For Quick Alerts
  ALLOW NOTIFICATIONS  
  For Daily Alerts

  ಸಲ್ಲು ಭಾಯ್ ವಿರುದ್ಧ ಮತ್ತೆ ಆಕ್ರೋಶ: 'ಬಾಯ್‌ಕಟ್ ಸಲ್ಮಾನ್' ಟ್ರೆಂಡ್

  |

  ಸಲ್ಮಾನ್ ಖಾನ್ ಟಾರ್ಗೆಟ್ ಆಗುವುದು ಹೊಸತೇನಲ್ಲ. ಬಹಳ ಸಲ ಸಲ್ಲು ಭಾಯ್ ನೆಟ್ಟಿಗರಿಂದ ಟ್ರೋಲ್ ಆಗಿದ್ದಾರೆ. ಬೇಡವಾದ ಕಾರಣಕ್ಕೆ ಹೆಚ್ಚು ಸಲ ಭಾಯಿಜಾನ್ ಟೀಕೆಗೆ ಒಳಗಾಗಿದ್ದಾರೆ. ಆದರೆ, ಅದ್ಯಾವುದಕ್ಕೂ ದಬಾಂಗ್ ನಟ ಪ್ರತಿಕ್ರಿಯೆ ಕೊಟ್ಟಿಲ್ಲ. ಈಗ ಬಾಯ್‌ಕಟ್‌ ಸಲ್ಮಾನ್ ಖಾನ್ (BoycottSalmanKhan) ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.

  ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಸಲ್ಮಾನ್ ಖಾನ್ ವಿರುದ್ಧ ಟ್ರೋಲ್ ಮಾಡ್ತಿದ್ದು, 'ಬಾಯ್‌ಕಟ್ ಸಲ್ಮಾನ್ ಖಾನ್' ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ. ಸುಶಾಂತ್ ಸಿಂಗ್ ಸಾವಿಗೆ ಇನ್ನು ನ್ಯಾಯ ಸಿಕ್ಕಿಲ್ಲ. ಸುಶಾಂತ್ ಸಾವಿಗೆ ಬಾಲಿವುಡ್‌ನ ಪ್ರಭಾವಿಗಳು ಕಾರಣ, ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

  'ಟೈಗರ್-3 ಚಿತ್ರದಲ್ಲಿ ನಾನು ನಟಿಸುತ್ತಿಲ್ಲ': ಇಮ್ರಾನ್ ಹಶ್ಮಿ ಅಚ್ಚರಿ'ಟೈಗರ್-3 ಚಿತ್ರದಲ್ಲಿ ನಾನು ನಟಿಸುತ್ತಿಲ್ಲ': ಇಮ್ರಾನ್ ಹಶ್ಮಿ ಅಚ್ಚರಿ

  ಕರಣ್ ಜೋಹರ್, ಮಹೇಶ್ ಭಟ್, ಸಲ್ಮಾನ್ ಖಾನ್ ಅಂತಹ ಖ್ಯಾತನಾಮರ ವಿರುದ್ಧ ಸುಶಾಂತ್ ಅಭಿಮಾನಿಗಳು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೀಗ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಲ್ಮಾನ್ ಖಾನ್‌ರನ್ನು ಮತ್ತು ಅವರ ಮುಂದಿನ ಸಿನಿಮಾಗಳನ್ನು ಬಾಯ್‌ಕಟ್ ಮಾಡಿ ಎಂದು ಟ್ವಿಟ್ಟರ್‌ನಲ್ಲಿ ಅಭಿಯಾನ ಮಾಡಲಾಗ್ತಿದೆ.

  ಸಲ್ಮಾನ್ ಸಿನಿಮಾಗಳನ್ನು ಯಾರೂ ನೋಡಬೇಡಿ ಎಂದು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅದರಲ್ಲಿ ಕೆಲವು ಕಾಮೆಂಟ್‌ಗಳನ್ನು ಆಯ್ಕೆ ಮಾಡಿ ಇಲ್ಲಿ ವರದಿ ಮಾಡಲಾಗಿದೆ.

  - ''ನಾವು ಈ ಒಬ್ಬ ವ್ಯಕ್ತಿಯನ್ನು ಬಹಿಷ್ಕರಿಸಿದರೆ ನಾವು ಸ್ವಚ್ಛತೆಗೆ ಕಾರಣವಾಗುತ್ತೇವೆ''

  - ''ಜೂನ್ 7 ರಂದು ಅರ್ಬಾಜ್ ಖಾನ್, ಸಂದೀಪ್ ಸಿಂಗ್‌ಗೆ ಕರೆ ಮಾಡಿದ್ದೇಕೆ?''

  - ''ಸಲ್ಮಾನ್ ಖಾನ್ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿ''

  - ''ಒಬ್ಬ ಉತ್ತಮ ಪ್ರತಿಭೆಯನ್ನು ಉದ್ದೇಶಪೂರ್ವಕವಾಗಿ ಬೆಳೆಯಲು ಬಿಡುವುದಿಲ್ಲವೋ ಆಗ ಆ ಉದ್ಯಮ ಸಂಪೂರ್ಣ ಕುಸಿಯುತ್ತದೆ''

  ಏರ್ಪೋಟ್‌ನಲ್ಲಿ ಸಲ್ಮಾನ್ ಖಾನ್ ತಡೆದಿದ್ದ ಅಧಿಕಾರಿಗೆ ದಂಡ ವಿಧಿಸಿಲ್ಲ: CISFಏರ್ಪೋಟ್‌ನಲ್ಲಿ ಸಲ್ಮಾನ್ ಖಾನ್ ತಡೆದಿದ್ದ ಅಧಿಕಾರಿಗೆ ದಂಡ ವಿಧಿಸಿಲ್ಲ: CISF

