ಅದ್ಧೂರಿಯಾಗಿ ಬೋನಿ ಕಪೂರ್ ಮಗಳು ಅನ್ಷುಲ್ಲಾ ಕಪೂರ್ ಮದುವೆ; ಇಲ್ಲಿದೆ ಫೋಟೋಸ್

ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮಗಳು ಅನ್ಷುಲ್ಲಾ ಕಪೂರ್ ಮದುವೆ ಅದ್ಧೂರಿಯಾಗಿ ನೆರವೇರಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮದುವೆ ಫೋಟೊಗಳನ್ನು ಆಕೆ ಹಂಚಿಕೊಂಡಿದ್ದಾರೆ. ಚಿತ್ರಕಥೆಗಾರ ರೋಹನ್ ಥಕ್ಕರ್ ಅವರನ್ನು ಅನ್ಷುಲ್ಲಾ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಸಹೋದರಿ ಮದುವೆಯಲ್ಲಿ ಅರ್ಜುನ್ ಕಪೂರ್, ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಕೂಡ ಭಾಗಿ ಆಗಿ ಸಂಭ್ರಮಿಸಿದ್ದಾರೆ. ಫೋಟೊ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕಳೆದ ವರ್ಷ ಅಕ್ಟಬರ್ 2ರಂದು ರೋಹನ್ ಥಕ್ಕರ್ ಹಾಗೂ ಅನ್ಷುಲ್ಲಾ ಕಪೂರ್ ಮದುವೆ ನಿಶ್ಚಿತಾರ್ಥ ನಡೆದಿತ್ತು. ಮೆಹಂದಿ ಹಾಗೂ ಚೂಡಾ ಸಮಾರಂಭ ಅಂತೆಲ್ಲಾ 3 ದಿನಗಳಿಂದ ಮದುವೆ ಶಾಸ್ತ್ರಗಳು ನಡೆದಿತ್ತು. ನಿನ್ನೆ(ಜುಲೈ 6) ಮಾಂಗಲ್ಯಧಾರಣೆ ನಡೆದಿದೆ.

Boney Kapoor s daughter Anshula Kapoor tied knot with Rohan Thakkar shared photos

ಅನಿಲ್ ಕಪೂರ್ ಸಹೋದರ ಬೋನಿ ಕಪೂರ್ ಚಿತ್ರ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೊದಲಿಗೆ ಮೋನಾ ಶೌರಿ ಎಂಬುವವರನ್ನು ಬೋನಿ ಕಪೂರ್ ಮದುವೆ ಆಗಿದ್ದರು. ದಂಪತಿಗೆ ಅರ್ಜುನ್ ಕಪೂರ್ ಹಾಗೂ ಅನ್ಷುಲ್ಲಾ ಕಪೂರ್ ಹುಟ್ಟಿದ್ದರು. ಬಳಿಕ ನಟಿ ಶ್ರೀದೇವಿ ಅವರನ್ನು ಬೋನಿ ಕಪೂರ್ ಕೈಹಿಡಿದಿದ್ದರು. ಅರ್ಜುನ್ ಕಪೂರ್ ಕೂಡ ಚಿತ್ರರಂಗದಲ್ಲಿ ಹೀರೊ ಆಗಿ ಗುರ್ತಿಸಿಕೊಂಡಿದ್ದಾರೆ. ಆದರೆ ಅನ್ಷುಲ್ಲಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಮದುವೆ ಸಂಭ್ರಕ್ಕೆ ಕಲರ್‌ಫುಲ್ ಲೆಹಾಂಗದಲ್ಲಿ ಅನ್ಷುಲ್ಲಾ ರೆಡಿ ಆಗಿದ್ದರು. ಕೋರಲ್ ಹಾಗೂ ಗೋಲ್ಡ್‌ ಕಲರ್ ಲೆಹಂಗಾ ಆಕೆಯ ಅಂದ ಹೆಚ್ಚಿಸಿತ್ತು. ಚಿನ್ನದ ದಾರದಿಂದ ಕಸೂತಿ ಮಾಡಲಾದ ಹೂವಿನ ವಿನ್ಯಾಸಗಳು ಲೆಹಾಂಗಾದಲ್ಲಿ ಎದ್ದು ಕಾಣುತ್ತಿತ್ತು. ಬನಾರಸಿ ದುಪಟ್ಟಾ ಹಾಗೂ ಗುಲಾಬಿ ಬಣ್ಣದ ಮುಸುಕು ಧರಿಸಿದ್ದರು. ಕುಂದನ್, ಪಚ್ಚೆಗಳು ಮತ್ತು ಅಮೂಲ್ಯ ಕಲ್ಲುಗಳಿಂದ ಕೂಡಿದ ಸೊಗಸಾದ ಆಭರಣಗಳು ಹೈಲೆಟ್ ಆಗಿತ್ತು.

