For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಕಂಗನಾಗೆ ಹಕ್ಕಿದೆ: ಬಾಂಬೆ ಹೈಕೋರ್ಟ್

  |

  ಟ್ವಿಟ್ಟರ್ ಅಕೌಂಟ್ ಹೊಂದಲು ಮತ್ತು ಅದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಬಾಲಿವುಡ್ ನಟಿ ಕಂಗನಾಗೂ ಸಹ ಹಕ್ಕಿದೆ ಎಂದು ಬಾಂಬೆ ಹೈ ಕೋರ್ಟ್ ಹೇಳಿದೆ.

  ಇತ್ತೀಚಿಗನ ದಿನಗಳಲ್ಲಿ ಕಂಗನಾ ವಿವಾದಾತ್ಮಕ ಟ್ವೀಟ್ ಮಾಡುತ್ತಿದ್ದಾರೆ, ಕೆಲವು ವಿಚಾರಗಳಲ್ಲಿ ಅತಿರೇಕದ ಟ್ವೀಟ್ ಮಾಡುತ್ತಾರೆ ಎಂದು ಅವರ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಬೇಕು ಎಂದು ವಕೀಲ ಅಲಿ ಕಾಶೀಫ್ ಖಾನ್ ದೇಶ ಮುಖ್ ಎನ್ನುವವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

  ಕಂಗನಾ ರಣೌತ್ ಮೇಲೆ ಮತ್ತೊಂದು ಪ್ರಕರಣ ದಾಖಲು

  ನಾನು ಮಹಾರಾಷ್ಟ್ರದವನು, ಮುಂಬೈ ನಿವಾಸಿ, ಕಂಗನಾ ನ್ಯಾಯಾಲಯವನ್ನು ಪಪ್ಪುಸೇನಾ ಎಂದು ಕರೆದಿದ್ದಾರೆ, ಇದು ನನಗೆ ನೋವೊಂಟಾಗಿದೆ, ವೈಯಕ್ತಿಕವಾಗಿ ಧಕ್ಕೆಯಾಗಿದೆ. ಅಲ್ಲದೆ ಕಂಗನಾ ಟ್ವೀಟ್ ಮೂಲಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ, ಧರ್ಮವನ್ನು ನೋಯಿಸುತ್ತಿದ್ದಾರೆ ಎಂದು ದೇಶ್ ಮುಖ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಮುಂದೆ ಓದಿ..

  ಅರ್ಜಿದಾರರಿಗೆ ನ್ಯಾಯಾಲಯ ಪ್ರಶ್ನೆ

  ಅರ್ಜಿದಾರರಿಗೆ ನ್ಯಾಯಾಲಯ ಪ್ರಶ್ನೆ

  ನಿನ್ನೆ (ಡಿಸೆಂಬರ್ 21) ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಕಂಗನಾಗೆ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ ಎಂದು ಹೇಳಿದೆ. ಜೊತೆಗೆ ಕಂಗನಾ ಟ್ವೀಟ್ ಗಳಿಂದ ಯಾರ ರೀತಿ ವೈಯಕ್ತಿಕ ಧಕ್ಕೆಯಾಗಿದೆ ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂಬುದನ್ನು ತೋರಿಸಿ ಎಂದು ಅರ್ಜಿದಾರರಿಗೆ ನ್ಯಾಯಾಲಯ ಪ್ರಶ್ನೆ ಮಾಡಿದೆ.

  ಇದೊಂದು ಅಸ್ಪಷ್ಟ ಅರ್ಜಿ ಎಂದ ನ್ಯಾಯಾಲಯ

  ಇದೊಂದು ಅಸ್ಪಷ್ಟ ಅರ್ಜಿ ಎಂದ ನ್ಯಾಯಾಲಯ

  ಈ ಅರ್ಜಿಯನ್ನು ಪಿಐಎಲ್ಆಗಿ ಮಾರ್ಪಡಿಸಬೇಕು, ಇಲ್ಲವಾದ್ರೆ ಜನರು ಪತ್ರಿಕೆ ಓದಿ, ನಮಗೂ ನೋವಾಗಿದೆ ಅಂತ ಹೇಳಿಕೊಂಡು ಕೋರ್ಟ್ ಗೆ ಬರಲು ಶುರುಮಾಡುತ್ತಾರೆ ಎಂದು ನ್ಯಾಯಮೂರ್ತಿ ಎಸ್ ಎಸ್ ಶಿಂಧೆ ಹಾಗೂ ಎಂ ಎಸ್ ಕಾರ್ಣಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಜಯೇಶ್ ಯಜ್ಞಿಕ್ ಅವರನ್ನು ಕೇಳಿದೆ. ಸಂವಿಧಾನದ ಹಕ್ಕು ಬೇರೆ, ಸಾಂವಿಧಾನಿಕ ಪರಿಹಾರವೇ ಬೇರೆ. ಇದೊಂದು ಅಸ್ಪಷ್ಟ ಅರ್ಜಿ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

