ಸ್ಯಾಂಡಲ್‌ವುಡ್‌ನಲ್ಲಿ ಕೋಟಿಗಳಿಗೆ 'ಬರ' ಇರುವಾಗ '1081 ಕೋಟಿ' ಗಳಿಸಿದ ಬಾಲಿವುಡ್..!

ಬಾಲಿವುಡ್‌ನಲ್ಲಿ ಲಕ್ಷವೆಲ್ಲಾ ಅಲಕ್ಷ್ಯ. ಒಂದೆರಡು ಕೋಟಿಗಳಂತೂ ಕಾಲ ಕಸ. ಅಲ್ಲೇನೇ ಇದ್ದರೂ 100-200 ಕೋಟಿಗಳದ್ದೇ ಕಾರು ಬಾರು ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಕೊರೊನಾದ ನಂತರ ಬಾಲಿವುಡ್ಡಿಗೆ ಅಕ್ಷರಶ ಗರ ಬಡಿದಿತ್ತು. 2022ರಲ್ಲಿ ಕನ್ನಡ ಚಿತ್ರರಂಗ ಪಳ ಪಳ ಅಂತ ಹೊಳೆಯುತ್ತಿದ್ದಾಗ ಮಂಕಾಗಿದ್ದ ಹಿಂದಿ ಉದ್ಯಮ, ಚೇತರಿಸಿಕೊಂಡಿದ್ದು ಕಳೆದ ವರ್ಷವಷ್ಟೇ. ಜವಾನ್..ಪಠಾಣ್.. ಗದರ್‌ 2.. ಅನಿಮಲ್.. ಹೀಗೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ಗೆಲುವಿನ ನಗೆ ಬೀರಿದ್ದ ಬಾಲಿವುಡ್ ಈ ವರ್ಷ ಕೂಡ ಮೊದಲಾರ್ಧದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ನಿಜಾ.. ಕಳೆದ ವರ್ಷ ಸಿಕ್ಕ ಆರಂಭ ಈ ವರ್ಷ ಬಾಲಿವುಡ್‌ಗೆ ಸಿಗಲಿಲ್ಲ. ದೊಡ್ಡ ಸ್ಟಾರ್‌ಗಳ ಸಿನಿಮಾ ತೆರೆಗೆ ಬರಲಿಲ್ಲ. ಆದರೆ ಮೊದಲ ತಿಂಗಳಾಂತ್ಯಕ್ಕೆ ಬಂದ ಫೈಟರ್ ನಿಂದ ಬಾಲಿವುಡ್‌ಗೆ ಬೇಕಿದ್ದ ಸ್ಟಾರ್ಟ್ ಸಿಕ್ತು. ಆ ನಂತರ ಶಾಹೀದ್ ಕಪೂರ್- ಕೃತಿ ಸನೋನ್ ಅಭಿನಯದ ತೇರಿ ಬಾತೊಂ ಮೇ ಐಸೆ ಉಲ್ಜಾ ಜಿಯಾ ಚಿತ್ರಕ್ಕೆ ಅಂದುಕೊಂಡ ಯಶಸ್ಸು ಸಿಗಲಿಲ್ಲ. ಹಾಗಂಥ ಸಿನಿಮಾ ಸಂಪೂರ್ಣ ನೆಲಕಚ್ಚಲೂ ಇಲ್ಲ. ಹಾಕಿದ ಬಂಡವಾಳದ ಮೇಲೆ ಚೂರು-ಪಾರು ಲಾಭ ಮಾಡಿದ ಈ ಚಿತ್ರ 84 ಕೋಟಿಯನ್ನು ಗಳಿಸಿತ್ತು.

bollywoods-first-half-of-2024-was-marked-by-sleeper-hits-but-lacked-major-blockbusters

