ರಾಜ್ ಕುಂದ್ರಾ ಕೇಸ್: ಪೂನಂ ಪಾಂಡೆ, ಶೆರ್ಲಿನ್‌ಗೆ ನಿರೀಕ್ಷಣಾ ಜಾಮೀನು

ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿದ್ದು, ಹಲವು ನಟಿಯರ ಹೆಸರು ಈ ಕೇಸ್‌ನಲ್ಲಿ ತಳುಕು ಹಾಕಿಕೊಂಡಿದೆ. ಕುಂದ್ರಾಗೆ ನ್ಯಾಯಾಂಗ ಬಂಧನವಾಗುತ್ತಿದ್ದಂತೆ ನಟಿ ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾಗೆ ಬಂಧನದ ಭೀತಿ ಎದುರಾಗಿದ್ದು, ಮುಂಬೈ ಸೆಷನ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಪೂನಂ ಮತ್ತು ಶೆರ್ಲಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ, ''ಸೆಪ್ಟೆಂಬರ್ 20 ರವರೆಗೆ ಪೂನಂ ಮತ್ತು ಶೆರ್ಲಿನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಿಲ್ಲ'' ಎಂದು ಬಾಂಬೆ ಹೈಕೋರ್ಟ್ ಮಂಗಳವಾರ (ಜುಲೈ 27) ಆದೇಶಿಸಿದೆ. ಹಾಗಾಗಿ, ನಟಿಯರಿಬ್ಬರಿಗೂ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ. ಹಾಗಾದ್ರೆ, ಶೆರ್ಲಿನ್ ಚೋಪ್ರಾ ಪರ ವಕೀಲ ವಾದ ಏನಾಗಿತ್ತು? ಯಾವ ಅಂಶದ ಆಧಾರದಲ್ಲಿ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ? ಮುಂದೆ ಓದಿ...

ಶೆರ್ಲಿನ್‌ಗೆ ಸಮನ್ಸ್ ಕೊಟ್ಟಿದ್ದ ಮುಂಬೈ ಪೊಲೀಸ್

ಶೆರ್ಲಿನ್‌ಗೆ ಸಮನ್ಸ್ ಕೊಟ್ಟಿದ್ದ ಮುಂಬೈ ಪೊಲೀಸ್

ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟಿ ಶೆರ್ಲಿನ್ ಚೋಪ್ರಾಗೆ ಸೋಮವಾರ (ಜುಲೈ 26) ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಸಮನ್ಸ್ ಬರ್ತಿದ್ದಂತೆ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಹೋಗಿದ್ದರು. ಶೆರ್ಲಿನ್ ಜೊತೆ ಪೂನಂ ಪಾಂಡೆ ಸಹ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದರು.

ಎಫ್‌ಐಆರ್‌ನಲ್ಲಿ ಏನಿದೆ ಗೊತ್ತಿಲ್ಲ

ಎಫ್‌ಐಆರ್‌ನಲ್ಲಿ ಏನಿದೆ ಗೊತ್ತಿಲ್ಲ

ಶೆರ್ಲಿನ್ ಪರ ವಕೀಲ ಸಿದ್ದೇಶ್ ಬೋರ್ಕರ್, ''ತಮ್ಮ ಕಕ್ಷಿದಾರರಿಗೆ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಸಮನ್ಸ್ ನೀಡಿದ್ದಾರೆ. ಈ ಹಿಂದೆ ಇದೇ ರೀತಿ ಸಮನ್ಸ್ ನೀಡಿರುವವರನ್ನು ಸೆಕ್ಷನ್ 41ಎ ಅಡಿ ನೋಟಿಸ್ ನೀಡದೆಯೇ ವಶಕ್ಕೆ ಪಡೆಯಲಾಗಿದೆ. ಎಫ್‌ಐಆರ್‌ನಲ್ಲಿ ಏನಿದೆ ಎನ್ನುವ ಮಾಹಿತಿ ಶೆರ್ಲಿನ್ ಅವರಿಗಿಲ್ಲ. ಅವರಿಗೆ ಎಫ್‌ಐಆರ್‌ನ ಪ್ರತಿಯನ್ನೂ ನೀಡಲಾಗಿಲ್ಲ. ಅವರ ವಿರುದ್ಧ ಇರುವ ಆರೋಪಗಳನ್ನು ವಿವರಿಸಲಾಗಿಲ್ಲ'' ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಜಾಮೀನು ರಹಿತ ಕೇಸ್ ದಾಖಲಿಸಿರುವ ಅನುಮಾನ

ಜಾಮೀನು ರಹಿತ ಕೇಸ್ ದಾಖಲಿಸಿರುವ ಅನುಮಾನ

ಈ ಪ್ರಕರಣದ ಸಂಬಂಧ ಜಾಮೀನು ರಹಿತ ಕೆಲವೊಂದು ಆರೋಪಗಳನ್ನು ತಮ್ಮ ಮೇಲೆ ಹೊರಿಸಬಹುದು ಎನ್ನುವ ಭೀತಿಯನ್ನು ಶೆರ್ಲಿನ್ ವ್ಯಕ್ತಪಡಿಸಿದ್ದಾರೆ ಎಂದು ಶೆರ್ಲಿನ್ ಪರ ವಕೀಲ ಸಿದ್ದೇಶ್ ಬೋರ್ಕರ್ ನ್ಯಾಯಾಲಯದ ಮುಂದೆ ವಿವರಿಸಿದರು. ಶೆರ್ಲಿನ್ ಮನವಿ ಸ್ವೀಕರಿಸಿದ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ರಾಜ್ ಕುಂದ್ರಾ ವಿರುದ್ಧ ದೂರು ಕೊಟ್ಟಿದ್ದ ಶೆರ್ಲಿನ್

ರಾಜ್ ಕುಂದ್ರಾ ವಿರುದ್ಧ ದೂರು ಕೊಟ್ಟಿದ್ದ ಶೆರ್ಲಿನ್

ರಾಜ್ ಕುಂದ್ರಾ ಬಂಧನವಾಗಿರುವ ಕೇಸ್‌ನಲ್ಲಿ ನಟಿ ಶೆರ್ಲಿನ್ ಚೋಪ್ರಾ ಹೆಸರು ಅಂಟಿಕೊಂಡಿದೆ. ಈ ಸಂಬಂಧ ಮಾರ್ಚ್‌ನಲ್ಲಿ ಒಮ್ಮೆ ಹೇಳಿಕೆ ದಾಖಲಿಸಿದ್ದ ನಟಿ ಕುಂದ್ರಾ ವಿರುದ್ಧ ಆರೋಪಗಳನ್ನು ಮಾಡಿದ್ದರು ಎಂದು ವರದಿಯಾಗಿದೆ. ಇತ್ತೀಚಿಗಷ್ಟೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದ ಶೆರ್ಲಿನ್, ''ಈ ಕೇಸ್‌ ಬಗ್ಗೆ ಮಾತನಾಡಬೇಕಾಗಿರುವುದು ಬಹಳಷ್ಟಿದೆ. ಆದರೆ ಪೊಲೀಸರು ತನಿಖೆ ಮಾಡುತ್ತಿರುವುದರಿಂದ ನಾನು ಹೆಚ್ಚಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ನನ್ನ ಹೇಳಿಕೆಯನ್ನು ಸೈಬರ್ ಪೊಲೀಸರಿಗೆ ಕೊಟ್ಟಿದ್ದೇನೆ'' ಎಂದಿದ್ದರು.

More from Filmibeat

English summary
Raj Kundra porn case: Bombay High Court grants anticipatory bail to Poonam Pandey and Sherlyn Chopra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X