ಶ್ರೀದೇವಿ ಪುತ್ರಿಯ ಚೊಚ್ಚಲ ಸಿನಿಮಾ 'ಧಡಕ್' ಮಾಡಿದ ಕಲೆಕ್ಷನ್ ಎಷ್ಟು.?

By Harshitha

'ಅತಿಲೋಕ ಸುಂದರಿ' ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ಧಡಕ್' ಭಾರತದಾದ್ಯಂತ ಬಿಡುಗಡೆ ಆಗಿದೆ. ಜಾಹ್ನವಿ-ಇಶಾನ್ ನಟನೆಯ 'ಧಡಕ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಾಲಿವುಡ್ ಸೆಲೆಬ್ರಿಟಿಗಳಿಗಂತೂ 'ಧಡಕ್' ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿದೆ. ಅನಿಲ್ ಕಪೂರ್, ಸೋನಂ ಕಪೂರ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು 'ಧಡಕ್' ಚಿತ್ರವನ್ನ ಹಾಡಿ ಹೊಗಳಿದ್ದಾರೆ.

ಆದ್ರೆ, ಪ್ರೇಕ್ಷಕರಿಗೆ ಮಾತ್ರ 'ಧಡಕ್' ಯಾಕೋ ಸಪ್ಪೆ ಅಂತ ಅನಿಸಿದೆ. 'ಧಡಕ್' ಹೇಳಿ ಕೇಳಿ ಮರಾಠಿಯ 'ಸೈರಾಟ್' ಚಿತ್ರದ ರೀಮೇಕ್. ಹೀಗಾಗಿ 'ಸೈರಾಟ್' ನೋಡಿದವರಿಗೆ 'ಧಡಕ್' ಅಷ್ಟೊಂದು ರೋಚಕ ಅಂತ ಅನಿಸಿಲ್ಲ.

Box office report: Dhadak second day collection

ಮಿಶ್ರ ಪ್ರತಿಕ್ರಿಯೆ ಇದ್ದರೂ, 'ಧಡಕ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡ್ತಿದೆ. 'ಧಡಕ್' ಬಿಡುಗಡೆ ಆದ ಮೊದಲನೇ ದಿನ (ಶುಕ್ರವಾರ) 8.71 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನೂ ಎರಡನೇ ದಿನ (ಶನಿವಾರ) 11.04 ಕೋಟಿ ಕಮಾಯಿ ಮಾಡಿದೆ. ಒಟ್ಟಾರೆ ಎರಡು ದಿನಗಳಲ್ಲಿ 'ಧಡಕ್' ಸಿನಿಮಾ 19.75 ಕೋಟಿ ಲೂಟಿ ಹೊಡೆದಿದೆ.

ಹಾಗ್ನೋಡಿದ್ರೆ, ಜಾಹ್ನವಿ ಹಾಗೂ ಇಶಾನ್... ಇಬ್ಬರೂ ಹೊಸ ಮುಖಗಳೇ. ಹೀಗಿರುವಾಗ, 'ಧಡಕ್' ಎರಡು ದಿನಗಳಲ್ಲೇ ಹತ್ತತ್ರ ಇಪ್ಪತ್ತು ಕೋಟಿ ಕಲೆಕ್ಷನ್ ಮಾಡಿದೆ ಅಂದ್ರೆ ಸುಮ್ನೆ ಮಾತಲ್ಲ.

'ಅಮ್ಮನಂತೆ ತಾರೆ ಆಗಬೇಕು' ಅಂತ ಜಾಹ್ನವಿ ಕಪೂರ್ ಬಾಲಿವುಡ್ ಗೆ ಅಡಿ ಇಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಜಾಹ್ನವಿ ಸಕ್ಸಸ್ ಆಗಿದ್ದಾರೆ ಅಂದ್ರೆ ಖಂಡಿತ ಅತಿಶಯೋಕ್ತಿ ಅಲ್ಲ.

More from Filmibeat

English summary
Ishaan Khatter-Janhvi Kapoor's Dhadak minted Rs. 11.04 crores on Saturday. The total box office collection now stands at Rs. 19.75 crores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X