For Quick Alerts
  ALLOW NOTIFICATIONS  
  For Daily Alerts

  'ತಾನಾಜಿ' ವಿರುದ್ಧ ತಿರುಗಿಬಿದ್ದ ಕನ್ನಡಿಗರು: ಅಜಯ್ ದೇವ್ಗನ್ ಚಿತ್ರಕ್ಕೆ ಬಹಿಷ್ಕಾರ ಭೀತಿ.!

  |

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುತ್ತಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ತೊಂದರೆ ಉಂಟಾಗಿತ್ತು.

  ಗಡಿ ವಿವಾದದಿಂದಾಗಿ ಮಹಾರಾಷ್ಟ್ರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಶೋ ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಬೇಸರ ವ್ಯಕ್ತಪಡಿಸಿದ್ದರು.

  ಮಹಾರಾಷ್ಟ್ರದಲ್ಲಿ ಕನ್ನಡ ಚಿತ್ರದ ಪ್ರದರ್ಶನವನ್ನು ತಡೆದ ಶಿವಸೇನೆಗೆ ತಕ್ಕ ಪ್ರತ್ಯುತ್ತರ ನೀಡಬೇಕು. ಕರ್ನಾಟಕದಲ್ಲಿ ಹಿಂದಿಯ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರವನ್ನ ಬಹಿಷ್ಕರಿಸಬೇಕು ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಸದ್ಯ #BoycottTanhaji ಟ್ರೆಂಡ್ ಆಗುತ್ತಿದೆ. ಆಯ್ದ ಕೆಲ ಟ್ವೀಟ್ ಗಳು ಇಲ್ಲಿವೆ, ನೋಡಿ...

  ಕರ್ನಾಟಕದಲ್ಲಿ 'ತಾನಾಜಿ' ಬಹಿಷ್ಕರಿಸಿ

  ಕರ್ನಾಟಕದಲ್ಲಿ 'ತಾನಾಜಿ' ಬಹಿಷ್ಕರಿಸಿ

  ''ಮಹಾರಾಷ್ಟ್ರದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ತಡೆದ ಶಿವಸೇನೆಯವರಿಗೆ ನಾವು ಪ್ರತ್ಯುತ್ತರ ನೀಡಬೇಕು. 'ತಾನಾಜಿ' ಚಿತ್ರವನ್ನು ಕರ್ನಾಟಕದಲ್ಲಿ ಬಹಿಷ್ಕರಿಸಬೇಕು'' ಎಂದು ರಾಘವೇಂದ್ರ.ಎಸ್.ರಾವ್ ಎಂಬುವರು ಟ್ವೀಟ್ ಮಾಡಿದ್ದಾರೆ.

  ವಿವಾದದಲ್ಲಿ ಅಜಯ್ ದೇವಗಾನ್ 'ತಾನಾಜಿ' ಚಿತ್ರ: NCPಯಿಂದ ಚಿತ್ರತಂಡಕ್ಕೆ ಬೆದರಿಕೆವಿವಾದದಲ್ಲಿ ಅಜಯ್ ದೇವಗಾನ್ 'ತಾನಾಜಿ' ಚಿತ್ರ: NCPಯಿಂದ ಚಿತ್ರತಂಡಕ್ಕೆ ಬೆದರಿಕೆ

  ಗಡಿಭಾಗದಲ್ಲಿ ಬಹಿಷ್ಕರಿಸಿ

  ಗಡಿಭಾಗದಲ್ಲಿ ಬಹಿಷ್ಕರಿಸಿ

  ''ಗಡಿಭಾಗದಲ್ಲಿ.. ಅದರಲ್ಲೂ ಬೆಳಗಾವಿಯಲ್ಲಿ 'ತಾನಾಜಿ' ಚಿತ್ರವನ್ನು ಬಹಿಷ್ಕರಿಸಿ. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಅಭಿಮಾನಿಯೂ #BoycottTanhaji ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಬೇಕು. ಶಿವಸೇನೆ ಮಾಡಿರುವ ಕೆಲಸ ಕನ್ನಡಿಗರಿಗೆ ಅಗೌರವ ತರುವಂಥದ್ದು. ನಾವೆಲ್ಲರೂ ಕೈಜೋಡಿಸಿ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸೋಣ'' ಎಂದು ಅಶ್ವಿನ್ ಎಂಬುವರು ಟ್ವೀಟ್ ಮಾಡಿದ್ದಾರೆ.

