For Quick Alerts
  ALLOW NOTIFICATIONS  
  For Daily Alerts

  Boycott FilmFare: 'ಗಲ್ಲಿ ಬಾಯ್' ವಿರುದ್ಧ ಆಕ್ರೋಶಗೊಂಡ ನೆಟ್ಟಿಗರು

  |

  'ಫಿಲ್ಮ್ ಫೇರ್ 2020' ಕಾರ್ಯಕ್ರಮ ಶನಿವಾರ ರಾತ್ರಿ ನಡೆದಿದೆ. ಪ್ರಶಸ್ತಿಗಳ ಘೋಷಣೆಯಾಗಿದ್ದು, 'ಗಲ್ಲಿ ಬಾಯ್' ಅತ್ಯುತ್ತಮ ಸಿನಿಮಾವಾಗಿದೆ.

  ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ರಣ್ವೀರ್ ಸಿಂಗ್ ಪಡೆದುಕೊಂಡಿದ್ದಾರೆ. ಆಲಿಯಾ ಭಟ್ ಅತ್ಯುತ್ತಮ ನಟಿಯಾಗಿದ್ದಾರೆ. ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಝೋಯಾ ಅಖ್ತರ್ ಗೆ ಸಿಕ್ಕಿದೆ. ಅತ್ಯುತ್ತಮ ಪೋಷಕ ನಟ ಸಿದ್ಧಾಂತ್ ಚತುರ್ವೇದಿ, ಅತ್ಯುತ್ತಮ ಪೋಷಕ ನಟಿ ಅಮೃತಾ ಸುಭಾಷ್ ಆಗಿದ್ದಾರೆ. ಅತ್ಯುತ್ತಮ ಸಾಹಿತ್ಯ 'ಅಪ್ನಾ ಟೈಮ್ ಆಯೇಗಾ..' ಹಾಡಿಗೆ ಬಂದಿದೆ. ಜೊತೆಗೆ ಅತ್ಯುತ್ತಮ ಸಂಭಾಷಣೆ, ಚಿತ್ರಕತೆ, ಸಂಗೀತ ಪ್ರಶಸ್ತಿ ಎಲ್ಲವೂ 'ಗಲ್ಲಿ ಬಾಯ್' ಪಾಲಾಗಿವೆ.

  ಫಿಲ್ಮ್ ಫೇರ್ ಪ್ರಶಸ್ತಿ: ಕಪ್ಪು ಸುಂದರಿ ಹಿಡಿದು ಬೀಗಿದ 'ಗಲ್ಲಿ ಬಾಯ್' ರಣ್ವೀರ್, ಆಲಿಯಾ.! ಫಿಲ್ಮ್ ಫೇರ್ ಪ್ರಶಸ್ತಿ: ಕಪ್ಪು ಸುಂದರಿ ಹಿಡಿದು ಬೀಗಿದ 'ಗಲ್ಲಿ ಬಾಯ್' ರಣ್ವೀರ್, ಆಲಿಯಾ.!

  ಈ ಬಾರಿ ಬರೋಬ್ಬರಿ 13 ಪ್ರಶಸ್ತಿಗಳನ್ನು 'ಗಲ್ಲಿ ಬಾಯ್' ಸಿನಿಮಾ ಪಡೆದುಕೊಂಡಿದೆ. ಆದರೆ, ಈ ಸಿನಿಮಾಗಿಂತ ಉತ್ತಮ ಸಿನಿಮಾ ಬಂಧಿದ್ದರೂ, ಅದು ಫಿಲ್ಮಿಫೇರ್ ಕಣ್ಣಿಗೆ ಕಂಡಿಲ್ಲ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ #BoycottFilmFare ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

  ಅತ್ಯುತ್ತಮ ಸಿನಿಮಾ ಯಾವುದು?

  ಅತ್ಯುತ್ತಮ ಸಿನಿಮಾ ಯಾವುದು?

  'ಗಲ್ಲಿ ಬಾಯ್' ಅತ್ಯುತ್ತಮ ಸಿನಿಮಾವಾಗಿದೆ. ಆದರೆ, ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. 'ಗಲ್ಲಿ ಬಾಯ್' ಒಂದು ಸ್ಫೂರ್ತಿದಾಯಕ ಸಿನಿಮಾ ಆಗಿದ್ದರೂ, ಅದಕ್ಕಿಂತ ಒಳ್ಳೆಯ ಸಿನಿಮಾಗಳು ಎಷ್ಟೊಂದು ಬಂದಿವೆ. 'ಸೂಪರ್ 30', 'ಮಿಷನ್ ಮಂಗಲ್', 'ಕೇಸರಿ', 'ಉರಿ', 'ಚಿಚೋರೆ' ಸಿನಿಮಾಗಳಿಗ ಏಕೆ ಪ್ರಶಸ್ತಿ ಇಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

