twitter
    For Quick Alerts
    ALLOW NOTIFICATIONS  
    For Daily Alerts

    ಬೆಳಗ್ಗೆ ಸೀರಿಯಲ್ ನಟಿ, ರಾತ್ರಿ ಆಟೋ ಡ್ರೈವರ್ ಕೆಲಸ

    |

    ''ನಿಮಗೆ ಶ್ರೇಷ್ಟವಾದ ಕೆಲಸವನ್ನು ಮಾಡಲು ಆಗದಿದ್ದರೆ, ಮಾಡುವ ಕೆಲಸವನ್ನೇ ಶ್ರೇಷ್ಟವಾಗಿ ಮಾಡಿ'' ಎನ್ನುವ ಮಾತಿದೆ. ಯಾವುದೇ ಕೆಲಸ ಆಗಲಿ ಅದನ್ನು ಸಣ್ಣದಾಗಿ ನೋಡದೆ, ಚೆನ್ನಾಗಿ ಮಾಡಬೇಕು. ಅದೇ ಇಲ್ಲಿ ಇಲ್ಲೊಬ್ಬ ಮಹಿಳೆ ತಮ್ಮ ಕೆಲಸ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ.

    ಲಕ್ಷ್ಮಿ ಎನ್ನುವ ಮಹಿಳೆ ಮರಾಠಿ ಭಾಷೆಯ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಾರೆ. ಅದರ ಜೊತೆಗೆ ಜೀವನ ನಡೆಸಲು ಪಾರ್ಟ್ ಟೈಮ್ ಆಟೋ ಡ್ರೈವರ್ ಆಗಿದ್ದಾರೆ. ಬೆಳಗ್ಗೆ ಧಾರಾವಾಹಿಗಳಲ್ಲಿ ನಟನೆ ಮಾಡುವ ಅವರು ರಾತ್ರಿ ಆಟೋ ಚಾಲಕಿಯಾಗಿ ಕೆಲಸ ಮಾಡುತ್ತಿದ್ದಾರೆ.

    ವಯಸ್ಸಾದ ಸಲ್ಮಾನ್ ಖಾನ್ ನೋಡಿ ಅಭಿಮಾನಿಗಳು ಶಾಕ್! ವಯಸ್ಸಾದ ಸಲ್ಮಾನ್ ಖಾನ್ ನೋಡಿ ಅಭಿಮಾನಿಗಳು ಶಾಕ್!

    ಅವರ ಈ ಕೆಲಸ ನೋಡಿ ಬಾಲಿವುಡ್ ಖ್ಯಾತ ನಟ ಬೊಮ್ಮನ್ ಇರಾನಿ ಮೆಚ್ಚಿಕೊಂಡಿದ್ದಾರೆ. ಆಕೆಯ ಆಟೋ ಹತ್ತಿ ಪ್ರಯಾಣ ಮಾಡಿದ್ದ ಅವರು ಲಕ್ಷ್ಮಿ ವಿಡಿಯೋ ಹಾಗೂ ಆಕೆಯ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    boman irani inspired by laxmi marathi actress who also a rickshaw driver

    ''ಒಬ್ಬ ಅದ್ಭುತವಾದ ಸೂಪರ್ ಮಹಿಳೆಯನ್ನು ನಾನು ಭೇಟಿ ಮಾಡಿದೆ. ಮರಾಠಿ ಧಾರಾವಾಹಿಯಲ್ಲಿ ನಟಿಸುವ ಲಕ್ಷ್ಮಿ ಆಟೋ ಡ್ರೈವರ್ ಸಹ ಹೌದು. ಅವರು ನಿಜವಾದ ಸ್ಫೂರ್ತಿ ಹಾಗೂ ರಿಯಲ್ ಹೀರೋ.'' ಎಂದಿರುವ ಅವರು ಲಕ್ಷ್ಮಿಗೆ ಶುಭ ಹಾರೈಸಿದ್ದಾರೆ.

    ಲಕ್ಷ್ಮಿಯವರ ಈ ಕೆಲಸ ಹಾಗೂ ಆಕೆಯನ್ನು ಪರಿಚಯ ಮಾಡಿಸಿದ ಬೊಮ್ಮನ್ ಇರಾನಿಯವರಿಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    English summary
    Bollywood actor Boman Irani inspired by Laxmi marathi actress who also a rickshaw driver.
    Sunday, May 5, 2019, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X