twitter
    For Quick Alerts
    ALLOW NOTIFICATIONS  
    For Daily Alerts

    ದೇಶ ದ್ರೋಹ ಆರೋಪ: ಕಂಗನಾಗೆ ರಿಲೀಫ್ ಕೊಟ್ಟ ಬಾಂಬೆ ಹೈಕೋರ್ಟ್

    |

    ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ.

    ಈ ಪ್ರಕರಣ ಸಂಬಂಧ ಜನವರಿ 25ರವರೆಗೆ ಕಂಗನಾ ಸಹೋದರಿಯರನ್ನು ಬಂಧನ ಮಾಡದಂತೆ ಮತ್ತು ವಿಚಾರಣೆ ನಡೆಸದಂತೆ ಬಾಂಬೆ ಹೈಕೋರ್ಟ್ ಮುಂಬೈನ ಬಾಂದ್ರಾ ಪೊಲೀಸರಿಗೆ ಆದೇಶ ನೀಡಿದೆ. ನಟಿ ಕಂಗನಾ ಮತ್ತು ಸಹೋದರಿ ರಂಗೋಲಿ ಜನವರಿ 8ರಂದು ಬಿಗಿ ಭದ್ರತೆಯೊಂದಿಗೆ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದರು.

    ಕಾಪಿ ಕ್ಯಾಟ್ ಎಂದ ಕಂಗನಾ ಗೆ ತಾಪ್ಸಿ ಪನ್ನು ಟಾಂಗ್ಕಾಪಿ ಕ್ಯಾಟ್ ಎಂದ ಕಂಗನಾ ಗೆ ತಾಪ್ಸಿ ಪನ್ನು ಟಾಂಗ್

    ಮಧ್ಯಾಹ್ನ 1 ಗಂಟೆಯಿಂದ 3 ಗಂಟೆ ವರೆಗೆ ವಿಚಾರಣೆ ನಡೆಸಲಾಗಿತ್ತು. ಆದರೆ ಕಂಗನಾ ಸಹೋದರಿಯರು ವಿಚಾರಣೆ ಮುಗಿಯುವ ಮೊದಲೇ ಹೊರಟು ಹೋಗಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ದೀಪಿಕ್ ಠಾಕ್ರೆ ಸೋಮವಾರ ಆರೋಪ ಮಾಡಿದ್ದಾರೆ.

    Bombay HC ordered Bandra police to not summoned Kangana ranaut and sister Rangoli

    ನ್ಯಾಯಾಲಯದ ಮುಂದೆ ಕಂಗನಾ ಬಗ್ಗೆ ಆರೋಪ ಮಾಡಿದ ದೀಪಕ್ ಠಾಕ್ರೆ, 'ಕಂಗನಾ ನಾವು ವೃತ್ತಿಪರ ಕಮಿಟ್ ಮೆಂಟ್ ಹೊಂದಿದ್ದೇವೆ ಎಂದು ಹೇಳಿ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಹೊರಟು ಹೋಗಿದ್ದಾರೆ. ಹಾಗಾಗಿ ವಿಚಾರಣೆಗೆ ಮತ್ತೆ ಕರೆಯುತ್ತೇವೆ' ಎಂದು ಹೇಳಿದ್ದಾರೆ.

    ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ವಿಭಾಗೀಯ ಪೀಠವು 'ಎರಡು ಗಂಟೆಗಳ ಕಾಲ ತನಿಕೆ ಮಾಡಲು ಸಾಕಾಗುವಿದಿಲ್ಲವೇ, ಇನ್ನು ಎಷ್ಟು ಸಮಯ ಬೇಕು ನಿಮಗೆ? ಎಂದು ಪ್ರಶ್ನಿಸಿದ್ದಾರೆ.

    ಕೋಮು ದ್ವೇಷಹರಿಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ಕಂಗನಾ ಸಹೋದರಿಯರ ವಿರುದ್ಧ ಅಕ್ಟೋಬರ್ ನಲ್ಲಿ ದೇಶ ದ್ರೋಹ ಪ್ರಕರಣ ದಾಖಲಾಗಿದೆ.

    English summary
    Bombay HC ordered Bandra police to not summoned Kangana ranaut and sister Rangoli.
    Monday, January 11, 2021, 17:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X