ಮೂರೇ ದಿನದಲ್ಲಿ 'ಪದ್ಮಾವತ್'ಗೆ ಹಾಕಿದ್ದ ಅರ್ಧ ಬಂಡವಾಳ ವಾಪಸ್ !
ಈಗ ಎಲ್ಲಿ ಕೇಳಿದರು ಬರಿ 'ಪದ್ಮಾವತ್' ಸಿನಿಮಾದೆ ಮಾತು. ರಿಲೀಸ್ ಮುಂಚೆಯೂ ಈ ಸಿನಿಮಾದ ಹವಾ.. ರಿಲೀಸ್ ಆದ ಮೇಲೆಯೂ ಇದರದ್ದೇ ಹವಾ.. ಎನ್ನುವ ಹಾಗೆ ಆಗಿದೆ. ಹೌದು, ಈಗ ದೀಪಿಕಾ ಪಡುಕೋಣೆ ಅವರ ಮಹತ್ವಾಕಾಂಕ್ಷೆಯ ಸಿನಿಮಾ 'ಪದ್ಮಾವತ್' ಬಾಕ್ಸ್ ಆಫೀಸ್ ನಲ್ಲಿ ದರ್ಬಾರ್ ಮಾಡುತ್ತಿದೆ.
'ಪದ್ಮಾವತ್' ಸಿನಿಮಾಗೆ ಹಾಕಿದ್ದ ಅರ್ಧ ಬಂಡವಾಳ ಮೂರೇ ದಿನದಲ್ಲಿ ವಾಪಸ್ ಬಂದಿದೆ. ಈ ಸಿನಿಮಾ 190 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಆಗಿತ್ತು. ಆದರೆ ಈಗಾಗಲೇ ಈ ಚಿತ್ರ ಅರ್ಧ ಬಜೆಟ್ ಅಂದರೆ ಸುಮಾರು 80 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನ ಮೊದಲ ದಿನ 17.75 ಕೋಟಿ ಮತ್ತು ಎರಡನೇ ದಿನ 31 ಕೋಟಿ ಕಲೆಕ್ಷನ್ ಮಾಡಿದ್ದ 'ಪದ್ಮಾವತ್' ಖಾತೆಯಲ್ಲಿ ಸದ್ಯ 80 ಕೋಟಿ ಜಮಾ ಆಗಿದೆ.

'ಪದ್ಮಾವತ್' ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು, ಮುಂಬೈ, ಪಶ್ಚಿಮ ಬಂಗಾಳ ದ ಬಹುತೇಕ ಸೆಂಟರ್ ಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಂತು ಸಿನಿಮಾದ ಟಿಕೆಟ್ ಸಿಕ್ಕಾಪಟ್ಟೆ ದುಬಾರಿ ಆಗಿದೆ. ಒಂದು ದಿನ ಮುಂಚಿತವಾಗಿ ಟಿಕೆಟ್ ಗಳು ಸೋಲ್ಡ್ ಔಟ್ ಆಗುತ್ತಿವೆ.
'ಪದ್ಮಾವತ್' ಸಿನಿಮಾ ಕಳೆದ ಗುರುವಾರ ರಿಲೀಸ್ ಆಗಿದೆ. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಂಜಯ್ ಲೀಲಾ ಬಸ್ಸಾಲಿ ನಿರ್ದೇಶನ ಮತ್ತು ನಿರ್ಮಾಣ ಚಿತ್ರದಲ್ಲಿದೆ. ಹಿಂದಿನಂತೆ ಈ ಸಿನಿಮಾದ ಮೂಲಕ ಕೂಡ ಬನ್ಸಾಲಿಯ ಜೋಳಿಗೆ ತುಂಬಿದೆ.


Click it and Unblock the Notifications