ಇನ್ನೂ .. ಬಾಲಿವುಡ್‌ಗೆ ಮೊದಲೆಲ್ಲ ಕಮರ್ಷಿಯಲ್ ಸಿನಿಮಾಗಳು ಕೈ ಹಿಡಿಯುತ್ತಿದ್ದವು. ಆದರೆ, ಈ ಬಾರಿ ಮಾತ್ರ ಹಿಂದಿ ಉದ್ಯಮಕ್ಕೆ ಆಸರೆಯಾಗಿ ನಿಂತಿದ್ದು ಪ್ರಯತ್ನ ಮತ್ತು ಪ್ರಯೋಗಗಳು. ಇದಕ್ಕೆ ಕೈಗನ್ನಡಿ ಎಂಬಂತೆ ರಾಜಕೀಯ ವಲಯದಲ್ಲಿ ಸದ್ದು ಮಾಡಿದ, ಯಾವ ಸೂಪರ್ ಸ್ಟಾರ್‌ಗಳಿರದ.. ಆರ್ಟಿಕಲ್ 370 ಸಿನಿಮಾ 77 ಕೋಟಿಯನ್ನು ಗಳಿಸಿತ್ತು.ಇನ್ನೂ ಕರೀನಾ ಕಪೂರ್, ಟಬು ಮತ್ತು ಕೃತಿ ಸನೋನ್ ಅಭಿನಯದ ಮಹಿಳಾ ಪ್ರಧಾನ ಸಿನಿಮಾ ಕ್ರ್ಯೂ 82 ಕೋಟಿಯನ್ನು ಗಳಿದರೆ, ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಆಮೀರ್ ಖಾನ್ ನಿರ್ಮಾಣ ಮಾಡಿದ್ದ ಲಾಪತಾ ಲೇಡಿಸ್ 20 ಕೋಟಿ ಗಳಿಸುವ ಮೂಲಕ ಸಾಧಾರಣವಾಗಿ ಹಿಟ್‌ ಆಯಿತು. ಕುನಾಲ್ ಖೇಮು ನಿರ್ದೇಶನದ ಚೊಚ್ಚಲ ಚಿತ್ರ ಮಡಗಾಂವ್ ಎಕ್ಸ್‌ಪ್ರೆಸ್ 36 ಕೋಟಿ ಗಳಿಸುವ ಮೂಲಕ ಸಾಧಾರಣ ಯಶಸ್ಸು ಕಂಡ ಸಿನಿಮಾಗಳ ಪಟ್ಟಿಗೆ ಸೇರಿಕೊಂಡಿತು.

ಮುಂಜ್ಯಾ, ಬಾಲಿವುಡ್‌ನಲ್ಲಿ ಈ ವರ್ಷ ನಡೆದ ಪವಾಡ. ಯಾವ ಸೂಪರ್ ಸ್ಟಾರ್‌ಗಳಿರದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಕೊಳ್ಳೆ ಹೊಡೆಯಿತು. ಈ ಮೂಲಕ ಹೊಸ ಇತಿಹಾಸವನ್ನೂ ಬರೆಯಿತು. ಇನ್ನೂ ಕಾರ್ತಿಕ್ ಆರ್ಯನ್ ಅಭಿನಯದ ಚಂದು ಚಾಂಪಿಯನ್ ಮೇಲೆ, ನಿರೀಕ್ಷೆ ತುಸು ಹೆಚ್ಚೇ ಇತ್ತಾದರೂ.. 60 ಕೋಟಿ ಗಳಿಸುವಷ್ಟರಲ್ಲಿಯೇ ಚಾಂಪಿಯನ್ ಸುಸ್ತಾಗಿ ಹೋದ. ಈ ಎಲ್ಲ ಸಿನಿಮಾಗಳ ನಡುವೆ ಅಜಯ್ ದೇವಗನ್-ಆರ್.ಮಾಧವನ್ ಮತ್ತು ಜ್ಯೋತಿಕಾ ಅಭಿನಯದ ಶೈತಾನ್ ನೋಡಲು ನೂಕು ನುಗ್ಗಲಿನ ವಾತಾವರಣ ನಿರ್ಮಾಣವಾಗಿತ್ತು. ವಿಶ್ವದೆಲ್ಲೆಡೆ 200 ಕೋಟಿ ಗಳಿಸಿದ ಈ ಚಿತ್ರ ಭಾರತದಲ್ಲಿ 140 ಕೋಟಿಯನ್ನು ಗಳಿಸಿತು.

bollywoods-first-half-of-2024-was-marked-by-sleeper-hits-but-lacked-major-blockbusters

