For Quick Alerts
  ALLOW NOTIFICATIONS  
  For Daily Alerts

  'ದಬ್ಬಂಗ್-3' ಚಿತ್ರವನ್ನ ಬ್ಯಾನ್ ಮಾಡಿ: ಸಲ್ಮಾನ್ ಚಿತ್ರಕ್ಕೆ ನೆಟ್ಟಿಗರ ಛೀಮಾರಿ.!

  |

  ಸಲ್ಮಾನ್ ಖಾನ್ ಮತ್ತು ಪ್ರಭುದೇವ ಕಾಂಬಿನೇಶನ್ ನಲ್ಲಿ ತಯಾರಾಗಿರುವ 'ದಬ್ಬಂಗ್-3' ಚಿತ್ರ ಡಿಸೆಂಬರ್ 20 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಲ್ಮಾನ್ ಖಾನ್ ಮತ್ತು ಸುದೀಪ್ ಅಭಿನಯದ ಈ ಚಿತ್ರ ಕನ್ನಡದಲ್ಲೂ ಡಬ್ ಆಗಿ ತೆರೆಗೆ ಬರಲಿದೆ. ಎಲ್ಲೆಡೆ ಮತ್ತೆ ಚುಲ್ ಬುಲ್ ಪಾಂಡೆ ಹವಾ ಜೋರಾಗಿರುವಾಗಲೇ, ವಿವಾದದ ಸುಳಿಯಲ್ಲಿ 'ದಬ್ಬಂಗ್-3' ಸಿನಿಮಾ ಸಿಲುಕಿದೆ.

  'ದಬ್ಬಂಗ್-3' ಚಿತ್ರದ ಕೆಲ ದೃಶ್ಯಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಇತ್ತೀಚೆಗಷ್ಟೇ 'ದಬ್ಬಂಗ್-3' ಚಿತ್ರದ 'ಹುಡ್ ಹುಡ್' ಹಾಡು ರಿಲೀಸ್ ಆಗಿತ್ತು. ಇದರಲ್ಲಿ ನದಿಯ ದಂಡೆ ಮೇಲೆ ಸಾಧುಗಳು ಡ್ಯಾನ್ಸ್ ಮಾಡುತ್ತಿರುವ ದೃಶ್ಯವಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡದಂತೆ ಈಗಾಗಲೇ ಹಿಂದೂ ಜನ ಜಾಗೃತಿ ಸಮಿತಿ ಮನವಿ ಮಾಡಿದೆ.

  ಒಂದು ವೇಳೆ 'ದಬ್ಬಂಗ್-3' ಚಿತ್ರಕ್ಕೆ ಸೆನ್ಸಾರ್ ನಿಂದ ಕ್ಲೀನ್ ಚಿಟ್ ಸಿಕ್ಕರೆ, ಉಗ್ರ ಪ್ರತಿಭಟನೆ ಮಾಡುವುದಾಗಿ ಹಿಂದೂ ಜನ ಜಾಗೃತಿ ಸಮಿತಿ ಎಚ್ಚರಿಕೆ ನೀಡಿದೆ. ಈ ನಡುವೆ ಟ್ವಿಟ್ಟರ್ ನಲ್ಲಿ #BoycottDabangg3 ಟ್ರೆಂಡಿಂಗ್ ಆಗುತ್ತಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಸಲ್ಮಾನ್ ಖಾನ್ ಚಿತ್ರಕ್ಕೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ಮುಂದೆ ಓದಿರಿ...

  ಸಾಧು-ಸಂತರಿಗೆ ಅವಮಾನ.!

  ಸಾಧು-ಸಂತರಿಗೆ ಅವಮಾನ.!

  ''ದಬ್ಬಂಗ್-3' ಚಿತ್ರದ ಹಾಡೊಂದರಲ್ಲಿ ನದಿಯ ಬಳಿ ಸಾಧುಗಳು ಡ್ಯಾನ್ಸ್ ಮಾಡಿರುವುದು ಹಾಸ್ಯಾಸ್ಪದ ಮತ್ತು ಆಕ್ಷೇಪಾರ್ಹವಾಗಿದೆ. ಪಾಶ್ಚಿಮಾತ್ಯ ಶೈಲಿಯಲ್ಲಿ ಕೆಲ ಸಾಧುಗಳು ಗಿಟಾರ್ ನುಡಿಸಿದ್ದಾರೆ. ಇದು ಸಾಧು-ಸಂತರಿಗೆ ಅವಮಾನ ಮಾಡಿದ ಹಾಗೆ, ಹಿಂದೂಸ್ತಾನ ಇದನ್ನ ಸಹಿಸುವುದಿಲ್ಲ'' ಎಂಬ ಅಭಿಪ್ರಾಯ ಟ್ವಿಟ್ಟರ್ ನಲ್ಲಿ ವ್ಯಕ್ತವಾಗಿದೆ.

