For Quick Alerts
  ALLOW NOTIFICATIONS  
  For Daily Alerts

  'ಚಪಾಕ್' ಸಿನಿಮಾಗೆ ದೊಡ್ಡ ವಿರೋಧ: ಕೆಂಗಣ್ಣಿಗೆ ಗುರಿಯಾದ ದೀಪಿಕಾ

  |

  ದೆಹಲಿಯ ಜೆ ಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬೆಂಬಲ ನೀಡಿದ್ದಾರೆ. ಇದು ಅನೇಕರ ವಿರೋಧಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಸಾಕಷ್ಟು ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ಈ ಘಟನೆ ದೀಪಿಕಾ ಪಡುಕೋಣೆ ನಟನೆಯ 'ಚಪಾಕ್' ಸಿನಿಮಾದ ಮೇಲೆ ಪರಿಣಾಮ ಬೀರಿದೆ. ದೀಪಿಕಾ ಮೇಲಿನ ಕೋಪದಿಂದ ಈ ಸಿನಿಮಾವನ್ನು ನೋಡುವುದಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ #boycottchhapaak ಎನ್ನುವ ಅಭಿಯಾನ ನಡೆಯುತ್ತಿದೆ.

  ಜೆ ಎನ್ ಯು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ದೀಪಿಕಾ ಪಡುಕೋಣೆಜೆ ಎನ್ ಯು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ದೀಪಿಕಾ ಪಡುಕೋಣೆ

  ದೊಡ್ಡ ಮಟ್ಟದ ಬೆಂಬಲದಿಂದ #boycottchhapaak ಟ್ವಿಟ್ಟರ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿದೆ. ಹಲವರು 'ಚಪಾಕ್' ಚಿತ್ರವನ್ನು ಬಾಯ್ ಕಾಟ್ ಮಾಡಲು ನಿರ್ಧಾರ ಮಾಡಿದ್ದಾರೆ. ಬುಕ್ ಮೈ ಶೋ ನಲ್ಲಿ ಬುಕ್ ಮಾಡಿದ್ದ ಟಿಕೆಟ್ ಅನ್ನು ಕೆಲವರು ಕ್ಯಾನ್ಸಲ್ ಮಾಡಿದ್ದಾರೆ.

  'ಚಪಾಕ್' ಸಿನಿಮಾ ಜನವರಿ 10 ರಂದು ಬಿಡುಗಡೆ ಆಗುತ್ತಿದೆ. ಆಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಅಗರ್ ವಾಲ್ ಜೀವನದ ಕಥೆ ಚಿತ್ರದಲ್ಲಿದೆ. ಮೇಘನಾ ಗುಲ್ಜಾರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

  ಬಿಜೆಪಿಯೇ ಹಿಂದೆ ನಿಂತು ಜೆಎನ್ ಯುನಲ್ಲಿ ಹಿಂಸಾಚಾರ ಮಾಡಿಸಿತಾ?

  ಇತ್ತೀಚಿಗಷ್ಟೆ ಜೆ ಎನ್ ಯು ಕ್ಯಾಂಪಸ್ ನಲ್ಲಿ ಮುಸುಕುದಾರಿಗಳು ವಿದ್ಯಾರ್ಥಿ ಹಾಗು ಶಿಕ್ಷಕರ ಮೇಲೆ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಕೂಡ ಹಲ್ಲೆಗೆ ಒಳಗಾಗಿದ್ದರು. ಇದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ನಿನ್ನೆ (ಜನವರಿ 7) ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು.

  English summary
  Boycottchhapaak hashtag trending number 1 in twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X