For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಶಾರುಖ್ ಖಾನ್

  |

  ಬಾಲಿವುಡ್ ಸೂಪರ್ ಸ್ಟಾರ್, ಕಿಂಗ್ ಖಾನ್, ಕಿಂಗ್ ಆಫ್ ರೊಮಾನ್ಸ್ ಹಾಗೂ ದಿ ಕಿಂಗ್ ಆಫ್ ಬಾಲಿವುಡ್ ಹೀಗೆ ಹತ್ತಾರು ಬಿರುದುಗಳನ್ನು ಹೊತ್ತು ಬಾಲಿವುಡ್ ಚಿತ್ರರಂಗದಲ್ಲಿ ಈಗಲೂ ಮಸ್ತ್ ಮಿಂಚುತ್ತಿರುವ ನಟ ಶಾರುಖ್ ಖಾನ್, ತಮ್ಮ ಹುಟ್ಟುಹಬ್ಬವನ್ನು ಇಂದು (02 ನವೆಂಬರ್ 2012) ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹುಟ್ಟುಹಬ್ಬವೆಂದರೆ ಬಾಲಿವುಡ್ ಚಿತ್ರಗಳ ಅಭಿಮಾನಿಗಳಿಗೆ ಚಿಕ್ಕ ಸುದ್ದಿಯೇನಲ್ಲ.

  80ರ ದಶಕದ ಕೊನೆಯಲ್ಲಿ ಹಿಂದಿ ಸೀರಿಯಲ್ ಲೋಕಕ್ಕೆ ಕಾಲಿಟ್ಟ ಶಾರುಖ್ ಖಾನ್ 1992 ರಲ್ಲಿ 'ದೀವಾನಾ' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಮುಂದೆ, ಶಾರುಖ್ ಖಾನ್ ಇಂದು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿರುವ ಮಟ್ಟಿಗೆ ಬೆಳೆದಿರುವ ಕಥೆ ಸಾಕಷ್ಟು ಪರಿಶ್ರಮ ಹಾಗೂ ಸಾಧನೆಯ ಸಂಗಮ. 'ದೀವಾನಾ' ಸೂಪರ್ ಹಿಟ್ ದಾಖಲಿಸುವುದರೊಂದಿಗೆ ತಮ್ಮ ಯಶಸ್ವಿ ಯಾತ್ರೆ ಪ್ರಾರಂಭಿಸಿದ ಶಾರುಖ್ ನಂತರ ಹಿಂತಿರುಗಿ ನೋಡುವ ಪ್ರಮೇಯ ಎದುರಾಗಲಿಲ್ಲ.

  1993 ರಲ್ಲಿ ತೆರೆಗೆ ಬಂದ 'ಡರ್' ಮತ್ತು 'ಬಾಜಿಗರ್' ಚಿತ್ರಗಳ ಯಶಸ್ಸು ಶಾರುಖ್ ಖಾನ್ ಅವರನ್ನು ಬಾಲಿವುಡ್ ನಲ್ಲಿ ಯಶಸ್ವಿ ನಾಯಕನ ಸ್ಥಾನಕ್ಕೆ ಕೊಂಡೊಯ್ಯಿತು. ನಂತರ 1994 ರಲ್ಲಿ 'ಅಂಜಾಮ್' ಬಂದ ನಂತರ, 1995 ರಲ್ಲಿ ತೆರೆಗೆ ಬಂದ ಶಾರುಖ್ ಖಾನ್ ಹಾಗೂ ಕಾಜೋಲ್ ಅಭಿನಯದ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೇ' ಬಾಲಿವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿತು. ಅಷ್ಟೇ ಅಲ್ಲ, 17 ವರ್ಷಗಳ ಹಿಂದೆ ತೆರೆಕಂಡ ಈ ಚಿತ್ರ ಇಂದಿಗೂ (ಮುಂಬೈನ ಶಿವಾಜಿ ಚಿತ್ರಮಂದಿರದಲ್ಲಿ) ಸತತ ಪ್ರದರ್ಶನ ಕಾಣುತ್ತಿರುವ ಮೂಲಕ ಶಾರುಖ್ ಹೆಸರನ್ನು ಸುವಾರ್ಣಾಕ್ಷರದಲ್ಲಿ ಬರೆದಿದೆ.

  ಅದಾದ ನಂತರವೂ ತೆರೆಗೆ ಬಂದ ಶಾರುಖ್ ಸಾಕಷ್ಟು ಚಿತ್ರಗಳು ಯಶಸ್ವಿಯಾಗಿವೆ. ದಿಲ್ ತೋ ಪಾಗಲ್ ಹೈ, ಚಕ್ ದೇ, ಸ್ವದೇಸ್ ಮುಂತಾದ ಚಿತ್ರಗಳು ಶಾರುಖ್ ಅವರನ್ನು ಮತ್ತೂ ಎತ್ತರೆತ್ತರಕ್ಕೆ ಕೊಂಡೊಯ್ದು ಸೂಪರ್ ಸ್ಟಾರ್ ಸ್ಥಾನದಲ್ಲಿ ಪ್ರತಿಷ್ಠಾಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಂದ 'ರಾ ಒನ್' ಚಿತ್ರ ನಿರೀಕ್ಷೆಯಷ್ಟು ಯಶಸ್ವಿಯಾಗದಿದ್ದರೂ ಫ್ಲಾಪ್ ಆಗಿಲ್ಲ. ಇದೀಗ 'ಜಬ್ ತನ್ ಜಾನ್' ಹೊಸ ಚಿತ್ರದೊಂದಿಗೆ ತೆರೆಯ ಮೇಲೆ ದರ್ಶನ ನೀಡಲು ಶಾರುಖ್ ಸಜ್ಜಾಗಿದ್ದಾರೆ.

  ನವೆಂಬರ್ 25, 1991ರಲ್ಲಿ ಗೌರಿ ಖಾನ್ ಅವರನ್ನು ಗೌರಿ ಖಾನ್ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿ ಸುಖಿ ಸಂಸಾರ ನಡೆಸುತ್ತಿರುವ ಶಾರುಖ್ ಖಾನ್, ಇಂದು ಹುಟ್ಟುಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಬಿಡುಗಡೆಯಾಗಲಿರುವ 'ಜಬ್ ತಕ್ ಹೈ ಜಾನ್' ಚಿತ್ರದ ಮೇಲೆ ಭಾರಿ ನಿರೀಕ್ಷೆಯಿಟ್ಟಿರುವ ಶಾರುಖ್ ಖಾನ್, ಈ ಚಿತ್ರದಲ್ಲಿ ಕತ್ರಿನಾ ಕೈಫ್ ಅವರೊಂದಿಗೆ ನಟಿಸಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರವು ಎಷ್ಟರಮಟ್ಟಿಗೆ ಯಶಸ್ಸು ಕಾಣಲಿದೆಯೋ! ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿರುವ ಶಾರುಖ್ ಖಾನ್ ಅವರಿಗೆ 'ಒನ್ ಇಂಡಿಯಾ ಕನ್ನಡ'ದ ಶುಭ ಹಾರೈಕೆಗಳು. (ಒನ್ ಇಂಡಿಯಾ ಕನ್ನಡ)

  English summary
  Bollywood Super Star Shahrukh Khan celebrating his Birthday Today on 02 November 2012. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X