ಕನ್ನಡಕ್ಕೆ ಬರ್ತಿದೆ ಹಿಂದಿ ಸೂಪರ್ ಹಿಟ್ ಸಿನಿಮಾ 'ಬಧಾಯಿ ಹೋ'

ಬಾಲಿವುಡ್ ಮಂದಿಯ ಕಣ್ಣು ಈಗ ಸೌತ್ ಸಿನಿ ಇಂಡಸ್ಟ್ರಿಯ ಕಡೆ ಬಿದ್ದಿದೆ. ಪ್ರಮೋಷನ್, ರೀಮೇಕ್ ನೆಪದಲ್ಲಿ ದಕ್ಷಿಣ ಭಾರತೀಯರ ಜೊತೆ ಹೆಚ್ಚು ಸಂಪರ್ಕ ಬೆಳೆಸುತ್ತಿರುವ ಬಾಲಿವುಡ್ ಇಲ್ಲಿಯ ಪ್ರೇಕ್ಷಕರ ಮನಸೆಳೆಯು ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನ ಸಾಕಷ್ಟು ದೊಡ್ಡ ದೊಡ್ಡ ನಟ ನಟಿಯರು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಈಗ ನಿರ್ಮಾಪಕ ಬೋನಿ ಕಪೂರ್ ಹಿಂದಿಯ ಸೂಪರ್ ಹಿಟ್ ಸಿನಿಮಾ ಒಂದನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಗೂ ರೀಮೇಕ್ ಮಾಡುವ ಪ್ಲಾನ್ ಮಾಡಿದ್ದಾರೆ.

ಹೌದು, 2018ರಲ್ಲಿ ರಿಲೀಸ್ ಆಗಿದ್ದ 'ಬಧಾಯಿ ಹೋ' ಸಿನಿಮಾವನ್ನು ಕನ್ನಡ ಸೇರಿದಂತೆ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗೆ ರೀಮೇಕ್ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ಬೋನಿ ಕಪೂರ್ 'ಬಧಾಯಿ ಹೋ' ಚಿತ್ರದ ರೀಮೇಕ್ ರೈಟ್ಸ್ ಖರೀದಿಸಿದ್ದಾರೆ.

Boney Kapoors Badhaai Ho releasing in four languages

ಹಿಂದಿ ಸಿನಿಮಾವನ್ನು ಸೌತ್ ಸಿನಿ ಇಂಡಸ್ಟ್ರಿಯಲ್ಲಿ ರೀಮೇಕ್ ಮಾಡುತ್ತಿರುವ ಪ್ರಮುಖ ಉದ್ದೇಶ, ದಕ್ಷಿಣ ಭಾರತದ ಸಾಕಷ್ಟು ಚಿತ್ರಗಳನ್ನು ಬಾಲಿವುಡ್ ಗೆ ರೀಮೇಕ್ ಮಾಡಿದ್ದಾರಂತೆ. ಈಗ ಹಿಂದಿ ಸಿನಿಮಾಗಳನ್ನು ದಕ್ಷಿಣದಲ್ಲಿ ರೀಮೇಕ್ ಮಾಡಬೇಕೆಂಬ ಆಸೆ ಹೊಂದಿದ್ದಾರಂತೆ.

'ಬಧಾಯಿ ಹೋ' ಚಿತ್ರದಲ್ಲಿ ಆಯುಷ್ಮಾನ್ ಖುರಾನ ಮತ್ತು ನೀನಾ ಗುಪ್ತ ಸೇರಿದಂತೆ ಸಾಕಷ್ಟು ಕಲಾವಿದರು ಕಾಣಿಸಿಕೊಂಡಿದ್ದಾರೆ. ವಯಸ್ಸಿಗೆ ಬಂದ ಇಬ್ಬರು ಮಕ್ಕಳು ಇದ್ದರೂ, ಸುಮಾರು 50 ವರ್ಷಕ್ಕೆ ಮೂರನೆ ಮಗುವಿಗೆ ತಾಯಿಯಾಗುವ ಕತೆ ಇರುವ ಸಿನಿಮಾ 'ಬಧಾಯಿ ಹೋ'. ಉತ್ತಮ ಸಂದೇಶ ನೀಡುವ ಸಿನಿಮಾ ಇದಾಗಿರುವ ಕಾರಣ ದಕ್ಷಿಣ ಭಾರತದ ಎಲ್ಲಾ ಭಾಷೆಗೂ ರೀಮೇಕ್ ಮಾಡಲು ಮುಂದಾಗಿದ್ದಾರೆ ಬೋನಿ ಕಪೂರ್.

More from Filmibeat

English summary
Bollywood Producer Boney Kapoor will remake last year’s hit Hindi film Badhaai Ho in Tamil, Telugu, Malayalam and Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X