ಸನ್ನಿ ಡಿಯೋಲ್‌ಗೆ ಆಘಾತ: ಆರು ದೇಶಗಳಲ್ಲಿ ಬಾರ್ಡರ್ 2 ಬ್ಯಾನ್

ಬಣ್ಣದ ಲೋಕದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಒಂದು ಸಿನಿಮಾ ಅನೌನ್ಸ್ ಆದಾಗಿನಿಂದ ರಿಲೀಸ್ ಆಗುವವರೆಗೂ ನೂರಾರು ಅಡೆತಡೆಗಳು ಎದುರಾಗುತ್ತವೆ. ಅದರಲ್ಲೂ ದೇಶಭಕ್ತಿ ಅಥವಾ ಐತಿಹಾಸಿಕ ಕಥೆಗಳನ್ನಿಟ್ಟುಕೊಂಡು ಸಿನಿಮಾ ಮಾಡುವಾಗ ಎಚ್ಚರಿಕೆ ಬಹಳ ಮುಖ್ಯ. ಈಗ ಅಂತಹದ್ದೇ ಒಂದು ದೊಡ್ಡ ಸಿನಿಮಾ ಈಗ ಸಂಕಷ್ಟಕ್ಕೆ ಸಿಲುಕಿದೆ. ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು ಅಂದ ಮೇಲೆ ವಿಶ್ವಾದ್ಯಂತ ರಿಲೀಸ್ ಆಗುತ್ತವೆ.

ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಕೂಡ ಇಂತಹ ಸಿನಿಮಾಗಳಿಗಾಗಿ ಕಾದು ಕುಳಿತಿರುತ್ತಾರೆ. ಆದರೆ ಈ ಬಾರಿ ಈ ಬಹುನಿರೀಕ್ಷಿತ ಚಿತ್ರಕ್ಕೆ ವಿದೇಶಿ ಮಣ್ಣಿನಲ್ಲಿ ರೆಡ್ ಸಿಗ್ನಲ್ ಸಿಕ್ಕಿದೆ. ಇದು ಚಿತ್ರತಂಡಕ್ಕೆ ಮಾತ್ರವಲ್ಲದೆ, ವಿತರಕರಿಗೂ ದೊಡ್ಡ ಹೊಡೆತ ನೀಡಿದೆ. ಯಾವುದೇ ಸಿನಿಮಾ ಸೆನ್ಸಾರ್ ಮಂಡಳಿಯ ಕಣ್ಣು ತಪ್ಪಿಸಿ ಹೊರಬರಲು ಸಾಧ್ಯವಿಲ್ಲ. ಭಾರತದಲ್ಲಿ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರೂ, ಹೊರದೇಶದ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಹಾಗಿಲ್ಲ. ಸಿನಿಮಾ ಗಡಿ ದಾಟುವ ಮೊದಲೇ ಅಲ್ಲಿನ ನಿಯಮಗಳು ಅಡ್ಡಗಾಲು ಹಾಕಿವೆ.

Border 2 Blocked Why the Gulf Banned Sunny Deol s 300 -Crore Epic After the Dhurandhar

'ಬಾರ್ಡರ್ 2' ಚಿತ್ರಕ್ಕೆ ಗಲ್ಫ್ ರಾಷ್ಟ್ರಗಳಲ್ಲಿ ನಿಷೇಧ

ಹೌದು, ಬಾಲಿವುಡ್‌ನ ಆಕ್ಷನ್ ಕಿಂಗ್ ಸನ್ನಿ ಡಿಯೋಲ್ ಅಭಿನಯದ 'ಬಾರ್ಡರ್ 2' ಚಿತ್ರಕ್ಕೆ ಈಗ ಸಂಕಷ್ಟ ಎದುರಾಗಿದೆ. ಬಹುಕಾಲದ ನಂತರ ಸನ್ನಿ ಡಿಯೋಲ್ ಗಡಿಯ ರಕ್ಷಣೆಗೆ ನಿಲ್ಲುವ ಕಥೆಯೊಂದಿಗೆ ಬೆಳ್ಳಿತೆರೆಯ ಮೇಲೆ ಬಂದಿದ್ದಾರೆ. ಆದರೆ ಈ ಸಿನಿಮಾ ಗಲ್ಫ್ ರಾಷ್ಟ್ರಗಳಲ್ಲಿ ತೆರೆಕಾಣುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಿನಿಮಾದಲ್ಲಿರುವ ಕೆಲವು ಸೂಕ್ಷ್ಮ ಸನ್ನಿವೇಶಗಳು.

