twitter
    For Quick Alerts
    ALLOW NOTIFICATIONS  
    For Daily Alerts

    ದಿನದಿಂದ ದಿನಕ್ಕೆ ಕುಸಿದ ಕಲೆಕ್ಷನ್; 410 ಕೋಟಿ ಬಜೆಟ್‌ನ ಬ್ರಹ್ಮಾಸ್ತ್ರ ಮೊದಲ ವಾರ ಗಳಿಸಿದ್ದೆಷ್ಟು?

    |

    ರಣ್‌ಬೀರ್ ಕಪೂರ್ ಹಾಗೂ ಅಲಿಯಾ ಭಟ್ ಇದೇ ಮೊದಲ ಬಾರಿಗೆ ಜತೆಯಾಗಿ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರ ಕಳೆದ ಶುಕ್ರವಾರ ( ಸೆಪ್ಟೆಂಬರ್ 9 ) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಬ್ರಹ್ಮಾಸ್ತ್ರ ಬಿಡುಗಡೆಗೊಂಡಿತ್ತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾದ ಬ್ರಹ್ಮಾಸ್ತ್ರ ಚಿತ್ರದ ತೆಲುಗು ಪ್ರಚಾರಕ್ಕೆ ನಿರ್ದೇಶಕ ರಾಜಮೌಳಿ ಕೈಜೋಡಿಸಿದ್ದರು. ಇನ್ನು ರಾಜಮೌಳಿ ಅವರಿಂದ ಪ್ರಚಾರ ಮಾಡಿಸಿದ್ದು ಚಿತ್ರಕ್ಕೆ ದೊಡ್ಡ ಪ್ಲಸ್‌ ಪಾಯಿಂಟ್ ಎಂದೇ ಹೇಳಬಹುದು. ಏಕೆಂದರೆ ಬ್ರಹ್ಮಾಸ್ತ್ರ ತೆಲುಗು ಥಿಯೇಟ್ರಿಕಲ್ ಹಕ್ಕಿಗಿಂತ ಹೆಚ್ಚು ಕಲೆಕ್ಷನ್ ಮಾಡಿ ಈಗಾಗಲೇ ಕೋಟಿ ಕೋಟಿ ಲಾಭ ಗಳಿಸಿದೆ.

    ಇನ್ನು ಕನ್ನಡದಲ್ಲಿ ಸಾಮಾನ್ಯ ಗಳಿಕೆ ಮಾಡಿರುವ ಬ್ರಹ್ಮಾಸ್ತ್ರ ತಮಿಳಿನಲ್ಲಿಯೂ ಒಂದೊಳ್ಳೆ ಗಳಿಕೆ ಕಂಡಿದೆ. ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ 75 ಕೋಟಿ ಕಲೆಕ್ಷನ್ ಮಾಡಿದ್ದ ಬ್ರಹ್ಮಾಸ್ತ್ರ ಎರಡನೇ ದಿನ ವಿಶ್ವದಾದ್ಯಂತ 85 ಕೋಟಿ ಕಲೆಹಾಕಿತ್ತು. ಹೀಗೆ ನಿರೀಕ್ಷೆಗೂ ಮೀರಿದ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಬ್ರಹ್ಮಾಸ್ತ್ರ ಚಿತ್ರ ಮೊದಲ ವಾರಾಂತ್ಯಕ್ಕೆ 225 ಕೋಟಿ ಗಳಿಸಿತ್ತು.

    ಮೂರೇ ದಿನಕ್ಕೆ ಇನ್ನೂರು ಕೋಟಿ ಕ್ಲಬ್ ಸೇರಿದ್ದ ಬ್ರಹ್ಮಾಸ್ತ್ರ ಚಿತ್ರದ ಗಳಿಕೆ ನಂತರದ ದಿನಗಳಲ್ಲಿ ತಗ್ಗುತ್ತಾ ಬಂದಿದೆ. ಚಿತ್ರದ ನಿರ್ದೇಶಕ ಅಯನ್ ಮುಖರ್ಜಿ ಇಂದು ( ಸೆಪ್ಟೆಂಬರ್ 16 ) ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ರಹ್ಮಾಸ್ತ್ರ ಮೊದಲ ದಿನ ಎಷ್ಟು ಗಳಿಸಿದೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ಏಳು ದಿನಕ್ಕೆ 300 ಕೋಟಿ

    ಏಳು ದಿನಕ್ಕೆ 300 ಕೋಟಿ

    ಬ್ರಹ್ಮಾಸ್ತ್ರ ಸಿನಿಮಾ ಮೊದಲ ಏಳು ದಿನಗಳಲ್ಲಿ 300 ಕೋಟಿ ಕಲೆಕ್ಷನ್ ಮಾಡಿದೆ ಎಂಬ ವಿಷಯವನ್ನು ಆಯನ್ ಮುಖರ್ಜಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಈ ಮೂಲಕ 410 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಬ್ರಹ್ಮಾಸ್ತ್ರ 73% ಗಳಿಸಿದ್ದು ಬಜೆಟ್‌ನ್ನು ಸರಿದೂಗಿಸುವಂತ ಕಲೆಕ್ಷನ್ ಮಾಡಲು ಇನ್ನೂ 110 ಕೋಟಿ ಗಳಿಸಬೇಕಿದೆ.