  - ''ನಮ್ಮ ದೇಶದ ತ್ಯಾಜ್ಯ ವಸ್ತು ಸಲ್ಮಾನ್ ಖಾನ್''

  - ''ಇಂದು ಯುವಸಮುದಾಯ ಡ್ರಗ್ಸ್‌ಗೆ ಒಳಗಾಗಲು ಕಾರಣ ಈ ಬಾಲಿವುಡ್. ಫ್ಯಾಷನ್ ಎಂಬ ಹೆಸರಿನಲ್ಲಿ ಯುವಕರಿಗೆ ಡ್ರಗ್ಸ್ ಸೇವಿಸಲು ಪ್ರಚೋದನೆ ನೀಡಿದೆ. ಬಾಲಿವುಡ್ ಶಾಶ್ವತವಾಗಿ ಬಾಯ್‌ಕಟ್ ಮಾಡಿ''

  ಹೀಗೆ ಸಲ್ಮಾನ್ ಖಾನ್ ಹಾಗೂ ಬಾಲಿವುಡ್ ವಿರುದ್ಧ ಬಹಳ ಕೆಟ್ಟ ಕೆಟ್ಟದಾಗಿ ಟ್ರೋಲ್ ಮಾಡಲಾಗ್ತಿದೆ. ಇತ್ತೀಚಿಗಷ್ಟೆ ನಟಿ ರಿಯಾ ಚಕ್ರವರ್ತಿ ವಿರುದ್ಧವೂ 'ಅರೆಸ್ಟ್ ರಿಯಾ' (arrestrhea) ಟ್ರೆಂಡ್ ಮಾಡಲಾಗಿತ್ತು. ಸುಶಾಂತ್ ಸಾವಿನಲ್ಲಿ ರಿಯಾ ಪಾತ್ರ ಪ್ರಮುಖವಾಗಿದೆ. ಆಕೆಯನ್ನು ಬಂಧಿಸಿ ಎಂದು ಅಭಿಯಾನ ಮಾಡಿದ್ದರು. ಡ್ರಗ್ಸ್ ಕೇಸ್‌ನಲ್ಲಿ ಒಂದು ತಿಂಗಳು ಜೈಲಿನಲ್ಲಿದ್ದ ನಟಿ ನಂತರ ಜಾಮೀನು ಪಡೆದ ಬಿಡುಗಡೆಯಾಗಿದ್ದರು.

  ಪ್ರಸ್ತುತ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಟೈಗರ್ 3 ಚಿತ್ರೀಕರಣಕ್ಕಾಗಿ ರಷ್ಯಾಗೆ ತೆರಳಿದ್ದಾರೆ. ಕೆಲವು ಶೂಟಿಂಗ್ ಫೋಟೋಗಳು ವೈರಲ್ ಆಗಿದ್ದು, ಹಿಂದೆಂದೂ ಕಾಣದ ರೀತಿ ಸಲ್ಲು ಕಾಣಿಸಿಕೊಂಡಿದ್ದಾರೆ. ಸದ್ಯದ ವರದಿ ಪ್ರಕಾರ ರಷ್ಯಾದಲ್ಲಿ ಚಿತ್ರೀಕರಣ ಮುಗಿದಿದ್ದು, ಅಲ್ಲಿಂದ ಟರ್ಕಿಗೆ ತೆರಳಲಿದ್ದಾರೆ ಎನ್ನಲಾಗಿದೆ.

  ಮನಿಶ್ ಶರ್ಮಾ ನಿರ್ದೇಶನ ಟೈಗರ್ 3 ಕಳೆದ ಜುಲೈ ತಿಂಗಳಲ್ಲಿ ಮುಂಬೈನ ಅಂಧೇರಿಯಲ್ಲಿ ಚಿತ್ರೀಕರಣ ಮಾಡಿತ್ತು. ಎರಡು ವಾರಗಳ ಕಾಲ ಶೂಟಿಂಗ್ ಮಾಡಿದ್ದರು. ಈ ವೇಳೆ ಸಲ್ಮಾನ್ ಖಾನ್-ಕತ್ರಿನಾ ಪಾಲ್ಗೊಂಡಿದ್ದರು. ಈಗ ರಷ್ಯಾದಲ್ಲಿ ಶೂಟಿಂಗ್ ಮುಂದುವರಿಸಿದ್ದು, ಆಸ್ಟ್ರಿಯಾ, ಟರ್ಕಿ ಸೇರಿದಂತೆ ಇತರೆ ಐದು ದೇಶಗಳಲ್ಲಿ ಚಿತ್ರೀಕರಣದ ಪ್ಲಾನ್ ಇದೆ. ಕಬೀರ್ ಖಾನ್ ನಿರ್ದೇಶನದಲ್ಲಿ ಏಕ್ತಾ ಟೈಗರ್ 2012ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಮುಂದುವರಿದ ಭಾಗ ಟೈಗರ್ ಜಿಂದಾ ಹೈ 2017ರಲ್ಲಿ ಬಂದಿತ್ತು. ಇದೀಗ, ಟೈಗರ್ 3 ಸಿದ್ಧವಾಗುತ್ತಿದೆ. ರಾ ಏಜೆಂಟ್ ಆಗಿ ಸಲ್ಮಾನ್ ಖಾನ್ ಮತ್ತು ಐಎಸ್‌ಐ ಏಜೆಂಟ್ ಆಗಿ ಕತ್ರಿನಾ ನಟಿಸುತ್ತಿದ್ದಾರೆ.

  English summary
  'BoycottSalmanKhan' hashtag trends on twitter and Late actor Sushanth singh fans are Blamed Sallu Bhai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X