For Quick Alerts
  ALLOW NOTIFICATIONS  
  For Daily Alerts

  'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಬಾಯ್‌ಕಾಟ್‌ಗೆ ಒತ್ತಾಯ: ಅಮೀರ್ ಖಾನ್ ಮಾಡಿದ ತಪ್ಪೇನು?

  |

  ಅಮೀರ್ ಖಾನ್ ನಟನೆಯ ಹೊಸ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಟ್ರೇಲರ್ ಬಿಡುಗಡೆ ನಿನ್ನೆ (ಮೇ 29) ಅದ್ಧೂರಿಯಾಗಿ ಆಗಿದೆ. ಐಪಿಎಲ್ ಫೈನಲ್ ಪಂದ್ಯದ ನಡುವೆ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ ಅಮೀರ್ ಖಾನ್.

  'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಟ್ರೇಲರ್‌ಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ ಈ ನಡುವೆ ಕೆಲವರು ಸಿನಿಮಾ ನಿಷೇಧಿಸುವಂತೆಯೂ ಒತ್ತಾಯಿಸಿದ್ದಾರೆ. 'ಬಾಯ್‌ಕಾಟ್‌ಲಾಲ್ ಸಿಂಗ್ ಛಡ್ಡಾ' ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ.

  ಆಮಿರ್ ಖಾನ್ 'ಲಾಲ್‌ ಸಿಂಗ್' ಅವತಾರಕ್ಕೆ ಭಾರಿ ಮೆಚ್ಚುಗೆ!ಆಮಿರ್ ಖಾನ್ 'ಲಾಲ್‌ ಸಿಂಗ್' ಅವತಾರಕ್ಕೆ ಭಾರಿ ಮೆಚ್ಚುಗೆ!

  ಅಮೀರ್ ಖಾನ್‌ ಹಾಗೂ ಕರೀನಾ ಕಪೂರ್‌ರ ಹಳೆಯ ವಿವಾದಾತ್ಮಕ ಹೇಳಿಕೆಗಳನ್ನು ಈಗ ಮುನ್ನೆಲೆಗೆ ತಂದು, 'ಲಾಲ್ ಸಿಂಗ್ ಛಡ್ಡಾ' ಸಿನಿಮಾವನ್ನು ನಿಷೇಧಿಸುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

  ''ಅಮೀರ್ ಖಾನ್‌ಗೆ ಬುದ್ಧಿ ಕಲಿಸಿ''

  ''ಅಮೀರ್ ಖಾನ್‌ಗೆ ಬುದ್ಧಿ ಕಲಿಸಿ''

  ಅಮೀರ್ ಖಾನ್ ಹಿಂದೊಮ್ಮೆ, ''ಶಿವಲಿಂಗಕ್ಕೆ ಹಾಲು ಸುರಿವ ಬದಲು ಅದೇ ಹಾಲನ್ನು ಮಕ್ಕಳಿಗೆ ನೀಡಿ ಅದರಿಂದ ಸಹಾಯವಾದರೂ ಆಗುತ್ತದೆ'' ಎಂದಿದ್ದರು. ಅಮೀರ್ ಖಾನ್‌ರ ಆ ಹೇಳಿಕೆ ಆಗ ತೀವ್ರ ವಿವಾದ ಎಬ್ಬಿಸಿದ್ದವು. ಬಳಿಕ ''ದೇಶದಲ್ಲಿ ಅಸಹನೆ ಹೆಚ್ಚುತ್ತಿದೆ, ಮಕ್ಕಳ ಭವಿಷ್ಯಕ್ಕಾಗಿ ದೇಶ ಬಿಟ್ಟು ಹೋಗೋಣ ಎಂದು ನನ್ನ ಪತ್ನಿ ಕಿರಣ್ ರಾವ್ ಹೇಳಿದ್ದಳು'' ಎಂದು ಒಮ್ಮೆ ಹೇಳಿದ್ದರು. ಆಗಲೂ ಅಮೀರ್ ಖಾನ್ ಹೇಳಿಕೆಗೆ ತೀವ್ರ ವಿರೋಧ ಎದುರಾಗಿತ್ತು. ಈಗ ಈ ಹೇಳಿಕೆಗಳನ್ನು ಪುನಃ ಮುನ್ನೆಲೆಗೆ ತಂದಿರುವ ಕೆಲವು ನೆಟ್ಟಿಗರು, 'ಅಮೀರ್ ಖಾನ್‌ಗೆ ಬುದ್ಧಿ ಕಲಿಸಲು 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ನಿಷೇಧಿಸಿ, 'ಹಿಂದು ವಿರೋಧಿ ಹೇಳಿಕೆ ನೀಡಿದ ಅಮೀರ್ ಖಾನ್ ಸಿನಿಮಾ ನೋಡಬೇಡಿ' ಎಂದು ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.