    ಕಾಶ್ಮೀರ್ ಫೈಲ್ಸ್ ಹಿಂದಿಕ್ಕಲು ಇನ್ನೂ ಎಷ್ಟು ಗಳಿಸಬೇಕು?

    ಕಾಶ್ಮೀರ್ ಫೈಲ್ಸ್ ಹಿಂದಿಕ್ಕಲು ಇನ್ನೂ ಎಷ್ಟು ಗಳಿಸಬೇಕು?

    ಇಪ್ಪತ್ತು ಕೋಟಿ ಬಜೆಟ್‌ನಲ್ಲಿ ತಯಾರಾಗಿ 340 ಬಾಚಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಲು ಬ್ರಹ್ಮಾಸ್ತ್ರ ಇನ್ನೂ 40 ಕೋಟಿ ಕಲೆಹಾಕಬೇಕಿದೆ. ಹೀಗೆ ಕಾಶ್ಮೀರ್ ಫೈಲ್ಸ್ ಚಿತ್ರದ ಕಲೆಕ್ಷನ್ ಅನ್ನು ಬ್ರಹ್ಮಾಸ್ತ್ರ ಹಿಂದಿಕ್ಕಿದರೆ ಈ ವರ್ಷ ಅತಿಹೆಚ್ಚು ಗಳಿಸಿದ ಬಾಲಿವುಡ್ ಸಿನಿಮಾ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಳ್ಳಲಿದೆ.

    ಏಳನೇ ದಿನ ಬ್ರಹ್ಮಾಸ್ತ್ರ ಗಳಿಸಿದ್ದೆಷ್ಟು?

    ಏಳನೇ ದಿನ ಬ್ರಹ್ಮಾಸ್ತ್ರ ಗಳಿಸಿದ್ದೆಷ್ಟು?

    ಇನ್ನು ಮೊದಲ ಮೂರು ದಿನ ಕೋಟಿ ಕೋಟಿ ಕೊಳ್ಳೆ ಹೊಡೆದು ಹುಬ್ಬೇರುವಂತೆ ಮಾಡಿದ್ದ ಬ್ರಹ್ಮಾಸ್ತ್ರ ಸಿನಿಮಾ ಏಳನೇ ದಿನ ಕಲೆಹಾಕಿದ್ದು 9.25 ಕೋಟಿ. ಈ ಮೂಲಕ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಖಚಿತವಾಗಿದ್ದು, ಈ ವಾರಾಂತ್ಯದ ಗಳಿಕೆ ಚಿತ್ರದ ಮುಂದಿನ ಹಣೆಬರಹವನ್ನು ನಿರ್ಧರಿಸಲಿದೆ.

    ಭೂಲ್ ಭುಲಯಾ 2 ಹಿಂದಿಕ್ಕಿದ ಬ್ರಹ್ಮಾಸ್ತ್ರ

    ಭೂಲ್ ಭುಲಯಾ 2 ಹಿಂದಿಕ್ಕಿದ ಬ್ರಹ್ಮಾಸ್ತ್ರ

    ಇನ್ನು ಬ್ರಹ್ಮಾಸ್ತ್ರ ಭೂಲ್ ಭುಲಯ 2 ಸಿನಿಮಾದ ಕಲೆಕ್ಷನ್ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಭೂಲ್ ಭುಲಾಯಾ 2 ಒಟ್ಟಾರೆ 266 ಕೋಟಿ ಗಳಿಸಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಬಾಲಿವುಡ್ ಸಿನಿಮಾಗಳ ಪೈಕಿ ಎರಡನೇ ಸ್ಥಾನದಲ್ಲಿತ್ತು. ಸದ್ಯ ಈ ಚಿತ್ರವನ್ನು ಹಿಂದಿಕ್ಕಿರುವ ಬ್ರಹ್ಮಾಸ್ತ್ರ ಎರಡನೇ ಸ್ಥಾನಕ್ಕೇರಿದೆ.

    English summary
    Brahmastra Collects 300 crores in 7 days and just 40 cr away from Kashmir Files. Read on.
    Friday, September 16, 2022, 13:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X