ಬಾಂಬೆ ಹೈ ಕೋರ್ಟ್‌ನಲ್ಲಿ ಕಂಗನಾ ರಣಾವತ್ ಅರ್ಜಿ ವಿಚಾರಣೆ
ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ನೆಲೆಸಮ ಮಾಡಲು ಮುಂದಾಗಿತ್ತು. ಕಟ್ಟಡ ನೆಲಕ್ಕೆ ಉರುಳಿಸುವ ಕಾರ್ಯಕ್ಕೂ ಚಾಲನೆ ನೀಡಿ ಅರ್ಧ ಕಟ್ಟಡ ನೆಲಸಮ ಸಹ ಮಾಡಲಾಗಿತ್ತು.
ಮುಂಬೈ ಮಹಾನಗರ ಪಾಲಿಕೆ ದ್ವೇಷದಿಂದ ನನ್ನ ಕಚೇರಿ ಉರುಳಿಸಿದೆ, ನಾನು ಸೂಕ್ತ ದಾಖಲೆ ಹಾಗೂ ಪರವಾನಗಿ ಪಡೆದು ಕಟ್ಟಡ ನಿರ್ಮಿಸಿದ್ದೇನೆ. ನನಗೆ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿ ಬಾಂಬೆ ಹೈ ಕೋರ್ಟ್‌ನಲ್ಲಿ ನಟಿ ಕಂಗನಾ ಅರ್ಜಿ ಹಾಕಿದ್ದರು.
ಈ ಸಂಬಂಧ ಇಂದು ಮಧ್ಯಾಹ್ನ ಮೂರು ಗಂಟೆಗೆ ಹೈ ಕೋರ್ಟ್‌ನಲ್ಲಿ ಕಂಗನಾ ಅವರ ಅರ್ಜಿ ವಿಚಾರಣೆಗೆ ಬರಲಿದೆ. ಆಸ್ತಿಪಾಸ್ತಿ ನಾಶ ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೇಳಿರುವ ಕಂಗನಾ ವಿರುದ್ಧ ಮುಂಬೈ ಪಾಲಿಕೆ ಆಕ್ರೋಶಗೊಂಡಿದೆ.

ಸುಶಾಂತ್ ರಜಪೂತ್ ಪ್ರಕರಣದಲ್ಲಿ ಮುಂಬೈ ಸರ್ಕಾರ ಹಾಗೂ ಮುಂಬೈ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದ ಕಂಗನಾ, 'ಪಾಕ್ ಆಕ್ರಮಿತ ಮುಂಬೈ' ಎಂದು ಉಲ್ಲೇಖಿಸಿದ್ದರು. ಕಂಗನಾ ಅವರ ಈ ಹೇಳಿಕೆಗೆ ಶಿವಸೇನಾ ಸಂಸದ ಸಂಜಯ್ ರಾವತ್ ಖಂಡಿಸಿ, 'ಮುಂಬೈ ಬರಬೇಡಿ' ಎಂದು ಕಂಗನಾಗೆ ಸವಾಲ್ ಎಸೆದರು.
ಸಂಜಯ್ ರಾವತ್ ಅವರ ಸವಾಲ್‌ಗೆ ಪ್ರತಿ ಸವಾಲ್ ಹಾಕಿದ ಕಂಗನಾ, ಹರಿಯಾಣ ಸರ್ಕಾರದಿಂದ 'ವೈ' ಶ್ರೇಣಿಯ ಭದ್ರತೆ ಪಡೆದುಕೊಂಡು, ಮುಂಬೈಗೆ ಬಂದಿದ್ದರು. ಕಂಗನಾ ಮುಂಬೈಗೆ ಬರುವ ದಿನವೇ ಪಾಲಿಕೆಯಿಂದ ಅವರ ಕಚೇರಿ ಕಟ್ಟಡ ನೆಲಕ್ಕೆ ಉರುಳಿಸುವ ಕಾರ್ಯ ಆರಂಭ ಮಾಡಲಾಗಿತ್ತು.


Click it and Unblock the Notifications