ಉಳಿದಂತೆ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಜೊತೆ ಬಡೇ ಮಿಯಾ ಚೋಟೆ ಮಿಯಾ ಠುಸ್ ಪಟಾಕಿ ಆಯಿತು. ಈ ಮೂಲಕ ಅಕ್ಷಯ್ ಕುಮಾರ್ ಖಾತೆಗೆ ಮತ್ತೊಂದು ಸೋಲು ಜಮೆ ಆಯಿತು. ಇನ್ನೂ ಅಜಯ್ ದೇವಗನ್ ಅಭಿನಯದ ಮೈದಾನ್ ಚಿತ್ರದ ವ್ಯಥೆ ಬೇರೆಯೇ ಇದೆ. ವಿಮರ್ಷಕರು ಹಾಗೂ ಪ್ರೇಕ್ಷಕರು ಅಜಯ್ ದೇವಗನ್ ಅಭಿನಯದ ಈ ಸ್ಫೋಟ್ಸ್ ಡ್ರಾಮಾವನ್ನ ಮೆಚ್ಚಿ ಕೊಂಡಾಡುತ್ತಿದ್ದಾರೆ. ಆದರೆ.. ಗಲ್ಲಾಪೆಟ್ಟಿಗೆಯಲ್ಲಿ ದುಡ್ಡಿನ ಸದ್ದು ಮಾತ್ರ ಕೇಳಿಸಲಿಲ್ಲ. ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಯೋಧ ಬಂದಿದ್ದು ಹೋಗಿದ್ದು ಗೊತ್ತಾಗಲಿಲ್ಲ.

ಅಂದ್ಹಾಗೇ ಕಳೆದ ವರ್ಷ ಮೊದಲ 06 ತಿಂಗಳಿನಲ್ಲಿ ಬಾಲಿವುಡ್‌ನಲ್ಲಿ 1450 ಕೋಟಿ ಹಣದ ಮಳೆ ಬಿದ್ದಿತ್ತು. ಈ ವರ್ಷ ಈ ಸಂಖ್ಯೆ 1081ಕೋಟಿ ಇದೆ. ಒಟ್ಟಾರೆ ಗಳಿಕೆಯಲ್ಲಿ ಹಿಂದಿನ ವರ್ಷಕ್ಕಿಂತ 25 ಪ್ರತಿ ಶತದಷ್ಟು ಇಳಿಕೆಯಾಗಿದೆ. ಆದರೆ, ಕನ್ನಡ- ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಹೋಲಿಸಿದರೆ, ಬಾಲಿವುಡ್‌ ಈ ವರ್ಷದ ಫಸ್ಟ್ ಹಾಫ್‌ನಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡಿದೆ. ಮಲಯಾಳಂ ಚಿತ್ರರಂಗದ ಜೊತೆ ಹೆಜ್ಜೆ ಹಾಕುತ್ತಿದೆ.

bollywoods-first-half-of-2024-was-marked-by-sleeper-hits-but-lacked-major-blockbusters

ಒಟ್ನಲ್ಲಿ ಈ ವರ್ಷ ಸ್ಯಾಂಡಲ್ವುಡ್‌ನ ಸಾಧನೆ ಅಷ್ಟಕಷ್ಟೇ. ಅದರಲ್ಲಿಯೂ ಜೂನ್‌ನ ಆರಂಭದಿಂದ ಇಲ್ಲಿ ಜನ ಚಿತ್ರಗಳ ಬಗ್ಗೆ ಕಡಿಮೆ, ಇಲ್ಲಾಗುತ್ತಿರುವ ವಿವಾದಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಮೊದಲೇ ಕನ್ನಡ ಚಿತ್ರಗಳಿಂದ ದೂರವಾದ ಪ್ರೇಕ್ಷಕರು ಇನ್ನಷ್ಟು ದೂರವಾಗುತ್ತಿದ್ದಾರೆ. ಇದೆಲ್ಲದರ ಲಾಭ ಅಕ್ಕ-ಪಕ್ಕದ ರಾಜ್ಯದವರಿಗೆ ಆಗುತ್ತಿದೆ. ಅವರ ಭಾಷೆಯ ಸಿನಿಮಾಗಳು ಇಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಇತ್ತೀಚಿನ ಮುಂಜ್ಯಾ ಇದಕ್ಕೆ ಅತ್ಯುತ್ತಮ ಉದಾಹರಣೆ. ಇನ್ನೂ 1081ಕೋಟಿ ಗಳಿಸಿದ ಬಾಲಿವುಡ್‌ ಈ ವರ್ಷದ ಅಂತ್ಯದವರೆಗೆ ಎಷ್ಟು ಹಣ ಗಳಿಸುತ್ತೆ ಅನ್ನುವುದು ಸದ್ಯದ ಕುತೂಹಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X