  ನಟಿ ಕಂಗನಾ ರಣೌತ್ ಅಜ್ಜ ನಿಧನ: ಭಾವುಕರಾದ ನಟಿ

  ಟ್ವಿಟ್ಟರ್ ಹೊಂದುವ ಮೂಲಭೂತ ಹಕ್ಕು ಕಂಗನಾಗೆ ಇದೆ

  ಟ್ವಿಟ್ಟರ್ ಹೊಂದುವ ಮೂಲಭೂತ ಹಕ್ಕು ಕಂಗನಾಗೆ ಇದೆ

  ಯಾವುದೇ ವ್ಯಕ್ತಿ ಟ್ವಿಟ್ಟರ್ ಖಾತೆಯನ್ನು ಹೊಂದಬಹುದು. ಆಕೆಯ ಆಲೋಚನೆಗಳನ್ನು ವ್ಯಕ್ತಪಡಿಸಲು ಖಾತೆಯನ್ನು ಹೊಂದುವ ಮೂಲಭೂತ ಹಕ್ಕುನ್ನು ಸಹ ಕಂಗನಾ ಹೊಂದಿದ್ದಾರೆ. ಅದ್ದರಿಂದ ನಿಮ್ಮ ಮೂಲಭೂತ ಹಕ್ಕು ಹೇಗೆ ಉಲ್ಲಂಘಿಸಲಾಗಿದೆ ಎಂಬುದನ್ನು ತೋರಿಸಬೇಕಾಗಿದೆ. ಈ ಪ್ರಕರಣ ಸಮಂಜಸವಾದ ನಿರರ್ಬಂಧಗಳ ಅಡಿ ಬರದಿದ್ದರೆ, ನಿಮ್ಮ ವಿನಂತಿಯನ್ನು ನಾವು ಒಪ್ಪಿಕೊಳ್ಳಬಹುದೇ? ನೀವೇ ನಿರ್ಣಯ ನೀಡುವಂತಿದ್ರೆ ಏನು ಮಾಡುತ್ತಿರೀ? ಎಂದು ಅರ್ಜಿದಾರರನ್ನು ಪ್ರಶ್ನಿಸಿದ್ದರು.

  ಮೊದಲ ಸಿನಿಮಾ ರಿಲೀಸ್ ಗೂ ಮುನ್ನವೇ ಬದಲಾಯ್ತು Shashikumar ಮಗನ ಅದೃಷ್ಟ | Filmibeat Kannada
  ಮಾನಸಿಕವಾಗಿ ನೊಂದಿದ್ದೇನೆ ಎಂದು ಅರ್ಜಿದಾರ

  ಮಾನಸಿಕವಾಗಿ ನೊಂದಿದ್ದೇನೆ ಎಂದು ಅರ್ಜಿದಾರ

  ಇದಕ್ಕೆ ಉತ್ತರಿಸಿದ ಅರ್ಜಿ ದಾರರು, ವಾಕ್ ಸ್ವಾತಂತ್ರ್ಯ ಹಾಗೂ ದ್ವೇಷ ಭಾಷಣಕ್ಕೂ ವ್ಯತ್ಯಾಸವಿದೆ. ಕಂಗನಾ ಹೇಗೆ ಅನೇಕರ ಭಾವನೆಗಳನ್ನು ನೋಯಿಸುತ್ತಾರೆ ಎಂಬುವುದಕ್ಕೆ ನನ್ನ ಅರ್ಜಿಯಲ್ಲಿ ಅನೇಕ ಉದಾಹರಣೆಗಳಿವೆ. ಅವರ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿದೆ. ನಾನು ವೈಯಕ್ತಿಕವಾಗಿ, ಮಾನಸಿಕವಾಗಿ ನೊಂದಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ದೇಶ್ ಮುಖ್ ಅರ್ಜಿಯ ವಿಚಾರಣೆಯನ್ನು ಜನವರಿ 7ಕ್ಕೆ ನ್ಯಾಯಾಲಯ ಮುಂದೂಡಿದೆ.

  English summary
  Bombay High Court said Actress Kangana Ranaut Also has the right to have a Twitter account and express her thoughts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X