ತಮನ್ನಾ- ವಿಜಯ್ ಲವ್ ಬ್ರೇಕಪ್? ಸಾಕ್ಷಿ ಹುಡುಕಿದ ಫ್ಯಾನ್ಸ್
ಬಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ನಟ ವಿಜಯ್ ವರ್ಮಾ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಇಬ್ಬರ ಲಬ್ ಬ್ರೇಕಪ್ ಆಗಿದೆ ಎಂದು ಗುಲ್ಲಾಗಿದೆ. ಈ ಬಗ್ಗೆ ಬಾಲಿವುಡ್ ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೀತಿದೆ. ಇಬ್ಬರೂ ಪ್ರತಿಕ್ರಿಯಿಸದೇ ಇರುವುದು ವದಂತಿಗೆ ಮತ್ತಷ್ಟು ಇಂಬು ನೀಡುತ್ತಿದೆ.
ಮುಂಬೈ ಚೆಲುವೆ ತಮನ್ನಾ ಸೌತ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ಬಳಿಕ ಬಾಲಿವುಡ್ ಅಂಗಳದಲ್ಲಿ ಕೂಡ ಮಿಂಚಿದವರು. ಇತ್ತೀಚಿನ ವರ್ಷಗಳಲ್ಲಿ ನಟನೆಗಿಂತ ಐಟಂ ಸಾಂಗ್‌ಗಳಲ್ಲಿ ಕುಣಿದು ರಂಗೇರಿಸುತ್ತಿದ್ದಾರೆ. ವಿಜಯ್ ವರ್ಮಾ ಜೊತೆ ಮಿಲ್ಕಿ ಬ್ಯೂಟಿ ಲವ್ವಲ್ಲಿ ಬಿದ್ದಿದ್ದಾರೆ ಎನ್ನುವ ವಿಚಾರ ಪಡ್ಡೆ ಹುಡುಗರ ಹಾರ್ಟ್ ಬ್ರೇಕ್ ಮಾಡಿತ್ತು. ಇದೀಗ ಇಬ್ಬರೂ ದೂರಾಗಿದ್ದಾರೆ ಎನ್ನುವುದು ಕೂಡ ಅಷ್ಟೇ ಚರ್ಚೆಗೆ ಕಾರಣವಾಗಿದೆ.

'ಲಸ್ಟ್ ಸ್ಟೋರಿಸ್'-2 ಚಿತ್ರೀಕರಣದ ವೇಳೆ ವಿಜಯ್ ಹಾಗೂ ತಮನ್ನಾ ಪರಿಚಯವಾಗಿತ್ತು. ವಿಜಯ್ ಒಳ್ಳೆಯ ಗುಣ ಮೆಚ್ಚಿ ತಾವು ಪ್ರೀತಿಲಿ ಬಿದ್ದಿದ್ದಾಗಿ ಮಿಲ್ಕಿ ಬ್ಯೂಟಿ ಹೇಳಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಜೋಡಿ ಗುಟ್ಟಾಗಿ ಹೊಸ ವರ್ಷವನ್ನು ಸ್ವಾಗತಿಸಿತ್ತು. ತಮನ್ನಾಗೆ ವಿಜಯ್ ಮುತ್ತಿಟ್ಟಿದ್ದ ವೀಡಿಯೋ ವೈರಲ್ ಆಗಿತ್ತು. ಆಗ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವುದು ಬಹಿರಂಗವಾಗಿತ್ತು.
ಮುಂಬೈನಲ್ಲಿ ಒಮ್ಮೆ ಜೋಡಿ ಒಟ್ಟಿಗೆ ರೆಸ್ಟೋರೆಂಟ್‌ಗೆ ಹೊರಟಿದ್ದ ವೀಡಿಯೋ ವೈರಲ್ ಆಗಿ ಎಲ್ಲಾ ಊಹಾಪೋಹಕ್ಕೆ ತೆರೆಬಿದ್ದಿತ್ತು. ಬಳಿಕ ತಮ್ಮಿಬ್ಬರ ಪ್ರೇಮ್ ಕಹಾನಿಯನ್ನು ಜೋಡಿ ಒಪ್ಪಿಕೊಂಡಿತ್ತು. ಆದಷ್ಟು ಬೇಗ ಮದುವೆ ಆಗುತ್ತೇವೆ ಎಂದಿದ್ದರು. ಇತ್ತೀಚೆಗೆ ಕೆಲ ಕಾರ್ಯಕ್ರಮಗಳಲ್ಲಿ ಕೈ ಕೈ ಹಿಡಿದು ಒಟ್ಟಿಗೆ ಕಾಣಿಸಿಕೊಂಡಿದ್ದರು. ಜನವರಿಯಲ್ಲಿ 'ಆಜಾದ್' ಸಿನಿಮಾ ವೀಕ್ಷಣೆಗೆ ಒಟ್ಟಿಗೆ ಬಂದಿದ್ದರು.