ಪಾಕಿಸ್ತಾನ ವಿರೋಧಿ ಭಾವನೆಗೆ ಆಕ್ಷೇಪ?

''ಬಾಲಿವುಡ್ ಹಂಗಾಮ'' ವರದಿಗಳ ಪ್ರಕಾರ ಈ ಸಿನಿಮಾದಲ್ಲಿರುವ ಪಾಕಿಸ್ತಾನ ವಿರೋಧಿ ಸಂಭಾಷಣೆಗಳು ಮತ್ತು ಸನ್ನಿವೇಶಗಳು ಗಲ್ಫ್ ರಾಷ್ಟ್ರಗಳ ಅಸಮಾಧಾನಕ್ಕೆ ಕಾರಣವಾಗಿವೆ. ಅಲ್ಲಿನ ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ ಪರವಾನಗಿ ನೀಡಲು ನಿರಾಕರಿಸಿದೆ ಎನ್ನಲಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ 'ಧುರಂಧರ್' ಚಿತ್ರಕ್ಕೂ ಇದೇ ರೀತಿಯ ಸ್ಥಿತಿ ಎದುರಾಗಿತ್ತು. ಈಗ ಅದೇ ಹಾದಿಯಲ್ಲಿ 'ಬಾರ್ಡರ್ 2' ಸಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Border 2 Blocked Why the Gulf Banned Sunny Deol s 300 -Crore Epic After the Dhurandhar

ಇದು ಬಾಲಿವುಡ್‌ಗೆ ಹಿನ್ನಡೆಯೇ?

ಸನ್ನಿ ಡಿಯೋಲ್ ಅವರ 'ಗದರ್ 2' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಅದೇ ರೀತಿ 'ಬಾರ್ಡರ್ 2' ಕೂಡ ದಾಖಲೆ ಬರೆಯಲಿದೆ ಎಂಬ ನಂಬಿಕೆ ಇದೆ. ಇದಕ್ಕೆ ಪೂರಕವಾಗಿ ಮೊದಲ ದಿನ ಅತ್ಯುತ್ತುಮವಾದ ಓಪನಿಂಗ್ ಕೂಡ ಚಿತ್ರ ಪಡೆದುಕೊಂಡಿದೆ.

ಆದರೆ ಗಲ್ಫ್ ಮಾರುಕಟ್ಟೆಯನ್ನು ಕಳೆದುಕೊಂಡರೆ ಸಿನಿಮಾದ ಕಲೆಕ್ಷನ್ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ವಿದೇಶಗಳಲ್ಲಿ ಇರುವ ಭಾರತೀಯ ಮೂಲದ ಪ್ರೇಕ್ಷಕರಿಗೆ ಈ ಸಿನಿಮಾ ನೋಡುವ ಅವಕಾಶ ತಪ್ಪಬಹುದು.ಇನ್ನು ಹೀಗೆ ನಿಷೇಧಕ್ಕೊಳಗಾಗಿದ್ದ 'ಧುರಂಧರ್' ಚಿತ್ರಕ್ಕೆ 90 ಕೋಟಿಗೂ ಅಧಿಕ ನಷ್ಟವಾಗಿತ್ತು. ಈ ಹಿನ್ನೆಲೆ 'ಬಾರ್ಡರ್ 2' ಚಿತ್ರಕ್ಕೂ ಇಲ್ಲಿ ಹಿನ್ನೆಡೆಯಾದಂತಾಗಿದೆ.

ಸಿನಿಮಾ ಎಂದರೆ ಕೇವಲ ಮನರಂಜನೆಯಲ್ಲ, ಅದು ಕೋಟ್ಯಂತರ ರೂಪಾಯಿಗಳ ವ್ಯವಹಾರವೂ ಹೌದು. ಇಂತಹ ನಿಷೇಧಗಳು ಸಿನಿಮಾದ ಯಶಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಸನ್ನಿ ಡಿಯೋಲ್ ಅವರ ಈ ಚಿತ್ರ ಈ ಅಡೆತಡೆಗಳನ್ನು ಮೀರಿ ಹೇಗೆ ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Read more about: sunny deol ban
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X