twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿ ಬಾಲಿವುಡ್‌ 'ಬ್ರಹ್ಮಾಸ್ತ್ರ': ಪೋಸ್ಟರ್‌ನಲ್ಲಿರುವ ರಹಸ್ಯವೇನು?

    |

    ಇತ್ತೀಚೆಗೆ ಭಾರತೀಯ ಚಿತ್ರರಂಗದ ಹಳೆ ರೂಲ್ಸ್‌ಗಳು ಮಾಯಾವಾಗಿವೆ. ಚಿತ್ರರಂಗದವರು ತಮ್ಮ ಸುತ್ತಲೂ ಹಾಕಿಕೊಂಡಿದ್ದ ಷರತ್ತಿನ ಗೆರೆಯನ್ನು ಅಳಿಸಿದ್ದಾರೆ. ಮುಕ್ತವಾಗಿ ಪ್ರೇಕ್ಷಕರಿಗೆ ಸಿನಿಮಾ ನೀಡಲು ಮುಂದಾಗಿದ್ದಾರೆ. ಹಾಗಾಗಿ ಬಹುತೇಕ ಚಿತ್ರಗಳು ಪ್ಯಾನ್‌ ಇಂಡಿಯಾ ಟೈಟಲ್‌ ಅಡಿಯಲ್ಲಿ ಹಲವು ಭಾಷೆಗಳಲ್ಲಿ ತೆರೆಗೆ ಬರ್ತಿವೆ. ಇದಕ್ಕೆ ಬಾಲಿವುಡ್‌ ಕೂಡ ಹೊರತಾಗಿಲ್ಲ.

    ರಣ್ವೀರ್‌ಸಿಂಗ್ ಅಭಿನಯದ 83 ಚಿತ್ರ ಕನ್ನಡಕ್ಕೆ ಡಬ್‌ ಆಗಿದೆ. ಕನ್ನಡ ಭಾಷೆಯಲ್ಲಿ ಪ್ರೇಕ್ಷಕರು 83 ಚಿತ್ರವನ್ನು ನೋಡಬಹುದಾಗಿದೆ. ಇದೇ ಹಾದಿಯಲ್ಲಿ ಈಗ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‌ ಸಿನಿಮಾ ಕೂಡ ಇದೆ.

    ಬಾಲಿವುಡ್‌ನ ಬಹುನಿರೀಕ್ಷೆಯ ಸಿನಿಮಾ 'ಬ್ರಹ್ಮಾಸ್ತ್ರ' ಕನ್ನಡದಲ್ಲೂ ತೆರೆಕಾಣಲಿದೆ. ಸದ್ಯ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಹಿಂದಿ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಕನ್ನಡದಲ್ಲಿ 'ಬ್ರಹ್ಮಾಸ್ತ್ರ' ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್ ಆಗಿದೆ. ಹಿಂದಿಯನ್ನು ಹೊರತುಪಡಿಸಿ ಸೌತ್‌ ಭಾಷೆಗಳಲ್ಲಿ ನಿರ್ದೇಶಕ ರಾಜಮೌಳಿ ಟ್ವಿಟ್ಟರ್‌ನಲ್ಲಿ ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ.

    ಬ್ರಹ್ಮಾಸ್ತ್ರ ಭಾಗ ಒಂದು ಹೇಗಿರಲಿದೆ: ಸುಳಿವು ಕೊಟ್ಟ ಮೊಷನ್‌ ಪೋಸ್ಟರ್!

    'ಬ್ರಹ್ಮಾಸ್ತ್ರ' ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದ ಮೋಷನ್‌ ಪೋಸ್ಟರ್ ರಿಲೀಸ್‌ ಆಗಿದೆ. ಕನ್ನಡದಲ್ಲೂ ಕೂಡ ಈ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ಶಿವನ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಇದು. ಹಾಗಾಗಿ 1 ನಿಮಿಷ 14 ಸೆಕೆಂಡು ಇರುವ ಈ ಮೋಷನ್ ಪೋಸ್ಟರ್‌ನಲ್ಲಿ ಡೈಲಾಗ್‌ಗಳನ್ನು ಅಳವಡಿಲಾಗಿದೆ. ಅದು ಕನ್ನಡದಲ್ಲಿ ಮೂಡಿ ಬಂದಿದೆ. ಬಾಲಿವುಡ್‌ನ ಚಿತ್ರಕ್ಕೆ ಕನ್ನಡ ಧ್ವನಿ ಇರುವುದು ರೋಮಾಂಚನ ಎನಿಸುತ್ತೆ.

    ಬ್ರಹ್ಮಾಸ್ತ್ರ ಹಿಡಿದು ನಿಂತ ರಣಬೀರ್ ಕಪೂರ್!

    ಬ್ರಹ್ಮಾಸ್ತ್ರ ಹಿಡಿದು ನಿಂತ ರಣಬೀರ್ ಕಪೂರ್!

