ಶ್ರೀದೇವಿ ಮಾತು ಧಿಕ್ಕರಿಸಿದ ಪತಿ ಬೋನಿ ಕಪೂರ್ ಹೊಸ ಚಿತ್ರಕ್ಕೆ ಒಪ್ಪಿಗೆ

ದಿವಂಗತ ನಟಿ ಶ್ರೀದೇವಿ ನಟನೆಯ 'ಮಿಸ್ಟರ್ ಇಂಡಿಯಾ' ಚಿತ್ರದ ಸೀಕ್ವೆಲ್ ಮಾಡಲು ಬಾಲಿವುಡ್ ಮಂದಿ ಚಿಂತಿಸುತ್ತಿದ್ದಾರೆ. ಆದರೆ ಈ ಸಿನಿಮಾದ ಮುಂದುವರೆದ ಭಾಗ ಮಾಡುವ ಯೋಚನೆಯೇ ಇಲ್ಲ ಎಂದು ನಿರ್ದೇಶಕರು ಹೇಳುತ್ತಿದ್ದಾರೆ.

ಮತ್ತೊಂದೆಡೆ 'ಮಿಸ್ಟರ್ ಇಂಡಿಯಾ' ಸಿನಿಮಾ ನಿರ್ಮಾಪಕರು ಬೋನಿ ಕಪೂರ್ ಸೀಕ್ವೆಲ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

1983ರಲ್ಲಿ ತೆರೆಕಂಡಿದ್ದ 'ಮಿಸ್ಟರ್ ಇಂಡಿಯಾ' ಸಿನಿಮಾದಲ್ಲಿ ಅನಿಲ್ ಕಪೂರ್, ಸತೀಶ್ ಕೌಶಿಕ್, ಅಮರೀಶ್ ಪುರಿ ನಟಿಸಿದ್ದರು. ಅಂದಿನ ಸಮಯಕ್ಕೆ ಈ ಚಿತ್ರ ಬಹುದೊಡ್ಡ ಹಿಟ್ ಆಗಿತ್ತು. ಶ್ರೀದೇವಿ ವೃತ್ತಿ ಜೀವನದಲ್ಲಿ ಮಿಸ್ಟರ್ ಇಂಡಿಯಾ ತುಂಬಾ ವಿಶೇಷವೆನಿಸಿಕೊಂಡಿತ್ತು.

Boney Kapoor Gave Green Signal To Mr India Sequel

ಈ ಹಿಂದೆ ಸಂದರ್ಶನವೊಂದರಲ್ಲಿ ಮಿಸ್ಟರ್ ಇಂಡಿಯಾ ಸೀಕ್ವೆಲ್ ಕುರಿತು ಮಾತನಾಡಿದ್ದ ಶ್ರೀದೇವಿ ''ಮಿಸ್ಟರ್ ಇಂಡಿಯಾ ಮತ್ತೆ ರೀಮೇಡ್ ಆಗುತ್ತೆ ಅಥವಾ ಸೀಕ್ವೆಲ್ ಬರುತ್ತೆ ಎಂದು ನಾನು ಭಾವಿಸುವುದಿಲ್ಲ. ಇಂತಹ ಸಿನಿಮಾಗಳು ಒಮ್ಮೆ ಮಾತ್ರ ಆಗುತ್ತೆ. ನಾವು ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಸಿನಿಮಾ ಇಷ್ಟು ದೊಡ್ಡ ಪರಿಣಾಮ ಬೀರುತ್ತೆ ಎಂದು ಅಂದುಕೊಂಡಿರಲಿಲ್ಲ. ಇಂದಿಗೂ ಜನರು ಈ ಸಿನಿಮಾ ಬಗ್ಗೆ ಮಾತನಾಡುತ್ತಾರೆ. ಮುಗ್ಯಾಂಬೋ ಮತ್ತು ನನ್ನ ಪಾತ್ರ ಮರೆಯಲು ಸಾಧ್ಯವಿಲ್ಲ. ಇಂತಹ ಖುಷಿ ಮತ್ತೊಮ್ಮೆ ಬರಲು ಸಾಧ್ಯವಿಲ್ಲ'' ಎಂದಿದ್ದರು.

ಬಾಲಿವುಡ್ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಮಿಸ್ಟರ್ ಇಂಡಿಯಾ ಕುರಿತು ಘೋಷಣೆ ಮಾಡಿದ್ದು ''ಮಿಸ್ಟರ್ ಇಂಡಿಯಾ ಸಿನಿಮಾ ಮುಂದುವರಿಸಲು ಮತ್ತು ಐಕಾನಿಕ್ ಪಾತ್ರ ಮುಂದುವರಿಸಲು ಖುಷಿಯಾಗುತ್ತಿದೆ. ಸದ್ಯಕ್ಕೆ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡ್ತಿದ್ದೀವಿ. ಇದುವರೆಗೂ ಯಾವ ನಟರು ಅಂತಿಮವಾಗಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.

ಅಲಿ ಅಬ್ಬಾಸ್ ಜಾಫರ್ ಟ್ವೀಟ್ ಮಾಡಿದ ನಂತರ ಮಿಸ್ಟರ್ ಇಂಡಿಯಾ ನಿರ್ದೇಶಕ ಶೇಖರ್ ಕಪೂರ್ ಪ್ರತಿಕ್ರಿಯಿಸಿದ್ದು ''ಮಿಸ್ಟರ್ ಇಂಡಿಯಾ 2 ಎಂಬ ಸಿನಿಮಾ ಮಾಡುವ ಕುರಿತು ನನ್ನೊಂದಿಗೆ ಯಾರೂ ಚರ್ಚಿಸಿಲ್ಲ. ಮೂಲ ಕಥೆ ಅಥವಾ ಮೂಲ ಕರ್ತರ ಒಪ್ಪಿಗೆ ಇಲ್ಲದೆ ಸಿನಿಮಾ ಮಾಡಲು ಸಾಧ್ಯವಿಲ್ಲ'' ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

More from Filmibeat

English summary
Bollywood producer Boney Kapoor gave green signal to Mr India movie Sequel. but, sridevi never wanted to sequel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X