  ಧಾರ್ಮಿಕ ಭಾವನೆಗೆ ಧಕ್ಕೆ: 'ದಬ್ಬಂಗ್-3' ವಿರುದ್ಧ ಹಿಂದೂ ಜನ ಜಾಗೃತಿ ಸಮಿತಿ ಗರಂಧಾರ್ಮಿಕ ಭಾವನೆಗೆ ಧಕ್ಕೆ: 'ದಬ್ಬಂಗ್-3' ವಿರುದ್ಧ ಹಿಂದೂ ಜನ ಜಾಗೃತಿ ಸಮಿತಿ ಗರಂ

  ಎಲ್ಲಾ ಚಿತ್ರವನ್ನೂ ಬ್ಯಾನ್ ಮಾಡಿ.!

  ಎಲ್ಲಾ ಚಿತ್ರವನ್ನೂ ಬ್ಯಾನ್ ಮಾಡಿ.!

  ಹಿಂದೂಗಳ ಧಾರ್ಮಿಕ ಭಾವನೆ ಮತ್ತು ಹಿಂದೂಗಳ ನಂಬಿಕೆಗೆ ಧಕ್ಕೆ ತರುವ ಎಲ್ಲಾ ಚಿತ್ರಗಳನ್ನೂ ಬ್ಯಾನ್ ಮಾಡಿ ಎಂದು ಆದಿತ್ಯ ಶಾಸ್ತ್ರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

  <br />ವಾವ್.. ಸಲ್ಮಾನ್ ಖಾನ್ ಚಿತ್ರದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು.!
  ವಾವ್.. ಸಲ್ಮಾನ್ ಖಾನ್ ಚಿತ್ರದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು.!

  ಸಂಸ್ಕೃತಿಗೆ ಅವಮಾನ ಮಾಡಿದ ಹಾಗೆ

  ಸಂಸ್ಕೃತಿಗೆ ಅವಮಾನ ಮಾಡಿದ ಹಾಗೆ

  ''ನಮ್ಮ ಸಾಧು, ಮಹರ್ಷಿ, ಸಂತರ ಬಗ್ಗೆ ನಮಗೆ ಹೆಮ್ಮೆ ಇದೆ. ಇಡೀ ಜಗತ್ತು ಹಿಂಬಾಲಿಸುತ್ತಿರುವ ನಮ್ಮ ಸಾಧುಗಳಿಗೆ ಅವಮಾನ ಮಾಡುವುದು ನಮ್ಮ ಸಂಸ್ಕೃತಿಗೆ ಅಪಮಾನ ಮಾಡಿದಂತೆ'' ಎಂದು ಅಕ್ಷಯ್ ಕುಮಾರ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

  ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್

  ಸಲ್ಮಾನ್ ಅಭಿಮಾನಿಗಳು ಏನಂತಾರೆ.?

  ಸಲ್ಮಾನ್ ಅಭಿಮಾನಿಗಳು ಏನಂತಾರೆ.?

  ಅತ್ತ #BoycottDabangg3 ಟ್ರೆಂಡಿಂಗ್ ಆಗುತ್ತಿದ್ದರೆ, ಇತ್ತ ಸಲ್ಮಾನ್ ಖಾನ್ ಅಭಿಮಾನಿಗಳು #AwaitingDabangg3 ಟ್ರೆಂಡ್ ಮಾಡುತ್ತಿದ್ದಾರೆ. ಸಲ್ಮಾನ್ ಪರ ಬ್ಯಾಟಿಂಗ್ ಮಾಡುತ್ತಿರುವ ಅಭಿಮಾನಿಗಳು, ''ಸಲ್ಮಾನ್ ಯಾವಾಗಲೂ ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ'' ಎಂದಿದ್ದಾರೆ.

  English summary
  Bollywood Actor Salman Khan starrer Dabangg 3 has landed into new controversy. #BoycottDabangg3 is trending in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X