For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬಂದ ಆಲಿಯಾ ಭಟ್: ಖಚಿತ ಪಡಿಸಿದ ಕರಣ್ ಜೋಹರ್

  |

  ಬಾಲಿವುಡ್ ನಟಿ ಆಲಿಯಾ ಭಟ್, ರಣ್ವೀರ್ ಸಿಂಗ್, ಅಮಿತಾಭ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದಾರೆ.

  ಈ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬ ಕುತೂಹಲ ಕಾಡುತ್ತಿತ್ತು. ಇದೀಗ, ಸ್ವತಃ ಕರಣ್ ಜೋಹರ್ ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ್ದಾರೆ. ಡಿಸೆಂಬರ್ 4 ರಂದು ಬ್ರಹ್ಮಾಸ್ತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ.

  ಇನ್ನು ಮದುವೆನೇ ಆಗಿಲ್ಲ, ಆಗಲೇ ಹನಿಮೂನ್ ಗೆ ಸ್ಥಳ ಗುರುತಿಸಿದ್ದಾರೆ ಈ ಜೋಡಿ! ಇನ್ನು ಮದುವೆನೇ ಆಗಿಲ್ಲ, ಆಗಲೇ ಹನಿಮೂನ್ ಗೆ ಸ್ಥಳ ಗುರುತಿಸಿದ್ದಾರೆ ಈ ಜೋಡಿ!

  ಈ ಸಿನಿಮಾ ಸ್ಯಾಂಡಲ್ವುಡ್ ಪಾಲಿಗೂ ವಿಶೇಷವಾಗಿರಲಿದೆ. ಯಾಕಂದ್ರೆ, ಹಿಂದಿಯ ಬ್ರಹ್ಮಾಸ್ತ್ರ ಕನ್ನಡದಲ್ಲೂ ಬರ್ತಿದೆ. ಹೌದು, ಕನ್ನಡದಲ್ಲೂ ಈ ಚಿತ್ರ ಡಬ್ಬಿಂಗ್ ಆಗ್ತಿದ್ದು, ಏಕಕಾಲದಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲಿದೆ.

  ಗಂಗೂಬಾಯಿಯಾದ ಆಲಿಯಾ ಭಟ್: ಸೂಪರಾಗಿದೆ ಫಸ್ಟ್ ಲುಕ್ಗಂಗೂಬಾಯಿಯಾದ ಆಲಿಯಾ ಭಟ್: ಸೂಪರಾಗಿದೆ ಫಸ್ಟ್ ಲುಕ್

  ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ 2019ರಲ್ಲಿ ಸಿನಿಮಾ ಬರಬೇಕಿತ್ತು. ಆಮೇಲೆ 2020ರ ಮಧ್ಯಂತರಕ್ಕೆ ಬರಲು ನಿರ್ಧರಿಸಿತ್ತು. ಇದೀಗ, 2020ರ ಡಿಸೆಂಬರ್ 4ಕ್ಕೆ ಅಂತಿಮ ದಿನಾಂಕ ಲಾಕ್ ಮಾಡಲಾಗಿದೆ.

  ಇನ್ಯಾವುದಕ್ಕೆ ಕಾರಣಕ್ಕೂ ಬ್ರಹ್ಮಾಸ್ತ್ರ ಚಿತ್ರದ ಬಿಡುಗಡೆ ದಿನಾಂಕ ಬದಲಾಗಲ್ಲ. ಇದನ್ನು ಸ್ವತಃ ಅಮಿತಾಭ್ ಬಚ್ಚನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ. ಇನ್ನುಳಿದಂತೆ ಮೌನಿ ರಾಯ್, ನಾಗಾರ್ಜುನ, ಡಿಂಪಲ್ ಕಪಾಡಿಯಾ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

  English summary
  Bollywood actor Ranvir singh, alia bhatt, amitabh bachchan starrer Brahmastra movie will releasing in kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X