ಬಾಲಿವುಡ್ ವರದಿಗಳ ಪ್ರಕಾರ ತಮನ್ನಾ ಹಾಗೂ ವಿಜಯ್ ಲವ್ ಬ್ರೇಕಪ್ ಮಾಡಿಕೊಂಡು ದೂರಾಗಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಸ್ನೇಹಿತರಾಗಿ ಇರಲು ಬಯಸಿದ್ದಾರೆ. ತಮ್ಮ ತಮ್ಮ ಪ್ರಾಜೆಕ್ಟ್‌ಗಳ ಕಡೆ ಫೋಕಸ್ ಮಾಡಬೇಕು ಎಂದುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಇಬ್ಬರೂ ಒಟ್ಟಿಗೆ ಇರುವ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್ ಮಾಡಿದ್ದಾರೆ, ಇದೇ ಬ್ರೇಕಪ್ ಆಗಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಇನ್ನು ತಮನ್ನಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಜೊತೆಗಿರುವ ವೀಡಿಯೋಗಳಿವೆ.
ತಮನ್ನಾ, ವಿಜಯ್ ಲವ್ ಬ್ರೇಕಪ್ ಆಗುತ್ತದೆ ಎಂದು ನಮಗೆ ಮೊದಲೇ ಗೊತ್ತಿತ್ತು ಎಂದು ಕೆಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್ ವರ್ಮಾ ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದವರು. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನೆಗೆಟಿವ್ ರೋಲ್‌ಗಳಲ್ಲಿ ಹೆಚ್ಚು ಅಬ್ಬರಿಸಿದ್ದಾರೆ. ತೆಲುಗು ಚಿತ್ರದಲ್ಲಿ ಸಹ ಬಣ್ಣ ಹಚ್ಚಿದ್ದಾರೆ. 2012ರಲ್ಲಿ ಬಂದಿದ್ದ 'ಚಿತ್ತಗಾಂಗ್' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು.
'ಪಿಂಕ್', 'ಗಲ್ಲಿ ಬಾಯ್', 'ಬಾಘೀ- 3' ವಿಜಯ್ ವರ್ಮಾ ನಟಿಸಿರುವ ಕೆಲ ಸಿನಿಮಾಗಳು. 'ಚಾಂದ್ ಸಾ ರೋಶನ್ ಚೆಹ್ರಾ' ಎಂಬ ಹಿಂದಿ ಚಿತ್ರದ ಮೂಲಕ ತಮನ್ನಾ ಚಿತ್ರರಂಗ ಪ್ರವೇಶಿಸಿದರು. ಬಳಿಕ ತೆಲುಗು, ತಮಿಳು ಚಿತ್ರಗಳಲ್ಲೇ ಹೆಚ್ಚು ನಟಿಸಿದರು. ತಮಿಳಿನ 'ಪಯ್ಯಾ' ಆಕೆಗೆ ಮೊದಲು ಬ್ರೇಕ್ ಕೊಟ್ಟ ಸಿನಿಮಾ. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದರು. ವಿಜಯ್, ಅಜಿತ್, ರಾಮ್‌ಚರಣ್, ಮಹೇಶ್ ಬಾಬು, ಜ್ಯೂ. ಎನ್‌ಟಿಆರ್, ಸೂರ್ಯ ಹೀಗೆ ಟಾಪ್ ಹೀರೊಗಳ ಜೊತೆ ನಟಿಸಿ ಗೆದ್ದರು.


Click it and Unblock the Notifications











