For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಬ್ರಹ್ಮಾಸ್ತ್ರ': ಫಸ್ಟ್ ವೀಕೆಂಡ್ ಸಿನಿಮಾ ಕಲೆಕ್ಷನ್ ಎಷ್ಟು?

  |

  ಬಾಕ್ಸಾಫೀಸ್‌ನಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದರೂ ಈ ಫ್ಯಾಂಟಸಿ ಅಡ್ವೆಂಚರ್ ಸಿನಿಮಾ ಕಲೆಕ್ಷನ್ ಮಾತ್ರ ಭರ್ಜರಿಯಾಗಿದೆ. ಫಸ್ಟ್ ವೀಕೆಂಡ್ ಭಾರತದಲ್ಲಿ ಹಿಂದಿ ವರ್ಷನ್ ಬರೋಬ್ಬರಿ 107 ಕೋಟಿ ರೂ. ಗಳಿಕೆ ಕಂಡಿದೆ. ವಿಶ್ವದಾದ್ಯಂತ ಸಿನಿಮಾ 8000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು.

  ಅಯಾನ್ ಮುಖರ್ಜಿ ನಿರ್ದೇಶನದ 'ಬಹ್ಮಾಸ್ತ್ರ' ಚಿತ್ರದಲ್ಲಿ ರಣ್‌ಬೀರ್ ಕಪೂರ್, ಅಲಿಯಾ ಭಟ್, ಅಮಿತಾಬ್ ಬಚ್ಚನ್, ನಾಗಾರ್ಜುನ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ 'ಬ್ರಹ್ಮಾಸ್ತ್ರ' ಕೊಂಚ ನಿರಾಳ ತಂದಿದೆ. ರಿವ್ಯೂಗೂ ಕಲೆಕ್ಷನ್‌ಗೂ ಸಂಬಂಧವೇ ಇಲ್ಲ ಎನ್ನುವಂತೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಆರ್ಭಟ ಜೋರಾಗಿದೆ. ಶನಿವಾರ ಮತ್ತು ಭಾನುವಾರ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆ ಕಂಡುಬಂದಿರುವುದು ಬಾಲಿವುಡ್‌ಗೆ ಸಂತಸ ತಂದಿದೆ.

  'ಬ್ರಹ್ಮಾಸ್ತ್ರ' ಮೊದಲ ದಿನದ ಕಲೆಕ್ಷನ್ ಇಷ್ಟೋಂದಾ! ಕರಣ್ ಜೋಹರ್ ಹಂಚಿಕೊಂಡ ಮಾಹಿತಿ'ಬ್ರಹ್ಮಾಸ್ತ್ರ' ಮೊದಲ ದಿನದ ಕಲೆಕ್ಷನ್ ಇಷ್ಟೋಂದಾ! ಕರಣ್ ಜೋಹರ್ ಹಂಚಿಕೊಂಡ ಮಾಹಿತಿ

  'ಬ್ರಹ್ಮಾಸ್ತ್ರ' ಸಿನಿಮಾ ಕಲೆಕ್ಷನ್ ಬಗ್ಗೆ ಕೆಲವರು ಕೊಂಕು ಮಾತನಾಡುತ್ತಿದ್ದಾರೆ. ಬರೀ ಫೇಕ್ ಕಲೆಕ್ಷನ್ ರಿಪೋರ್ಟ್ ತೋರಿಸುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದರೆ ನಿಜಕ್ಕೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ ಎಂದು ಬಾಲಿವುಡ್ ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ.

  ಫಸ್ಟ್‌ ವೀಕೆಂಡ್ 100 ಕೋಟಿ ಗಳಿಕೆ

  ಫಸ್ಟ್‌ ವೀಕೆಂಡ್ 100 ಕೋಟಿ ಗಳಿಕೆ

  ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ 'ಬ್ರಹ್ಮಾಸ್ತ್ರ' ಸಿನಿಮಾ ಫಸ್ಟ್ ವೀಕೆಂಡ್ ಭಾರತದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವುದರ ಮಾಹಿತಿ ನೀಡಿದ್ದಾರೆ. ಚಿತ್ರದ ಹಿಂದಿ ವರ್ಷನ್ ಭಾರತದಲ್ಲಿ ಶುಕ್ರವಾರ 31.5 ಕೋಟಿ ಶನಿವಾರ 37.5 ಕೋಟಿ ಹಾಗೂ ಭಾನುವಾರ 39.5 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಎಲ್ಲಾ ಭಾಷೆಗಳು ಸೇರಿ ಭಾರತದಲ್ಲಿ ಮೊದಲ 3 ದಿನಕ್ಕೆ ಸಿನಿಮಾ 125 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಲೆಕ್ಕಾಚಾರ ನಡೀತಿದೆ.

