For Quick Alerts
  ALLOW NOTIFICATIONS  
  For Daily Alerts

  ಖಾನ್ ತ್ರಯರು ಒಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಸಲ್ಮಾನ್ ಖಾನ್

  |

  ಬಾಲಿವುಡ್ ನ ಖಾನ್ ತ್ರಯರು ಎಂದೇ ಕರೆಸಿಕೊಳ್ಳುವ ಸ್ಟಾರ್ಸ್ ಅಂದರೆ ಸಲ್ಮಾನ್ ಖಾನ್, ಆಮೀರ್ ಖಾನ್ ಮತ್ತು ಶಾರುಖ್ ಖಾನ್. ಸುಮಾರು ಮೂರು ದಶಕಗಳಿಂದ ಬಾಲಿವುಡ್ ಚಿತ್ರರಂಗವಾಳುತ್ತಿರುವ ಈ ಮೂವರು ಖಾನ್ ಗಳ ಹವಾ ಈಗ ಕಡಿಮೆಯಾಗಿದೆ. ಬಾಲಿವುಡ್ ನಲ್ಲೀಗ ಹೊಸ ಬಗೆಯ ಸಿನಿಮಾಗಳು, ಹೊಸ ಸ್ಟಾರ್ ಗಳು ರಾರಾಜಿಸುತ್ತಿದ್ದಾರೆ.

  ಕಿಚ್ಚ ಸುದೀಪ್ ಗೆ ದುಬಾರಿ ಉಡುಗೊರೆ ನೀಡಿದ ನಟ ಸಲ್ಮಾನ್ ಖಾನ್ಕಿಚ್ಚ ಸುದೀಪ್ ಗೆ ದುಬಾರಿ ಉಡುಗೊರೆ ನೀಡಿದ ನಟ ಸಲ್ಮಾನ್ ಖಾನ್

  ಸುಮಾರು ಮೂರು ದಶಕಗಳಿಂದ ಬಾಲಿವುಡ್ ಚಿತ್ರರಂಗವಾಳುತ್ತಿದ್ದ ಈ ಮೂವರು ಖಾನ್ ಗಳು ಇದುವರೆಗೂ ಒಟ್ಟಿಗೆ ಒಂದೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್ ಈ ಮೂವರು ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂದು ಅಭಿಮಾನಿಗಳು ಅನೇಕ ವರ್ಷಗಳಿಂದ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೀಗ ಈ ಬಗ್ಗೆ ಮಾತನಾಡಿರುವ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

  3 ಖಾನ್ ಗಳನ್ನು ಒಟ್ಟಿಗೆ ಕರೆತರುವುದು ಸವಾಲಿನ ಕೆಲಸ

  3 ಖಾನ್ ಗಳನ್ನು ಒಟ್ಟಿಗೆ ಕರೆತರುವುದು ಸವಾಲಿನ ಕೆಲಸ

  ಮೂವರು ಸ್ಟಾರ್ ನಟರನ್ನು ಒಂದೆ ಸಿನಿಮಾದಲ್ಲಿ ಕರೆತರುವುದು ಒಂದು ಸವಾಲಿನ ಕೆಲಸ. ಒಬ್ಬ ನಟನ ಪಾತ್ರ ಕೊಂಚ ಕಡಿಮೆಯಾದರು ಅವರ ಅಭಿಮಾನಿಗಳು ರೊಚ್ಚಿಗೇಳುತ್ತಾರೆ. ಮೂವರನ್ನು ಸಮಾನವಾಗಿ ನಿಭಾಯಿಸಿಕೊಂಡು ಸಿನಿಮಾ ಮಾಡಬೇಕು. ಬಾಲಿವುಡ್ ನಲ್ಲಿ ಇದು ದೊಡ್ಡ ವಿಚಾರವಲ್ಲದಿರಬಹುದು, ಆದರೂ ಈ ಮೂವರು ಖಾನ್ ಗಳು ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

  ಒಟ್ಟಿಗೆ ಸಿನಿಮಾ ಮಾಡಲು ಸಾಧ್ಯವಿಲ್ಲ

  ಒಟ್ಟಿಗೆ ಸಿನಿಮಾ ಮಾಡಲು ಸಾಧ್ಯವಿಲ್ಲ

  ಖಾನ್ ತ್ರೇಯರು ಒಟ್ಟಿಗೆ ಒಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಲ್ಮಾನ್ ಖಾನ್ ಚಿತ್ರಾಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದಾರೆ. ಇದಕ್ಕೆ ಕಾರಣ ಕೂಡ ಬಿಚ್ಚಿಟ್ಟಿದ್ದಾರೆ ಸಲ್ಮಾನ್. ಮೂವರು ಸ್ಟಾರ್ ನಟರು ಒಟ್ಟಿಗೆ ಸಿನಿಮಾ ಮಾಡಬೇಕು ಅಂದರೆ ದೊಡ್ಡ ಮೊತ್ತದ ಬಜೆಟ್ ಬೇಕಾಗುತ್ತೆ ಎಂದು ಹೇಳಿದ್ದಾರೆ.