  'ಮರಾಠಿ ಮುಲ್ಗಿ'ಯಾಗಿ ಕಾಜೋಲ್: 'ತಾನಾಜಿ' ಚಿತ್ರದ ಫಸ್ಟ್ ಲುಕ್ ಔಟ್'ಮರಾಠಿ ಮುಲ್ಗಿ'ಯಾಗಿ ಕಾಜೋಲ್: 'ತಾನಾಜಿ' ಚಿತ್ರದ ಫಸ್ಟ್ ಲುಕ್ ಔಟ್

  ನಮಗೆ ಬೇಡ

  ನಮಗೆ ಬೇಡ

  ''ಮಹಾರಾಷ್ಟ್ರದಲ್ಲಿ ಕನ್ನಡದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ತಡೆದಿದ್ದಾರೆ. ಕನ್ನಡಿಗರಾದ ನಮಗೆ 'ತಾನಾಜಿ' ಚಿತ್ರ ಬೇಡ'' ಎಂಬ ಟ್ವೀಟ್ ಗಳೇ ಹೆಚ್ಚಾಗಿವೆ.

  ಕನ್ನಡಿಗರು ನೋಡಬೇಡಿ

  ಕನ್ನಡಿಗರು ನೋಡಬೇಡಿ

  ''ಕನ್ನಡಿಗರಲ್ಲೊಂದು ಕಳಕಳಿಯ ಪ್ರಾರ್ಥನೆ. ನಮ್ಮ ಬಾವುಟಕ್ಕೆ ಬೆಂಕಿ ಹಚ್ಚಿ, ಓಡುತ್ತಿದ್ದ ಕನ್ನಡ ಚಿತ್ರವನ್ನು ನಿಲ್ಲಿಸಿದ ಮರಾಠರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು. ಜನವರಿ 7 ರಂದು ಮರಾಠಿ ವೀರನ ಕಥೆಯಾಧಾರಿತ ಹಿಂದಿ ಚಿತ್ರ 'ತಾನಾಜಿ' ಬಿಡುಗಡೆ ಆಗುತ್ತಿದೆ. ದಯವಿಟ್ಟು ಯಾವ ಕನ್ನಡಿಗರು ಈ ಚಿತ್ರವನ್ನು ನೋಡಬೇಡಿ'' ಎಂದು ಕನ್ನಡ ಸಿನಿ ಪ್ರಿಯರೊಬ್ಬರು ಕಾಮೆಂಟ್ ಮಾಡಿದ್ದಾರೆ.

  'ತಾನಾಜಿ' ಚಿತ್ರದ ಕುರಿತು...

  'ತಾನಾಜಿ' ಚಿತ್ರದ ಕುರಿತು...

  ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜ್ ಬಳಿ ಜನರಲ್ ಆಗಿದ್ದ ಮರಾಠಿ ವೀರ ತಾನಾಜಿ ಮಾಲುಸರೆ ಜೀವನ ಚರಿತ್ರೆ ಆಧಾರಿತ ಚಿತ್ರ 'ತಾನಾಜಿ: ದಿ ಅನ್ ಸಂಗ್ ವಾರಿಯರ್'. ಐತಿಹಾಸಿಕ ಚಿತ್ರವಾಗಿರುವ ಇದರಲ್ಲಿ ಸೈಫ್ ಅಲಿ ಖಾನ್, ಶರದ್ ಖೇಲ್ಕರ್, ಲೂಕ್ ಕೆನ್ನಿ, ಪದ್ಮಾವತಿ ರಾವ್, ಜಗಪತಿ ಬಾಬು, ಪಂಕಜ್ ತ್ರಿಪಾಠಿ, ನೇಹಾ ಶರ್ಮಾ ಮುಂತಾದವರ ದೊಡ್ಡ ತಾರಾಬಳಗವಿದೆ. ಚಿತ್ರಕ್ಕೆ ಓಂ ರಾವುತ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Bollywood Actor Ajay Devgan starrer Tanhaji has landed into a new controversy. #BoycottTanhaji is trending in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X