ಛೇ, ಪಾಪಾ ಅಭಿಷೇಕ್ ಬಚ್ಚನ್‌ಗೆ ಹೀಗೆ ಆಗಬಾರದಿತ್ತು...!
ಬಾಲಿವುಡ್‌ನಲ್ಲಿ ಲಕ್ಷವೆಲ್ಲಾ ಅಲಕ್ಷ್ಯ. ಒಂದೆರಡು ಕೋಟಿಗಳಂತೂ ಕಾಲ ಕಸ. ಅಲ್ಲೇನೇ ಇದ್ದರೂ 100-200 ಕೋಟಿಗಳದ್ದೇ ಕಾರು ಬಾರು ಅನ್ನುವ ಮಾತು ಈ ಹಿಂದೆ ಇತ್ತು. ಆದರೆ ಈಗ ಕಾಲ ಮೊದಲಿನಂತೆ ಇಲ್ಲ. ಬಾಲಿವುಡ್‌ಗೆ ಈಗ ಈ ಹಿಂದೆಯಂತೆ ಕುಬೇರ ವರ ಸಿಕ್ತಿಲ್ಲ. ಇದಕ್ಕೆ ಐ ವಾಂಟ್ ಟು ಟಾಕ್ ಸದ್ಯದ ಉದಾಹರಣೆ.
ಹೌದು, ಕಳೆದ ಶುಕ್ರವಾರದಂದು ಅಭಿಷೇಕ್ ಬಚ್ಚನ್ ಅಭಿನಯದ ಐ ವಾಂಟ್ ಟು ಟಾಕ್ ಚಿತ್ರ ತೆರೆಗೆ ಬಂದಿತ್ತು. ವಿಮರ್ಷಕರ ಪ್ರೀತಿಗೆ ಕೂಡ ಈ ಚಿತ್ರ ಪಾತ್ರವಾಗಿತ್ತು. ಆದರೆ, ದುರಂತ.. ಪ್ರೇಕ್ಷಕರು ಈ ಚಿತ್ರವನ್ನು ಮೊದಲೆರಡು ದಿನ ನಿರಾಕರಿಸಿದ್ದರು. ಚಿತ್ರ ನೋಡಲು ಯೋಚನೆ ಮಾಡಿದರು. ಇದಕ್ಕೆ ಕೈಗನ್ನಡಿ ಎಂಬಂತೆ ತೆರೆಗೆ ಬಂದ ಎರಡು ದಿನದಲ್ಲಿ ಚಿತ್ರದ ಗಳಿಕೆ ಪಾತಾಳಕ್ಕೆ ಕುಸಿದಿತ್ತು.

ಹೌದು, ನಿಮಗೆ ಗೊತ್ತಿರಲಿ... ಸದ್ದು ಗದ್ದಲ ಇಲ್ಲದೇ, ಹೆಚ್ಚು ಪ್ರಚಾರ ಇಲ್ಲದೇ ಬಿಡುಗಡೆಯಾದ ಈ ಚಿತ್ರ ಮೊದಲ ದಿನ ಕೇವಲ ₹25 ಲಕ್ಷವನ್ನಷ್ಟೇ ಗಳಿಸಿತ್ತು. ಈ ಮೂಲಕ ಬಚ್ಚನ್ ಕುಟುಂಬದಲ್ಲಿಯೇ ಅತ್ಯಂತ ಕಳಪೆ ಗಳಿಕೆ ಮಾಡಿದ ಚಿತ್ರ ಎನ್ನುವ ಕುಖ್ಯಾತಿಗೆ ಈ ಚಿತ್ರ ಪಾತ್ರವಾಗಿತ್ತು. ಆದರೆ, ಎರಡನೇ ದಿನ ಚಿತ್ರದ ಗಳಿಕೆಯಲ್ಲಿ ಭಾರೀ ಏರಿಕೆಯಾಯ್ತು. ಅದಕ್ಕೆ ಕಾರಣ ಮೌತ್ ಪಬ್ಲಿಸಿಟಿ. ಚಿತ್ರವನ್ನು ನೋಡಿದ ಪ್ರತಿಯೊಬ್ಬರು ಚಿತ್ರವನ್ನು ಮೆಚ್ಚಿಕೊಂಡ ಕಾರಣಕ್ಕೆ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡಿತ್ತು. ಮೊದಲ ದಿನದ ಗಳಿಕೆಗೆ ಹೋಲಿಸಿದರೆ ಎರಡನೇ ದಿನದ ಗಳಿಕೆ 108.00% ಹೆಚ್ಚಾಗಿತ್ತು. ಚಿತ್ರ ₹55 ಲಕ್ಷವನ್ನು ಗಳಿಸಿತ್ತು. ಆದರೆ ಮೂರನೇ ದಿನ ಈ ಚಿತ್ರದ ಗಳಿಕೆ ಮತ್ತೆ ನೆಲಕಚ್ಚಿತ್ತು. ₹53 ಲಕ್ಷಕ್ಕೆ ಭಾನುವಾರದ ಪ್ರದರ್ಶನವನ್ನು ಚಿತ್ರ ಕೊನೆಗೊಳಿಸಿತ್ತು.