  ಬ್ರಹ್ಮಾಸ್ತ್ರದಿಂದ ಪಿವಿಆರ್‌ಗೆ 800 ಕೋಟಿ ನಷ್ಟ; ತುಟಿ ಬಿಚ್ಚಿದ ಪಿವಿಆರ್ ಸಿಇಒಬ್ರಹ್ಮಾಸ್ತ್ರದಿಂದ ಪಿವಿಆರ್‌ಗೆ 800 ಕೋಟಿ ನಷ್ಟ; ತುಟಿ ಬಿಚ್ಚಿದ ಪಿವಿಆರ್ ಸಿಇಒ

  ಮಲ್ಟಿಪ್ಲೆಕ್ಸ್‌ಗಳಲ್ಲಿ ಕಲೆಕ್ಷನ್ ಸೂಪರ್

  ಮಲ್ಟಿಪ್ಲೆಕ್ಸ್‌ಗಳಲ್ಲಿ ಕಲೆಕ್ಷನ್ ಸೂಪರ್

  ಪಿವಿಆರ್‌, ಐನಾಕ್ಸ್ ಹಾಗೂ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಬ್ರಹ್ಮಾಸ್ತ್ರ' ಕಲೆಕ್ಷನ್ ಜೋರಾಗಿದೆ. ಭಾರತದ ಮಲ್ಟಿಪ್ಲೆಕ್ಸ್‌ ಚೈನ್‌ನಲ್ಲಿ ಶುಕ್ರವಾರ 17.15 ಕೋಟಿ ಶನಿವಾರ 20.73 ಕೋಟಿ ಹಾಗೂ ಭಾನುವಾರ 21.26 ಕೋಟಿ ರೂ. ಗಳಿಕೆ ಆಗಿರುವ ಬಗ್ಗೆ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಬಾಕ್ಸಾಫೀಸ್‌ನಲ್ಲಿ 'ಬ್ರಹ್ಮಾಸ್ತ್ರ' ಧೂಳೆಬ್ಬಿಸಿದೆ.

  350 ಕೋಟಿ ಬಜೆಟ್ ಸಿನಿಮಾ 'ಬ್ರಹ್ಮಾಸ್ತ್ರ'

  350 ಕೋಟಿ ಬಜೆಟ್ ಸಿನಿಮಾ 'ಬ್ರಹ್ಮಾಸ್ತ್ರ'

  ಅಂದಾಜು 450 ಕೋಟಿ ರೂ. ಬಜೆಟ್‌ನಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ನಿರ್ಮಾಣ ಮಾಡಲಾಗಿದೆ. ಏಳೆಂಟು ವರ್ಷಗಳಿಂದ ಈ ಚಿತ್ರಕ್ಕಾಗಿ ಅಯಾನ್ ಮುಖರ್ಜಿ ಅಂಡ್ ಟೀಮ್ ಕೆಲಸ ಮಾಡಿದೆ. ಚಿತ್ರದ ಗ್ರಾಫಿಕ್ಸ್‌ಗಾಗಿಯೇ 100 ಕೋಟಿ ವ್ಯಯಿಸಲಾಗಿದೆ ಅನ್ನುವ ಮಾತುಗಳು ಕೇಳಿಬಂದಿದೆ. ಬಜೆಟ್‌ ನೋಡಿದರೆ ನಿರ್ಮಾಪಕರು ಸೇಫ್ ಆಗಲು ಸಿನಿಮಾ ಇನ್ನಷ್ಟು ಗಳಿಸಬೇಕಿದೆ.

  'ಬ್ರಹ್ಮಾಸ್ತ್ರ'- 2ನಲ್ಲಿ ರಣ್‌ವೀರ್- ಹೃತಿಕ್?

  'ಬ್ರಹ್ಮಾಸ್ತ್ರ'- 2ನಲ್ಲಿ ರಣ್‌ವೀರ್- ಹೃತಿಕ್?

  3 ಭಾಗಗಳಾಗಿ ಈ ಸರಣಿ ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಈಗಾಗಲೇ ಅಯಾನ್ ಮುಖರ್ಜಿ ಹೇಳಿದ್ದಾರೆ. 'ಬ್ರಹ್ಮಾಸ್ತ್ರ ಪಾರ್ಟ್ 1, ಶಿವ' ಚಿತ್ರದಲ್ಲಿ ರಣ್‌ಬೀರ್ ಸಿಂಗ್ ಹಾಗೂ ಆಲಿಯಾ ಭಟ್ ನಟಿಸಿದ್ದಾರೆ. ಇದೀಗ ಸೆಕೆಂಡ್ ಪಾರ್ಟ್‌ನಲ್ಲಿ ಯಾರು ನಟಿಸ್ತಾರೆ ಅನ್ನುವ ಕುತೂಹಲ ಮೂಡಿದೆ. 'ಬ್ರಹ್ಮಾಸ್ತ್ರ ಪಾರ್ಟ್ 2, ದೇವ್' ಎನ್ನುವ ಟೈಟಲ್‌ನಲ್ಲಿ ಸರಣಿಯ 2ನೇ ಸಿನಿಮಾ ಬರುತ್ತೆ ಅನ್ನಲಾಗುತ್ತಿದ್ದು, ಹೃತಿಕ್ ರೋಷನ್ ಅಥವಾ ರಣ್‌ವೀರ್ ಸಿಂಗ್, ದೇವ್ ಆಗಿ ನಟಿಸೋ ಬಗ್ಗೆ ಚರ್ಚೆ ನಡೀತಿದೆ.

  English summary
  Brahmastra First Weekend Box Office Collection Movie has reportedly Entered the 100 crore club. Alia Bhatt and Ranbir Kapoor starrer Brahmastra has become the first Bollywood film to top the weekend worldwide box office charts.
  Monday, September 12, 2022, 14:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X