ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಿದ ಬಾಂಬೆ ಹೈ ಕೋರ್ಟ್
ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರಗ್ಸ್ ಆರೋಪದಲ್ಲಿ ಜೈಲು ಸೇರಿದ್ದ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಆದ್ರೆ, ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ರಿಯಾ ಚಕ್ರವರ್ತಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದ್ದು, ಎನ್‌ಸಿಬಿ ಕಚೇರಿಗೆ ಭೇಟಿ ನೀಡಿ ಹಾಜರಾತಿ ಹಾಕಬೇಕು ಎಂದು ಸೂಸಿಚಿದೆ.
ಸುಶಾಂತ್ ಸಿಂಗ್ ರಜಪೂತ್ ತನಿಖೆ ವೇಳೆ ಡ್ರಗ್ಸ್ ಪೂರೈಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ರಿಯಾ ಸಹೋದರ ಶೌವಿಕ್ ಚಕ್ರವರ್ತಿಯನ್ನು ಸೆಪ್ಟೆಂಬರ್ 4 ರಂದು ಎನ್‌ಸಿಬಿ ಅಧಿಕಾರಿಗಳನ್ನು ಬಂಧಿಸಿದ್ದರು. ನಂತರ ಸತತ ಎರಡು ದಿನ ವಿಚಾರಣೆ ನಡೆಸಿದ ಬಳಿಕ ರಿಯಾ ಚಕ್ರವರ್ತಿಯನ್ನು ಸಹ ಸೆಪ್ಟೆಂಬರ್ 8 ರಂದು ಎನ್‌ಸಿಬಿ ವಶಕ್ಕೆ ಪಡೆದುಕೊಂಡರು.

ರಿಯಾ ಅವರಿಗೆ ಎನ್‌ಡಿಪಿಎಸ್ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಮಂಗಳವಾರ ರಿಯಾ ಹಾಗೂ ಇನ್ನಿತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಆದ್ರೆ, ಅಕ್ಟೋಬರ್ 20ರ ವರೆಗೂ ನ್ಯಾಯಾಂಗ ಬಂಧನ ಮುಂದುವರಿಸುವಂತೆ ಆದೇಶಿಸಿತ್ತು.
ಇದೀಗ, ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರು ಆಗಿದೆ. ಸದ್ಯ, ಬೈಕುಲ್ಲಾ ಜೈಲಿನಲ್ಲಿ ಬಂಧಿಯಾಗಿರುವ ನಟಿ ಇಂದು ಸಂಜೆ ವೇಳೆಗೆ ನ್ಯಾಯಾಲಯದ ಕಾರ್ಯಗಳನ್ನು ಮುಗಿಸಿ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











