twitter
    For Quick Alerts
    ALLOW NOTIFICATIONS  
    For Daily Alerts

    ಬಾಯ್‌ಕಾಟ್ ಮಂದಿಯನ್ನೇ ಸೋಲಿಸಿತಾ ಬ್ರಹ್ಮಾಸ್ತ್ರ? ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು?

    |
    Brahmastra day 1 Box Office collection: beats Dhoom 3 and Sanju movie day 1 collections

    ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ಹಾಗೂ ಅಯಾನ್ ಮುಖರ್ಜಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರ ನಿನ್ನೆ ( ಸೆಪ್ಟೆಂಬರ್ 9 ) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ಮೂಲತಃ ಹಿಂದಿ ಚಿತ್ರವಾಗಿರುವ ಬ್ರಹ್ಮಾಸ್ತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಬಿಡುಗಡೆಯಾಗಿದೆ.

    ಇನ್ನು ಈ ಹಿಂದೆ ಬಿಡುಗಡೆಯಾದ ಹಿಂದಿ ಚಿತ್ರಗಳ ಹಾಗೆ ಈ ಚಿತ್ರದ ಮೇಲೂ ಸಹ ಬಾಯ್ಕಾಟ್ ಅಸ್ತ್ರವನ್ನು ಎಸೆಯಲಾಗಿತ್ತು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿರುದ್ಧವಾಗಿ ಸಾಲು ಸಾಲು ಕಾಮೆಂಟ್ ಮಾಡಿ ಯಾರೂ ಚಿತ್ರವನ್ನು ನೋಡಬೇಡಿ ಎಂದು ಕೆಲ ನೆಟ್ಟಿಗರು ವಿರೋಧಿಸಿದ್ದರು.

    ಹೀಗೆ ದೊಡ್ಡ ಮಟ್ಟದ ವಿರೋಧದ ನಡುವೆಯೇ ಬ್ರಹ್ಮಾಸ್ತ್ರ ನಿನ್ನೆ ತೆರೆಗೆ ಅಪ್ಪಳಿಸಿದೆ. ಇನ್ನು ಚಿತ್ರಕ್ಕೆ ಬಾಯ್ ಕಟ್ ಬಿಸಿ ಕೊಂಚಮಟ್ಟದಲ್ಲಿ ತಟ್ಟಿದೆ ಎಂದೇ ಹೇಳಬಹುದು, ಕೆಲವೆಡೆ ಮೊದಲ ದಿನದ ಪ್ರದರ್ಶನಗಳು ಹೌಸ್ ಫುಲ್ ಆದರೆ, ಇನ್ನೂ ಕೆಲವೆಡೆ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿದ್ದವು. ಇನ್ನು ಸಿನಿಮಾ ನೋಡಿದ ಪ್ರೇಕ್ಷಕರ ವಿಮರ್ಶೆ ವಿಚಾರಕ್ಕೆ ಬಂದರೆ ಮಿಶ್ರ ಪ್ರತಿಕ್ರಿಯೆಯನ್ನು ಚಿತ್ರ ಪಡೆದುಕೊಂಡಿದೆ. ಚಿತ್ರದಲ್ಲಿ ವಿ ಎಫ್ ಎಕ್ಸ್ ಅತಿರೇಕವಾಗಿದೆ, ಚಿತ್ರದಲ್ಲಿ ಕಂಟೆಂಟ್ ಇಲ್ಲ, ಸಿನಿಮಾ ಅಷ್ಟಕ್ಕಷ್ಟೇ ಎಂದು ಕೆಲ ಮಂದಿ ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಚಿತ್ರ ನಿಜವಾಗಿಯೂ ಚೆನ್ನಾಗಿದೆ ಹುಸಿ ವಿಮರ್ಶೆಗಳಿಗೆ ಕಿವಿಗೊಡಬೇಡಿ, ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಎಂದಿದ್ದಾರೆ. ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ ಬ್ರಹ್ಮಾಸ್ತ್ರ ಮೊದಲ ದಿನ ಕಲೆಹಾಕಿದ್ದು ಎಷ್ಟು ಎಂಬ ಮಾಹಿತಿ ತಿಳಿಯೋಣ ಬನ್ನಿ.

    ಮೊದಲ ದಿನ ಬ್ರಹ್ಮಾಸ್ತ ಗಳಿಸಿದ್ದೆಷ್ಟು?

    ಮೊದಲ ದಿನ ಬ್ರಹ್ಮಾಸ್ತ ಗಳಿಸಿದ್ದೆಷ್ಟು?

    ಸುಮಾರು 5000ಕ್ಕೂ ಹೆಚ್ಚು ತೆರೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದ ಬ್ರಹ್ಮಾಸ್ತ್ರ ಮೊದಲ ದಿನ ಎಲ್ಲಾ ವರ್ಷನ್ ಸೇರಿದಂತೆ 36.5ರಿಂದ 38.5 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಪರಿಣಿತರು ತಿಳಿಸಿದ್ದಾರೆ. ಇದು ರಜೆಯಿಲ್ಲದ ದಿನ ಬಿಡುಗಡೆಯಾದ ಹಿಂದಿ ಚಿತ್ರವೊಂದು ಮೊದಲ ದಿನ ಗಳಿಸಿದ ಅತಿಹೆಚ್ಚು ಕಲೆಕ್ಷನ್ ಎಂಬ ದಾಖಲೆ ಬರೆದಿದೆ.