ಹೀಗೆ ಮೂರು ದಿನದಲ್ಲಿ ಹತ್ ಹತ್ತಿರ 1 ಕೋಟಿ 30 ಲಕ್ಷವನ್ನು ಗಳಿಸಿದ್ದ ಈ ಚಿತ್ರ ಈಗ ಒಂದು ವಾರದ ಅಂತ್ಯಕ್ಕೆ ಬಹುತೇಕ ತನ್ನ ಪ್ರದರ್ಶನ ಮುಗಿಸಿದೆ. ₹02 ಕೋಟಿಯ ಗಡಿಯನ್ನು ಕೂಡ ದಾಟುವಲ್ಲಿ ಚಿತ್ರ ವಿಫಲವಾಗಿದೆ. ಬಿಡುಗಡೆಗೊಂಡು ಒಂದು ವಾರವಾದರೂ ಕೂಡ ಚಿತ್ರ ಕೇವಲ ₹ 1.94 ಕೋಟಿಯನ್ನಷ್ಟೇ ಗಳಿಸಿದೆ. ಈ ಈ ಮೂಲಕ ಅಭಿಷೇಕ್ ಬಚ್ಚನ್ ಮತ್ತು ಚಿತ್ರದ ನಿರ್ಮಾಪಕರಿಗೆ ಆಘಾತವನ್ನುಂಟು ಮಾಡಿದೆ.
ಇನ್ನುಳಿದಂತೆ ತಂದೆ ಮತ್ತು ಮಗಳ ಸುತ್ತ ಸುತ್ತುವ ಈ ಚಿತ್ರ, ಅಭಿಷೇಕ್ ಬಚ್ಚನ್ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೂ ದುರಾದೃಷ್ಟ ಅಭಿಷೇಕ್ ಬಚ್ಚನ್ ಬೆನ್ನು ಬಿಡುತ್ತಿಲ್ಲ. ಐ ವಾಂಟ್ ಟು ಟಾಕ್ ಚಿತ್ರ ನೋಡಲು ಪ್ರೇಕ್ಷಕರು ಬರುತ್ತಿಲ್ಲ.ಇನ್ನು ಈ ಹಿಂದೆ ಪಿಕು, ವಿಕ್ಕಿ ಡೋನರ್, ಅಕ್ಟೋಬರ್ ಚಿತ್ರಗಳನ್ನು ನಿರ್ದೇಶಿಸಿರುವ ಶೂಜಿತ್ ಸಿರ್ಕಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಜಾನಿ ಲಿವರ್, ಅಹಲ್ಯಾ ಬಾಮ್ರೂ, ಬನಿತಾ ಸಂಧು ಮತ್ತು ಪರ್ಲೆ ಮಾನಿ ಮುಂತಾದವರು ನಟಿಸಿದ್ದಾರೆ. ಒಟ್ನಲ್ಲಿ ಸದ್ಯಕ್ಕೆ ಐ ವಾಂಟ್ ಟು ಟಾಕ್ ಚಿತ್ರ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಹಣ ಗಳಿಸುವಲ್ಲಿ ವಿಫಲವಾಗಿದೆ. ಸದ್ಯಕ್ಕೆ ಲೆಕ್ಕಾಚಾರ ನೋಡುತ್ತಿದ್ದರೆ ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ಈ ಚಿತ್ರ ಮೂರು ಕೋಟಿಯನ್ನು ಕೂಡ ಗಳಿಸುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಬದಲು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಬೇಕಿತ್ತು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