    ಮನುಷ್ಯನ ಯೋಚನೆಗೆ ಮೀರಿದ ಅತಿಮಾನುಷ ಶಕ್ತಿಯ ವರ್ಣನೆಯ ಹಿನ್ನೆಲೆಯಲ್ಲಿ ಈ ಮೋಷನ್‌ ಪೋಸ್ಟರ್‌ ಬಿಡುಗಡೆ ಆಗಿದೆ. "ಒಂದಷ್ಟು ಪುರಾತನ ಶಕ್ತಿಗಳು ಇವೆ, ಒಂದಷ್ಟು ಅಸ್ತ್ರಗಳು ಇವೆ ಎನ್ನುವ ಸಂಭಾಷಣೆ ಚಿತ್ರದ ಕಥೆಯ ಬಗ್ಗೆ ಸುಳಿವು ಕೊಟ್ಟಿದೆ. "ಬ್ರಹ್ಮಾಂಡದಲ್ಲಿ ಮಹಾ ಶಕ್ತಿಶಾಲಿಯಾದ ಅಸ್ತ್ರ ಒಂದು ಉದ್ಭವಿಸಲಿದೆ, ಮಹಾಯೋಧನೊಬ್ಬನ ಉದ್ಭವ ಆಗಲಿದೆ". ಎನ್ನುವ ಸಾಲುಗಳು ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಸುವಲ್ಲಿ ಪ್ರಮುಖ ಆಗುತ್ತವೆ.

    ಮೋಷನ್‌ ಪೋಸ್ಟರ್‌ನ ಕೊನೆಯ ಭಾಗದಲ್ಲಿ ನಟ ರಣಬೀರ್ ಕಪೂರ್ ಕೈಯಲ್ಲಿ ಶಿವನ ತ್ರಿಶೂಲ ಹಿಡಿದು ನಿಲ್ಲುತ್ತಾನೆ. ಅವನ ಕಣ್ಣಲ್ಲಿ ಇಡೀ ಬ್ರಹ್ಮಾಂಡವೇ ಕಾಣುತ್ತೆ. ಇಲ್ಲಿ ಶಿವನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ಆದರೆ ರಣಬೀರ್ ಲುಕ್‌ ಈಗಿನ ಕಾಲಘಟ್ಟದ ಯುವನಕಂತೆ ಇದೆ. ಹಾಗಾಗಿ ಪ್ರಸ್ತುತ ನಡೆಯುವ ಕಥೆಯಲ್ಲಿ ಬ್ರಹ್ಮಾಂಡದ ಜಾದು ಅಳವಡಿಸಿರಬಹುದು ಎನ್ನುವುದು ಗೊತ್ತಾಗುತ್ತದೆ.

    9-9-2022ಕ್ಕೆ ಬ್ರಹ್ಮಾಸ್ತ್ರ ತೆರೆಗೆ!

    9-9-2022ಕ್ಕೆ ಬ್ರಹ್ಮಾಸ್ತ್ರ ತೆರೆಗೆ!

    ಪೋಸ್ಟರ್‌ ಜೊತೆಗೆ ಚಿತ್ರದ ರಿಲೀಸ್‌ ದಿನಾಂಕವನ್ನು ಕೂಡ ಪ್ರಕಟ ಮಾಡಲಾಗಿದೆ. 2022 ಸೆಪ್ಟೆಂಬರ್ 9ರಂದು ಬ್ರಹ್ಮಾಸ್ತ್ರ ಸಿನಿಮಾ ತೆರೆಕಾಣಲಿದೆ. ಈ ಚಿತ್ರದ ಇನ್ನೂ ಶೂಟಿಂಗ್‌ ಇನ್ನೂ ಬಾಕಿದೆ. ಜೊತೆಗೆ ಸಾಕಷ್ಟು ವಿಎಫ್ಎಕ್ಸ್ ಕೆಲಸ ಕೂಡ ಇದೆ. ಹಾಗಾಗಿ ಈ ಚಿತ್ರ ಮುಂದಿನ ವರ್ಷದ ಅಂತ್ಯಕ್ಕೆ ತೆರೆಕಾಣಲಿದೆ. ಈ ಚಿತ್ರ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಸಿನಿ ಜರ್ನಿಯ ವಿಭಿನ್ನ ಸಿನಿಮಾ ಆಗಲಿದೆ. ಇದೊಂದು ಫ್ಯಾಂಟಸಿ ಸಿನಿಮಾ.

    3 ಭಾಗಗಳಲ್ಲಿ ಬರಲಿದೆ 'ಬ್ರಹ್ಮಾಸ್ತ್ರ'!

    3 ಭಾಗಗಳಲ್ಲಿ ಬರಲಿದೆ 'ಬ್ರಹ್ಮಾಸ್ತ್ರ'!

    ಮೂರು ಭಾಗಗಳಲ್ಲಿ ಬರಲಿರುವ ಬ್ರಹ್ಮಾಸ್ತ್ರ ಚಿತ್ರಕ್ಕೆ ಅಯಾನ್‌ ಮುಖರ್ಜಿ ನಿರ್ದೇಶನ ಇದೆ. ಇನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ಧರ್ಮಾ ಪ್ರೊಡಕ್ಷನ್ ಜೊತೆಗೆ ಫಾಕ್ಸ್ ಸ್ಟಾರ್ ಸ್ಟೂಡಿಯೋಸ್, ಪ್ರೈಮ್‌ ಫೋಕ್‌, ಸ್ಟಾರ್‌ ಲೈಟ್‌ ಪಿಕ್ಚರ್ಸ್‌ ಎನ್ನುವ ನಾಲ್ಕು ನಿರ್ಮಾಣ ಸಂಸ್ಥೆಗಳು ಬಂಡವಾಳ ಹೂಡಿವೆ. ಸದ್ಯ ಮೊದಲ ಮೋಷನ್‌ ಪೋಸ್ಟರ್‌ ಚಿತ್ರದ ಮೇಲೆ ನಿರೀಕ್ಷೆ ಮೂಡಿಸಿದೆ.

    English summary
    Brahmastra Part One: Shiva Movie Official Motion Poster Released In Hindi, Kannada, Tamil, Telugu, Malayalam,
    Saturday, December 18, 2021, 14:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X