    ಟೈಗರ್ ಜಿಂದಾ ಹೈ, ಧೂಮ್ 3 ಹಿಂದಿಕ್ಕಿದ ಬ್ರಹ್ಮಾಸ್ತ್ರ!

    ಟೈಗರ್ ಜಿಂದಾ ಹೈ, ಧೂಮ್ 3 ಹಿಂದಿಕ್ಕಿದ ಬ್ರಹ್ಮಾಸ್ತ್ರ!

    ಇನ್ನು ಕೊರೊನಾಗೂ ಮುನ್ನ ಬಿಡುಗಡೆಯಾಗಿ ಅಬ್ಬರಿಸಿದ್ದ ಚಿತ್ರಗಳಾದ ಸಂಜು, ಟೈಗರ್ ಜಿಂದಾ ಹೈ ಹಾಗೂ ಧೂಮ್ 3 ಸಿನಿಮಾಗಳ ಮೊದಲ ದಿನದ ಗಳಿಕೆಯನ್ನು ಬ್ರಹ್ಮಾಸ್ತ್ರ ಹಿಂದಿಕ್ಕಿದೆ. ಧೂಮ್ 3 ಮೊದಲ ದಿನ 32 ಕೋಟಿ ರೂಪಾಯಿ ಗಳಿಸಿತ್ತು, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೈ ಮೊದಲ ದಿನ 34.10 ಕೋಟಿ ರೂಪಾಯಿಗಳನ್ನು ಬಾಚಿತ್ತು. ಇದೇ ರಣ್‌ಬೀರ್ ಅಭಿನಯದ ಸಂಜು 34.75 ಕೋಟಿ ರೂಫಾಯಿಗಳನ್ನು ಮೊದಲ ದಿನ ಬಾಚಿತ್ತು. ಹೀಗೆ ಕೊವಿಡ್‌ಗೂ ಮುನ್ನ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ಈ ಚಿತ್ರಗಳ ಮೊದಲ ದಿನದ ಗಳಿಕೆಯನ್ನು ಬ್ರಹ್ಮಾಸ್ತ್ರ ಇದೀಗ ಹಿಂದಿಕ್ಕಿದೆ.

    ಲಾಲ್ ಸಿಂಗ್ ಚಡ್ಡಾಗೂ ಬ್ರಹ್ಮಾಸ್ತ್ರಗೂ ಅಜಗಜಾಂತರ ವ್ಯತ್ಯಾಸ

    ಲಾಲ್ ಸಿಂಗ್ ಚಡ್ಡಾಗೂ ಬ್ರಹ್ಮಾಸ್ತ್ರಗೂ ಅಜಗಜಾಂತರ ವ್ಯತ್ಯಾಸ

    ಇನ್ನು ಕೊವಿಡ್ ನಂತರ ಬಿಡುಗಡೆಯಾಗಿದ್ದ ದೊಡ್ಡ ಮಟ್ಟದ ಸಿನಿಮಾ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಮೊದಲ ದಿನ 11 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದೀಗ ಬ್ರಹ್ಮಾಸ್ತ್ರ 36.5ರಿಂದ 38.5 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಲಾಲ್ ಸಿಂಗ್ ಚಡ್ಡಾ ಮೇಲೆ ಇದ್ದ ಬಾಯ್‌ಕಾಟ್ ಅಬ್ಬರ ಬ್ರಹ್ಮಾಸ್ತ್ರ ಮೇಲೆ ಅಷ್ಟೊಂದಿಲ್ಲ ಎನ್ನುವುದು ತಿಳಿದು ಬಂದಿದೆ.

    ಎರಡನೇ ದಿನದ ಬುಕಿಂಗ್ ಹೇಗಿದೆ?

    ಎರಡನೇ ದಿನದ ಬುಕಿಂಗ್ ಹೇಗಿದೆ?

    ಇನ್ನು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಬಂದರೂ ಸಹ ಶನಿವಾರದ ಬುಕಿಂಗ್ ಚೆನ್ನಾಗಿದೆ. ಬೆಂಗಳೂರು ನಗರದ ಹಲವು ಶೋಗಳು ಫಾಸ್ಟ್ ಫಿಲ್ಲಿಂಗ್ ಇದ್ದರೆ, ಹೈದರಾಬಾದ್ ನಗರದ ಹಲವು ಶೋಗಳು ಸೋಲ್ಡ್ ಔಟ್ ಆಗಿವೆ. ಇನ್ನು ಉತ್ತರ ಭಾರತದ ಬುಕಿಂಗ್ ಕೂಡ ಎರಡನೇ ದಿನ ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ ಎರಡನೇ ದಿನವೂ ಸಹ ಚಿತ್ರ ಒಂದೊಳ್ಳೆ ಕಲೆಕ್ಷನ್ ಮಾಡುವ ಸಂಭವವಿದೆ. ಇನ್ನು ನಾಳೆ ಭಾನುವಾರದ ರಜೆ ಇರುವ ಕಾರಣ ಚಿತ್ರದ ಮೂರನೇ ದಿನದ ಕಲೆಕ್ಷನ್ ಉತ್ತಮವಾಗಿರುವುದು ಖಚಿತ.

    English summary
    Brahmastra day 1 collection: Brahmastra beat Dhoom 3 and Sanju movie day 1 collections. Read on,
    Saturday, September 10, 2022, 12:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X