For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ 'ಲಕ್ಷ್ಮಿ ಬಾಂಬ್' ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರ ಅಭಿಯಾನ: ಕಾರಣವೇನು?

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಲಕ್ಷ್ಮಿ ಬಾಂಬ್ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ಬಿಡುಗಡೆಯಾಗಿ 20ಗಂಟೆಯಲ್ಲಿ 7 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ. ಈ ಟ್ರೈಲರ್ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೂ ಅಕ್ಷಯ್ ಸಿನಿಮಾವನ್ನು ಬಹಿಷ್ಕರಿಸುವಂತೆ ನೆಟ್ಟಿಗರು ಅಭಿಯಾನ ಮಾಡುತ್ತಿದ್ದಾರೆ.

  ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತಿದ್ದಂತೆ ಯೂಟ್ಯೂಬ್ ನಲ್ಲಿ ಲಕ್ಷ್ಮಿ ಬಾಂಬ್ ಟ್ರೈಲರ್ ನ ಲೈಕ್ಸ್ ಮತ್ತು ಡಿಸ್ ಲೈಕ್ಸ್ ಸಂಖ್ಯೆಯನ್ನು ಹೈಡ್ ಮಾಡಲಾಗಿದೆ. ಹೆಚ್ಚು ಡಿಸ್ ಲೈಕ್ ಬಂದರೆ ಕಾಣಬಾರದು ಎನ್ನುವ ಕಾರಣಕ್ಕೆ ಹೈಡ್ ಮಾಡಲಾಗಿದೆ. ಮುಂದೆ ಓದಿ..

  ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮಿ ಬಾಂಬ್' ಟ್ರೈಲರ್ ಬಿಡುಗಡೆ

  ಬಾಲಿವುಡ್ ನಲ್ಲಿ ನೆಪೋಟಿಸಂ ಬಿರುಗಾಳಿ

  ಬಾಲಿವುಡ್ ನಲ್ಲಿ ನೆಪೋಟಿಸಂ ಬಿರುಗಾಳಿ

  ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ನೆಪೋಟಿಸಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕ ನಟ-ನಟಿಯರ ವಿರುದ್ಧ ನೆಪೋಟಿಸಂ ಆರೋಪ ಕೇಳಿ ಬರುತ್ತಿದೆ. ಇತ್ತೀಚಿಗೆ ರಿಲೀಸ್ ಆದ ಸಡಕ್-2, ಗುಂಜಾನ್ ಸಕ್ಸೇನಾ, ಖಾಲಿ ಪೀಲಿ ಸಿನಿಮಾಗಳು ನೋಪೋಟಿಸಂ ಹೊಡೆತಕ್ಕೆ ಸಿಲುಕಿ, ಭಾರಿ ವಿರೋಧ ವ್ಯಕ್ತವಾಗಿತ್ತು. ನೆಟ್ಟಿಗರಿಂದ ಸಿಕ್ಕಾಪಟ್ಟೆ ಡಿಸ್ ಲೈಕ್ಸ್ ಹರಿದುಬಂದಿತ್ತು.

  ಡ್ರಗ್ಸ ದಂಧೆ ವಿಚಾರವಾಗಿ ಅಕ್ಷಯ್ ಹೇಳಿಕೆಗೆ ವಿರೋಧ

  ಡ್ರಗ್ಸ ದಂಧೆ ವಿಚಾರವಾಗಿ ಅಕ್ಷಯ್ ಹೇಳಿಕೆಗೆ ವಿರೋಧ

  ಇದೀಗ ಅಕ್ಷಯ್ ಕುಮಾರ್ ಸಿನಿಮಾಗೂ ವಿರೋಧ ವ್ಯಕ್ತವಾಗುತ್ತಿದೆ. ಅಕ್ಷಯ್ ಸಿನಿಮಾಗೆ ನೆಪೋಟಿಸಂ ಬಿಸಿ ತಟ್ಟದಿದ್ದರೂ, ಇತ್ತೀಚಿಗಷ್ಟೆ ಅಕ್ಷಯ್ ಡ್ರಗ್ಸ ದಂಧೆ ವಿಚಾರವಾಗಿ ನೀಡಿರುವ ಪ್ರತಿಕ್ರಿಯೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಡ್ರಗ್ಸ ದಂಧೆ ವಿಚಾರದಲ್ಲಿ ನಟ ಅಕ್ಷಯ್ ಕುಮಾರ್ ಚಿತ್ರರಂಗವನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನುವ ಆರೋಪ ವ್ಯಕ್ತವಾಗುತ್ತಿದೆ. ಹಾಗಾಗಿ ಅಕ್ಷಯ್ ಕುಮಾರ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

  ಸುಶಾಂತ್ ಸಾವು, ಡ್ರಗ್ಸ್ ತನಿಖೆ ಕುರಿತು ಅಕ್ಷಯ್ ಕುಮಾರ್ ಮೊದಲ ಸಲ ಪ್ರತಿಕ್ರಿಯೆ

  #BoycottLaxmmiBomb ಟ್ರೆಂಡ್

  #BoycottLaxmmiBomb ಟ್ರೆಂಡ್

  ಸುಶಾಂತ್ ಅಭಿಮಾನಿಗಳು ಇನ್ನೂ ಸುಶಾಂತ್ ಸಾವಿಗೆ ಇನ್ನು ನ್ಯಾಯಸಿಕ್ಕಿಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ #BoycottLaxmmiBomb ಹ್ಯಾಷ್ ಟ್ಯಾಗ್ ಕ್ರಿಯೇಟ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಹ್ಯಾಷ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿದೆ.

  Rocking Star Yash son, ಅಪ್ಪ-ಮಗನ ಕ್ಯೂಟ್ ವಿಡಿಯೋ ರಾಧಿಕಾ ಪಂಡಿತ್ | Filmibeat Kannada
  ರಾಘವ ಲಾರೆನ್ಸ್ ನಿರ್ದೇಶನ

  ರಾಘವ ಲಾರೆನ್ಸ್ ನಿರ್ದೇಶನ

  ಅಂದ್ಹಾಗೆ, ಲಕ್ಷ್ಮಿ ಬಾಂಬ್ ತಮಿಳಿನ ಕಾಂಚನಾ ಚಿತ್ರದ ರೀಮೇಕ್. ರಾಘವ ಲಾರೆನ್ಸ್ ನಟಿಸಿ, ನಿರ್ದೇಶಿಸಿದ್ದ ಈ ಚಿತ್ರವನ್ನು ಯಥಾವತ್ತಾಗಿ ಹಿಂದಿಗೆ ತರಲಾಗಿದೆ. ವಿಶೇಷ ಅಂದ್ರೆ ಹಿಂದಿಯಲ್ಲಿ ರಾಘವ ಲಾರೆನ್ಸ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಲಾರೆನ್ಸ್ ಮಾಡಿದ್ದ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಇನ್ನು ನವೆಂಬರ್ 9 ರಂದು ಲಕ್ಷ್ಮಿ ಬಾಂಬ್ ಸಿನಿಮಾ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗುತ್ತಿದೆ.

  English summary
  Boycott LaxmmiBomb Trends After Fans trolls Akshay Kumar new horror comedy movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X