ಇನ್ನು ಮದುಮಗ ರೋಹನ್ ಥಕ್ಕರ್ ಕ್ಲಾಸಿಕ್ ಐವರಿ-ಗೋಲ್ಡ್ ಶೆರ್ವಾನಿ ಮತ್ತು ಪೇಟಾ ಧರಿಸಿ ಮದುವೆ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಇಬ್ಬರ ಮದುವೆ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ ಹೋಟೆಲ್‌ನಲ್ಲಿ ಅನ್ಷುಲ್ಲಾ ಹಾಗೂ ರೋಹನ್ ಮದುವೆ ನೆರವೇರಿದೆ. ಕೆಲವೇ ಆಪ್ತರ ಸಮ್ಮುಖದಲ್ಲಿ ಬಹಳ ಅದ್ಧೂರಿಯಾಗಿ ಮದುವೆ ಸಂಭ್ರಮ ಕಳೆಗಟ್ಟಿತ್ತು.

ಪಂಜಾಬಿ ಮತ್ತು ಗುಜರಾತಿ ಸಂಪ್ರದಾಯಗಳನ್ನು ಬೆರಸಿ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಗಿದೆ. ಡೇಟಿಂಗ್ ಆಪ್ ಮೂಲಕ ಅನ್ಷುಲ್ಲಾ ಹಾಗೂ ರೋಹನ್ ಪರಿಚಯವಾಗಿತ್ತು. ಬಳಿಕ ಫೋನ್ ನಂಬರ್ ಬದಲಾಗಿ ಇಬ್ಬರೂ ಮಾತುಕತೆ ಶುರುವಾಗಿತ್ತು. ನಿಧಾನವಾಗಿ ಸ್ನೇಹಿತರಾಗಿದ್ದರು. ಕೊನೆಗೆ ಪೋಷಕರನ್ನು ಒಪ್ಪಿಸಿ ಮದುವೆಗೆ ನಿರ್ಧರಿಸಿದ್ದರು. ನಿಶ್ಚಿತಾರ್ಥವಾಗಿ 9 ತಿಂಗಳ ಬಳಿಕ ಜೋಡಿ ಹಸೆಮಣೆ ಏರಿದೆ.

ಮುಂಬೈ ಮೂಲದ ರೋಹನ್ ಠಕ್ಕರ್ ಚಿತ್ರಕಥೆಗಾರರಾಗಿದ್ದು, ಧರ್ಮಾಟಿಕ್ ಪ್ರೊಡಕ್ಷನ್ಸ್ ಜೊತೆ ತೊಡಗಿಸಿಕೊಂಡಿದ್ದಾರೆ. ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಿಂದ ಚಿತ್ರಕಥೆಯಲ್ಲಿ ಎಂಎಫ್‌ಎ ಪದವಿ ಪಡೆದಿದ್ದಾರೆ. ಸಹೋದರಿ ಮದುವೆ ಸಂಭ್ರಮದಲ್ಲಿ ಅರ್ಜುನ್ ಕಪೂರ್ ಕುಣಿದು ಕುಪ್ಪಳಿಸಿದ್ದಾರೆ. ಹಾಡು ಹಾಡಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಆ ವೀಡಿಯೋಗಳು ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X