched in 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X