ಕಿರುತೆರೆಯ ಟಿಪ್ಪು ಸುಲ್ತಾನ್ ಸಂಜಯ್ ಖಾನ್ ತಮ್ಮ ಪತ್ನಿಯ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಮಾಡಿದ್ದೇಕೆ?

By Srushti

ಭಾರತ ಹಲವು ಧರ್ಮ.. ಜಾತಿ.. ಮತ್ತು ಸಂಸ್ಕ್ರತಿಯ ತೊಟ್ಟಿಲು. ಇಲ್ಲಿ ಎಲ್ಲಾ ಧರ್ಮದವರು ತಮ್ಮದೇ ಆದ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ತಮ್ಮ ತಮ್ಮ ಧರ್ಮಕ್ಕೆ ಅನುಗುಣವಾಗಿ ತಲತಲಮಾರುಗಳಿಂದ ರೂಢಿಸಿಕೊಂಡು ಬಂದ ಪದ್ದತಿಯ ಪ್ರಕಾರ ಮದುವೆಯನ್ನು.. ನಾಮಕರಣವನ್ನು.. ಸೀಮಂತ ಶಾಸ್ತ್ರವನ್ನು ಅಥವಾ ಹಬ್ಬ ಹರಿದಿನಗಳನ್ನು.. ಬೇರೆ ಬೇರೆ ಆಚರಣೆಗಳನ್ನು ಮಾಡುತ್ತಾರೆ. ಇನ್ನೂ ವ್ಯಕ್ತಿ ಬದುಕಿದ್ದಾಗ ಮಾತ್ರ ಅಲ್ಲ ಸತ್ತ ನಂತರವೂ ಕೂಡ..

ಭಾರತದಲ್ಲಿ ಅನುಸರಿಸುವ ಕರ್ಮಗಳು .. ಸಂಪ್ರದಾಯಗಳು .. ಒಂದಕ್ಕಿಂತ ಒಂದು ಭಿನ್ನ ವಿಭಿನ್ನವಾಗಿವೆ. ಹಲವರು ತಮ್ಮ ತಮ್ಮ ಧರ್ಮಕ್ಕೆ ಅನುಗುಣವಾಗಿಯೇ ಇಲ್ಲಿ ಅಂತ್ಯಕ್ರಿಯೆಯ ಸಂಸ್ಕಾರ ಪಾಲಿಸುತ್ತಾರೆ.

Born Parsi Married Muslim Cremated Hindu The True Story Behind Zarine Khan s Final Rites

ಹೀಗಾಗಿಯೇ ಮೊನ್ನೆಯ ದಿವಸ ಕಿರುತೆರೆಯ ಟಿಪ್ಪು ಸುಲ್ತಾನ್ ಸಂಜಯ್ ಖಾನ್ ಅವರ ಪತ್ನಿ ಝರೀನ್ ಖಾನ್ ನಿಧನದ ನಂತರ ಇವರ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಮಾಡಿದ್ದನ್ನು ಕಂಡು ಹಲವರು ಅಚ್ಚರಿಗೊಂಡಿದ್ದಾರೆ. ಇಸ್ಲಾಂ ಧರ್ಮದವರಾಗಿದ್ದರು ಝರೀನ್ ಖಾನ್ ಅವರ ಅಂತ್ಯಸಂಸ್ಕಾರ ಹಿಂದೂ ಸಂಪ್ರದಾಯದಂತೆ ನಡೆದಿದ್ದೇಕೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಹಲವರಿಗೆ ಗೊತ್ತಿರದ ವಿಚಾರ ಅಂದರೆ ಝರೀನ್ ಮುಸ್ಲಿಂ ಆಗಿರಲಿಲ್ಲ. ಬದಲಿಗೆ ಹಿಂದೂ ಆಗಿದ್ದರು.

ಹೌದು, 81ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ ಝರೀನ್ ಖಾನ್ ಅವರ ಮೂಲಕ ಹೆಸರು ಝರೀನ್ ಕತ್ರಕ್. ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಂಜಯ್ ಖಾನ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆಯಾದ ಝರೀನ್, ಸಂಜಯ್ ಖಾನ್ ಅವರನ್ನು ಮದುವೆಯೇನೋ ಆಗಿದ್ದರು. ಆದರೆ.. ಧರ್ಮ ಬದಲಿಸಿರಲಿಲ್ಲ. ಸಂಜಯ್ ಖಾನ್ ಕೂಡ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಝರೀನ್ ಅವರ ಮೇಲೆ ಯಾವತ್ತು ಒತ್ತಡ ಹೇರಲಿಲ್ಲ.

ಈ ಹಿನ್ನೆಲೆ ಝರೀನ್ ಖಾನ್ ಅವರ ಇಚ್ಚೆಯಂತೆಯೇ ಅವರ ಅಂತ್ಯ ಸಂಸ್ಕಾರವನ್ನು ಸಂಜಯ್ ಖಾನ್ ಹಿಂದೂ ಸಂಪ್ರದಾಯದಂತೆಯೇ ಮಾಡಿದರು. ಝರೀನ್ ಖಾನ್ ಅವರ ಅಂತಿಮ ವಿಧಿಗಳನ್ನು ಅವರ ಏಕೈಕ ಪುತ್ರ ಝಾಯೆದ್ ಖಾನ್ ನಡೆಸಿದರು. ಪಂಡಿತರ ಮಾರ್ಗದರ್ಶನದಲ್ಲಿ ಝಾಯೆದ್ ವಿಧಿಗಳನ್ನು ನೆರವೇರಿಸಿದರು.