  ಕರೀನಾ ಕಪೂರ್ ಹಳೆಯ ಹೇಳಿಕೆ

  ಕರೀನಾ ಕಪೂರ್ ಹಳೆಯ ಹೇಳಿಕೆ

  'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಕರೀನಾ ಕಪೂರ್ ಹಳೆಯ ಹೇಳಿಕೆಯೊಂದನ್ನು ಸಹ ನೆಟ್ಟಿಗರು ಹೆಕ್ಕಿ ತೆಗೆದಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಜೊತೆಗಿನ ಸಂದರ್ಶನದಲ್ಲಿ ನೆಪೊಟಿಸಮ್‌ ಬಗ್ಗೆ ಮಾತನಾಡಿದ್ದ ಕರೀನಾ ಕಪೂರ್, ''ಸ್ಟಾರ್ ನಟರ ಮಕ್ಕಳ ಸಿನಿಮಾಗಳನ್ನು ನೋಡಿದ್ದು ಇದೇ ಜನ, ಅವರೇ ಸ್ಟಾರ್ ನಟರ ಮಕ್ಕಳನ್ನು ಸ್ಟಾರ್‌ಗಳನ್ನಾಗಿ ಮಾಡಿದ್ದು, ನಿಮಗೆ ಸ್ಟಾರ್ ನಟರ ಮಕ್ಕಳು ನಟರಾಗುವುದು ಇಷ್ಟವಿಲ್ಲದಿದ್ದರೆ ಅವರ ಸಿನಿಮಾವನ್ನು ನೋಡಬೇಡಿ, ನಾವು ನಿಮಗೆ ಬಲವಂತ ಮಾಡಿಲ್ಲ'' ಎಂದಿದ್ದರು. ಈ ಹೇಳಿಕೆಯನ್ನೂ ಇಟ್ಟುಕೊಂಡು ಈಗ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ನಿಷೇಧಕ್ಕೆ ಒತ್ತಾಯಿಸಲಾಗುತ್ತಿದೆ.

  ಬಾಯ್‌ಕಾಟ್ ಟ್ರೆಂಡ್ ಸಾಮಾನ್ಯವಾಗಿದೆ

  ಬಾಯ್‌ಕಾಟ್ ಟ್ರೆಂಡ್ ಸಾಮಾನ್ಯವಾಗಿದೆ

  ಬಾಲಿವುಡ್‌ನಿಂದ ಯಾವುದೇ ಬಿಗ್‌ಬಜೆಟ್ ಸಿನಿಮಾ ಬಂದರು ಅದರ ವಿರುದ್ಧ ಯಾರಾದರೂ ಬಾಯ್‌ಕಾಟ್ ಟ್ರೆಂಡ್ ಮಾಡುವುದು ಸಾಮಾನ್ಯವೇ. ಅದರಲ್ಲಿಯೂ ಬಾಲಿವುಡ್‌ನ ಖಾನ್‌ಗಳ ಸಿನಿಮಾ ತೆರೆಗೆ ಬರುತ್ತಿದೆ ಎಂದರಂತೂ ಈ ಟ್ರೆಂಡ್ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಬಾಲಿವುಡ್‌ನ ಹಲವು ಸಿನಿಮಾಗಳಿಗೆ ಒಂದಲ್ಲ ಒಂದು ಕಾರಣ ನೀಡಿ ಬಾಯ್‌ಕಾಟ್ ಟ್ರೆಂಡ್ ಮಾಡಲಾಗುತ್ತಿದೆ.

  ಆಗಸ್ಟ್ 11 ರಂದು ಬಿಡುಗಡೆ

  ಆಗಸ್ಟ್ 11 ರಂದು ಬಿಡುಗಡೆ

  'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಸಿನಿಮಾವು ಆಗಸ್ಟ್ 11 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ಅಮೀರ್ ಖಾನ್ ಮೊದಲ ಬಾರಿಗೆ ಸಿಖ್ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಕರೀನಾ ಕಪೂರ್ ನಾಯಕಿ. ಇಂಗ್ಲೀಷ್‌ನ 'ಫಾರೆಸ್ಟ್ ಗಂಫ್' ಕೃತಿ ಆಧರಿಸಿ ಈ ಸಿನಿಮಾ ಮಾಡಲಾಗಿದೆ. 'ಫಾರೆಸ್ಟ್ ಗಂಫ್' ಹೆಸರಿನಲ್ಲಿ ಈಗಾಗಲೇ ಇಂಗ್ಲೀಷ್‌ನಲ್ಲಿ ಸಿನಿಮಾ ಬಂದಿದ್ದು, ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳಲ್ಲಿ ಒಂದೆಂದು ಹೆಸರು ಗಳಿಸಿದೆ ಆ ಸಿನಿಮಾ. 'ಲಾಲ್ ಸಿಂಗ್ ಛಡ್ಡಾ' ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ,ಚಿತ್ರಕತೆ ಬರೆದಿರುವುದು ಅತುಲ್ ಕುಲಕರ್ಣಿ, ತೆಲುಗಿನ ಸ್ಟಾರ್ ನಟ ನಾಗಚೈತನ್ಯ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Boycott Laal Singh Chaddha trending on twitter. Some netizen posting Aamir Khan's old controversial statements and demanding to boycott his latest movie Laal Singh Chaddha.
  Monday, May 30, 2022, 15:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X