twitter
    For Quick Alerts
    ALLOW NOTIFICATIONS  
    For Daily Alerts

    ಅಶ್ಲೀಲ ವಿಡಿಯೋ ಪ್ರಕರಣ: ನಟಿ ಗೆಹನಾ ವಸಿಷ್ಠ್ ಜಾಮೀನು ಅರ್ಜಿ ವಜಾ

    |

    ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ-ಮಾಡೆಲ್ ಗೆಹನಾ ವಸಿಷ್ಠ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈ ಕೋರ್ಟ್ ತಿರಸ್ಕರಿಸಿದೆ. ಹೈ ಕೋರ್ಟ್‌ನಲ್ಲಿ ನಟಿಯ ಜಾಮೀನು ಅರ್ಜಿ ನಿರಾಕರಣೆ ಆಗುತ್ತಿದ್ದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಟಿಯ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ.

    ಈ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ''ಟಿವಿ ನಟಿ ಗೆಹನಾ ವಸಿಷ್ಠ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಆಕೆಯ ವಕೀಲರು ಹೇಳಿದ್ದಾರೆ'' ಎಂದು ಟ್ವೀಟ್ ಮಾಡಿದೆ.

    ನಟಿಯನ್ನು ಮುಂಬೈ ಕ್ರೈಂ ವಿಭಾಗದ ಪ್ರಾಪರ್ಟಿ ಸೆಲ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆಯುವುದಕ್ಕೂ ಮುಂಚಿತವಾಗಿಯೇ ನಟಿ ಹೈ ಕೋರ್ಟ್ ಮೊರೆ ಹೋಗಿದ್ದರು. ಆಗಸ್ಟ್ 24 ರಂದು ನಟಿಯ ಜಾಮೀನು ಅರ್ಜಿ ವಿಚಾರಣೆ ಮಾಡಿದ್ದ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಈಗ, ಸೆಪ್ಟೆಂಬರ್ 7 ರಂದು ನ್ಯಾಯಮೂರ್ತಿ ಎಸ್ ಕೆ ಶಿಂಧೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದರು.

    Bombay HC dismisses Gehana Vasisths bail plea in Connection with the porn films case

    ಇದಕ್ಕೂ ಮುಂಚೆ ನಟಿಯ ಪರ ವಾದ ಮಂಡಿಸಿದ್ದ ವಕೀಲ ಅಭಿಷೇಕ್ ಯೆಂಡೆ ''ಈ ಪ್ರಕರಣಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಎಫ್‌ಐಆರ್‌ಗಳಲ್ಲಿ ಈ ಹಿಂದೆ ನಾಲ್ಕು ತಿಂಗಳ ಕಾಲ ನಟಿ ಗೆಹನಾ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ ಈಗ ಹೊಸದೊಂದು ಎಫ್‌ ಐ ಆರ್ ಆಧರಿಸಿ ನಟಿಯನ್ನು ಬಂಧಿಸಲು ಮುಂಬೈ ಪೊಲೀಸರು ಮುಂದಾಗಿದ್ದಾರೆ' ಎಂದು ಹೈಕೋರ್ಟ್‌ಗೆ ತಿಳಿಸಿದರು.

    ''ಈ ಕೇಸ್‌ನಲ್ಲಿ ನಟಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಒಂದೇ ಆರೋಪದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ'' ಎಂದು ನಟಿ ಪರ ವಕೀಲರು ವಾದ ಮಂಡಿಸಿದರು. ಈ ಹಿಂದೆ ಸೆಷನ್ ನ್ಯಾಯಾಲಯ ಜಾಮೀನು ನೀಡಿದ ಸಂದರ್ಭದಲ್ಲಿಯೇ ಕಠಿಣ ಷರತ್ತುಗಳನ್ನು ವಿಧಿಸಿದೆ. ಆ ಷರತ್ತು ಅಡಿಯಲ್ಲಿ ನಟಿ ಇದ್ದಾರೆ ಎಂದು ಹೈ ಕೋರ್ಟ್ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದರು.

    ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಮೂರು ಎಫ್‌ಐಆರ್ ದಾಖಲಿಸಿರುವ ಮುಂಬೈ ಪೊಲೀಸರು ಉದ್ಯಮಿ ರಾಜ್ ಕುಂದ್ರಾ ಸೇರಿದಂತೆ ಹಲವರನ್ನು ಅರೆಸ್ಟ್ ಮಾಡಿದ್ದಾರೆ. ಜುಲೈ 19 ರಂದು ಬಂಧನಕ್ಕೆ ಒಳಗಾದ ರಾಜ್ ಕುಂದ್ರಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಕೇಸ್‌ನ ತನಿಖೆ ವೇಳೆ ಗೆಹನಾ ವಸಿಷ್ಠ್ ಸಹ ಉದ್ಯಮಿ ಜೊತೆ ಕೈ ಜೋಡಿಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಯುವತಿಯರಿಗೆ, ಮಹಿಳೆಯರಿಗೆ ಆಮಿಷ ಒಡ್ಡಿದ್ದಳು ಮತ್ತು ಅಶ್ಲೀಲ ಸಿನಿಮಾಗಳಲ್ಲಿ ನಟಿಸುವಂತೆ ಒತ್ತಾಯಿಸಿದ್ದಳು ಎಂಬ ದೂರು ದಾಖಲಾಗಿದೆ.

    Bombay HC dismisses Gehana Vasisths bail plea in Connection with the porn films case

    ರಾಜ್ ಕುಂದ್ರಾ ಪರವಾಗಿದ್ದ ನಟಿ ಗೆಹನಾ

    ರಾಜ್ ಕುಂದ್ರಾ ಬಂಧನದ ಬಳಿಕ ನಟಿ ಗೆಹನಾ ವಸಿಸ್ತ್, ಕುಂದ್ರಾ ಪರವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. "ಬೋಲ್ಡ್ ಮತ್ತು ಎರೋಟಿಕಾ ಸಿನಿಮಾಗಳನ್ನು ಪೋರ್ನ್ ಸಿನಿಮಾಗಳಿಗೆ ಹೋಲಿಸಬೇಡಿ. ರಾಜ್ ಕುಂದ್ರಾ ಕಂಪೆನಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿದೆ. ರಾಜ್ ಕುಂದ್ರಾ ನಿರ್ಮಿಸಿದ ಆಪ್ ಗಳಲ್ಲಿ ಮೂರು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ಅವರು ಎಂದಿಗೂ ನನಗೆ ಇದನ್ನು ಮಾಡಿ ಎಂದು ಒತ್ತಾಯ ಮಾಡಿಲ್ಲ. ನಾನು ಮಾಡಿದ ಕೆಲಸದ ಪ್ರಕಾರ ನನಗೆ ಸಂಬಳ ನೀಡಲಾಗಿದೆ" ಎಂದು ಹೇಳಿದ್ದರು.

    ಅಂದ್ಹಾಗೆ, ನಟಿ ಗೆಹನಾ ವಸಿಸ್ತ್ ಈ ಹಿಂದೆಯೇ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಕೇಸ್‌ನಲ್ಲಿ ಐದು ತಿಂಗಳು ಕಾಲ ಜೈಲಿನಲ್ಲಿದ್ದರು ಗೆಹನಾ. ಈಗಲೂ ನಟಿಯ ಮೊಬೈಲ್, ಲ್ಯಾಪ್‌ಟ್ಯಾಪ್ ಪೋಲಿಸರ ವಶದಲ್ಲಿದೆ. ಇದೇ ಪ್ರಕರಣದಲ್ಲಿ ಈಗ ರಾಜ್ ಕುಂದ್ರಾ ಬಂಧನ ಆಗಿದೆ.

    English summary
    Bombay High Court rejects anticipatory bail application of actor-director GehanaVasisth in porn film racket case.
    Tuesday, September 7, 2021, 15:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X