  ನಟ, ನಟಿ ಬಗ್ಗೆ ಪ್ರಶ್ನೆ

  ನಟ, ನಟಿ ಬಗ್ಗೆ ಪ್ರಶ್ನೆ

  ಅತ್ಯುತ್ತಮ ನಟ ಪ್ರಶಸ್ತಿಯನ್ನು ರಣ್ವೀರ್ ಸಿಂಗ್ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಆಲಿಯಾ ಭಟ್ 'ಗಲ್ಲಿ ಬಾಯ್' ಚಿತ್ರದ ನಟನೆಗೆ ಪಡೆದುಕೊಂಡಿದ್ದಾರೆ. ಈ ಬಗ್ಗೆಯೂ ಪ್ರಶ್ನೆ ಮಾಡಿರುವ ನೆಟ್ಟಿಗರು ಹೃತ್ತಿಕ್ ರೋಷನ್ ಬಗ್ಗೆ ಮಾತನಾಡಿದ್ದಾರೆ. 'ಸೂಪರ್ 30' ಸಿನಿಮಾದಲ್ಲಿ ಹೃತ್ತಿಕ್ ರೋಷನ್ ಅದ್ಬುತವಾಗಿ ನಟಿಸಿದ್ದರು. ಅವರ ಕೆರಿಯರ್ ನಲ್ಲಿಯೇ ಆ ಸಿನಿಮಾ ವಿಭಿನ್ನವಾಗಿತ್ತು. ಆದರೂ, ಪ್ರಶಸ್ತಿ ನೀಡದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

  Filmfare Awards South 2019: ಅತ್ಯುತ್ತಮ ನಟ ಯಶ್, ನಟಿ ಮಾನ್ವಿತಾ ಕಾಮತ್Filmfare Awards South 2019: ಅತ್ಯುತ್ತಮ ನಟ ಯಶ್, ನಟಿ ಮಾನ್ವಿತಾ ಕಾಮತ್

  ಸಾಹಿತ್ಯ ಪ್ರಶಸ್ತಿ ಬಗ್ಗೆಯೂ ಅಸಮಾಧಾನ

  ಸಾಹಿತ್ಯ ಪ್ರಶಸ್ತಿ ಬಗ್ಗೆಯೂ ಅಸಮಾಧಾನ

  'ಗಲ್ಲಿ ಬಾಯ್' ಸಿನಿಮಾದ 'ಅಪ್ನಾ ಟೈಮ್ ಆಯೇಗಾ..' ಹಾಡಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ನೀಡಲಾಗಿದೆ. ಆದರೆ, ಇದರ ಬಗ್ಗೆಯೂ ಅನೇಕರು ಪ್ರಶ್ನೆ ಮಾಡಿದ್ದಾರೆ. 'ಅಪ್ನಾ ಟೈಮ್ ಆಯೇಗಾ..' ಹಾಡಿನಲ್ಲಿ ಬಳಸಿರುವ ಪದಗಳನ್ನು ತೋರಿಸಿ ಹೇಗೆ ಫಿಲ್ಮ್ ಫೇರ್ ನೀಡಿದ್ರಿ ಎಂದು ಪ್ರಶ್ನೆ ಹಾಕಿದ್ದಾರೆ. 'ಕೇಸರಿ' ಹಾಗೂ 'ಸೂಪರ್ 30' ಹಾಡುಗಳು ಅದಕ್ಕಿಂತ ಉತ್ತಮವಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

  Filmfare Awards South 2019: ತೆಲುಗು ಸಿನಿಮಾಗಳ ವಿಜೇತರ ಪಟ್ಟಿFilmfare Awards South 2019: ತೆಲುಗು ಸಿನಿಮಾಗಳ ವಿಜೇತರ ಪಟ್ಟಿ

  ಈ ಬಾರಿ ದೊಡ್ಡ ಸವಾಲು ಇತ್ತು

  ಈ ಬಾರಿ ದೊಡ್ಡ ಸವಾಲು ಇತ್ತು

  ಈ ಬಾರಿಯ ಫಿಲ್ಮ್ ಫೇರ್ 2020 ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲು ದೊಡ್ಡ ಸವಾಲು ಇತ್ತು. ಕಳೆದ ವರ್ಷ ಬಾಲಿವುಡ್ ತುಂಬ ಒಳ್ಳೆ ಒಳ್ಳೆಯ ಸಿನಿಮಾಗಳು ಬಂದಿದ್ದವು. 'ಸೂಪರ್ 30', 'ಆರ್ಕಿಕಲ್ 15', 'ಮಿಷನ್ ಮಂಗಲ್', 'ಸಾಂಡ್ ಕಿ ಆಂಕ್', 'ಉರಿ', 'ಚಿಚೋರೆ' ಹೀಗೆ ಒಂದಕ್ಕಿಂತ ಒಂದು ಸಿನಿಮಾಗಳು ತುಂಬ ಚೆನ್ನಾಗಿ ಇದ್ದವು.

  English summary
  Boycott FilmFare hashtag trending on twitter. Netizens unhappy about FilmFare 2020 selections.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X