ಝರೀನ್ ಅವರ ಪಾರ್ಥಿವ ಶರೀರವನ್ನು ಮೊಮ್ಮಕ್ಕಳು ಹೊತ್ತುಕೊಂಡರು. ಇನ್ನು ತಾಯಿಯ ಅಗಲಿಕೆಯ ನಂತರ ಝರೀನ್ ಖಾನ್ ಅವರ ಮಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಬರಹ ಹಂಚಿಕೊಂಡಿದ್ದು, ಈ ಕುಟುಂಬವು ಧರ್ಮಗಳ ನಡುವೆ ಇರಿಸಿರುವ ಗೌರವ ಮತ್ತು ಮೌಲ್ಯಗಳನ್ನು ಬಿಂಬಿಸಿದೆ ಎಂದು ಹೇಳಿದ್ದಾರೆ. "ನನ್ನ ತಾಯಿ ಝರೀನ್ ಖಾನ್ ಬಹಳ ವಿಶೇಷ ಮಹಿಳೆ. 'ಕ್ಷಮಿಸು ಮತ್ತು ಮರೆತುಬಿಡು'' ಎಂಬುದು ಅವರ ಜೀವನದ ತತ್ವವಾಗಿತ್ತು. ನಮ್ಮ ಕುಟುಂಬವನ್ನು ಒಟ್ಟಾಗಿ ಇರಿಸಿದ ಕೊಂಡಿ ಅವರೇ. ಪಾರ್ಸಿ ಧರ್ಮದಲ್ಲಿ ಹುಟ್ಟಿ, ಮುಸ್ಲಿಂನನ್ನು ಮದುವೆಯಾಗಿ, ಹಿಂದೂ ವಿಧಿ ವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಯಿತು. ಅವರು ಮಾನವೀಯತೆಯ ಪ್ರತೀಕವಾಗಿದ್ದರು" ಎಂದಿದ್ದಾರೆ.

Born Parsi Married Muslim Cremated Hindu The True Story Behind Zarine Khan s Final Rites

ಅಂದ್ಹಾಗೇ ಸಿಮಿ ಗರೆವಾಲ್ ಅವರಿಗೆ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಝರೀನ್ ಖಾನ್, ತಾವು ಪಾರ್ಸಿ ಸಮುದಾಯದಲ್ಲಿ ಜನಿಸಿದ್ದಾಗಿ ಹೇಳಿದ್ದರು. ತಮ್ಮ ಮದುವೆಯ ಕುರಿತು ಮಾತನಾಡಿದ್ದ ಝರೀನ್ ನಾವು ಇಬ್ಬರ ವ್ಯಕ್ತಿತ್ವ ಸಂಪೂರ್ಣ ತದ್ವಿರುದ್ದ. ಅವರಿಗೆ ಬಿಳಿ ಅಂಗಿ, ಪ್ಯಾಂಟ್ ಮತ್ತು ಕೊಲ್ಹಾಪುರಿ ಚಪ್ಪಲಿ ಇಷ್ಟ ಆದರೆ ನನಗೆ ಸ್ಕರ್ಟ್‌ಗಳು ಮತ್ತು ರಾಕ್ ಅಂಡ್ ರೋಲ್ ಶೂ ಇಷ್ಟವಾಗುತ್ತಿತ್ತು ಎಂದು ಹೇಳಿದ್ದರು.

ಇನ್ನುಳಿದಂತೆ ಮದುವೆಗೆ ಮುನ್ನ ಮಾಡೆಲ್‌ ಆಗಿ ಹೆಸರು ಮಾಡಿದ್ದ ಝರೀನ್, ''ತೇರೆ ಘರ್ ಕೆ ಸಾಮ್ನೆ'' ಮತ್ತು ''ಏಕ್ ಫೂಲ್ ದೋ ಮಾಲಿ'' ನಂತಹ ಚಿತ್ರಗಳಲ್ಲಿ ಅಭಿನಯಿಸಿದ್ದರು. ಮದುವೆಯ ನಂತರ ಚಿತ್ರರಂಗದಿಂದ ದೂರವಾದ ಝರೀನ್ ತಮ್ಮ ಪತಿ ಸಂಜಯ್ ಖಾನ್ ಮತ್ತು ಮಕ್ಕಳಾದ ಫರಾ ಖಾನ್.. ಸಿಮೋನ್ ಅರೋರಾ.. ಸೂಸೈನ್ ಖಾನ್ ( ಹೃತಿಕ್ ರೋಷನ್ ಮಾಜಿ ಪತ್ನಿ ) ಮತ್ತು ನಟ ಝಾಯೇದ್ ಖಾನ್ ಅವರನ್ನು ಅಗಲಿದ್ದಾರೆ.

More from Filmibeat

English summary
Why was Zarine Khan, born Parsi and married to a Muslim, cremated with Hindu rituals? The family shares the emotional, unexpected story behind her final farewell.
Read more about: religion death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X