  ಅಬ್ಬಬ್ಬಾ! ಬಾಲಿವುಡ್ ಸ್ಟಾರ್ಸ್ ಬಾಡಿಗಾರ್ಡ್ಸ್ ಸಂಬಳ ಕೋಟಿ ಕೋಟಿ, ಯಾರು ಹೆಚ್ಚು?ಅಬ್ಬಬ್ಬಾ! ಬಾಲಿವುಡ್ ಸ್ಟಾರ್ಸ್ ಬಾಡಿಗಾರ್ಡ್ಸ್ ಸಂಬಳ ಕೋಟಿ ಕೋಟಿ, ಯಾರು ಹೆಚ್ಚು?

  ಕಾರಣ ಬಿಚ್ಚಿಟ್ಟ ಸಲ್ಲು

  ಕಾರಣ ಬಿಚ್ಚಿಟ್ಟ ಸಲ್ಲು

  20,000 ಚಿತ್ರಮಂದಿರಗಳು ಬೇಕಾಗುತ್ತೆ. ಸದ್ಯ ನಾವು 5 ರಿಂದ 6 ಸಾವಿರ ಚಿತ್ರಗಳಲ್ಲಿ ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಇದೆಲ್ಲ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ಇಂದಿನ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳು ಸೆಲೆಬ್ರಿಟಿಗಳ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತಿದೆ ಎನ್ನುವ ಬಗ್ಗೆಯು ಪ್ರತಿಕ್ರಿಯೆ ನೀಡಿದ್ದಾರೆ.

  ಸಾಮಾಜಿಕ ಜಾಲತಾಣಗಳ ಬಗ್ಗೆ ಬೇಸರ

  ಸಾಮಾಜಿಕ ಜಾಲತಾಣಗಳ ಬಗ್ಗೆ ಬೇಸರ

  ನಮ್ಮ ಹಿರಿಯರು ಏನು ಮಾಡಿದ್ದಾರೆ. ನಾವು ಅದನ್ನು ಮಾಡಲು ಸಾಧ್ಯವಿಲ್ಲ. ನಾವೀಗ ಜೈಲಿನಲ್ಲಿ ಇದ್ದೀವಿ. ಯಾವಾಗಲು ಸೆರೆಹಿಡಿಯಲ್ಪಟ್ಟಿರುತ್ತೇವೆ. ನಮ್ಮ ಹಿರಿಯರು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಹೋಗಬಹುದಿತ್ತು. ಈಗ ತುಂಬಾ ಕಷ್ಟಕರವಾಗುತ್ತೆ. ಸಾಮಾಜಿಕ ಮಾಧ್ಯಮವು ಮಿತಿಯಲ್ಲಿರಬೇಕು. ಈಗ ಸೆಲೆಬ್ರಿಟಿಗಳ, ಸ್ಟಾರ್ಸ್ ರಹಸ್ಯ ಬಯಲಾಗುತ್ತೆ" ಎಂದು ಹೇಳಿದ್ದಾರೆ.

  ಶಾರುಖ್ ಖಾನ್ ಮತ್ತೆ ಸಿನಿಮಾ ಮಾಡುವಂತೆ ಅಭಿಮಾನಿಗಳ ಅಭಿಯಾನಶಾರುಖ್ ಖಾನ್ ಮತ್ತೆ ಸಿನಿಮಾ ಮಾಡುವಂತೆ ಅಭಿಮಾನಿಗಳ ಅಭಿಯಾನ

  ಆಮೀರ್-ಶಾರುಖ್ ಸಿನಿಮಾ ಮಾಡಿಲ್ಲ

  ಆಮೀರ್-ಶಾರುಖ್ ಸಿನಿಮಾ ಮಾಡಿಲ್ಲ

  ಖಾನ್ ತ್ರೇಯರು ಒಟ್ಟಿಗೆ ಬರ್ತಾರೆ ಎನ್ನುವ ಕನಸಿಟ್ಟುಕೊಂಡಿದ್ದ ಅಭಿಮಾನಿಗಳ ಆಸೆಗೆ ತಣ್ಣೀರೆಚಿದಂತೆ ಆಗಿದೆ. ಸಲ್ಮಾನ್ ಖಾನ್ ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಇಬ್ಬರ ಜೊತೆಯೂ ಸಿನಿಮಾ ಮಾಡಿದ್ದಾರೆ. ಆದರೆ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರು ಪೂರ್ಣಪ್ರಮಾಣದ ಸಿನಿಮಾ ಇಂದಿಗೂ ಮಾಡಿಲ್ಲ. ಸಲ್ಮಾನ್ ಖಾನ್ ಸದ್ಯ ರಾಧೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮಾಡುತ್ತಿದ್ದಾರೆ. ಆದರೆ ಸತತ ಸೋಲಿನಿಂದ ಕಂಗೆಟ್ಟಿರುವ ಶಾರುಖ್ ಖಾನ್ ಯಾವುದೆ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ಸದ್ಯ ಶಾರುಖ್ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.

  English summary
  Bollywood star Actors Aamir Khan, Salman Khan, Shahrukh Khan can not make a film together Salman Khan said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X