Malaika-Arjun: ಒಂದೇ ಕಮೆಂಟ್.. ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಅರ್ಜುನ್ ಕಪೂರ್.. ಆದ್ರೂ ಮಲೈಕಾ ಅವ್ರಿಬ್ಬರಿಂದ ದೂರಾಗಿದ್ದೇಗೆ?
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾರದ್ದು ಸಾಮಾನ್ಯ ಲವ್ ಸ್ಟೋರಿ ಅಲ್ಲ. ಈ ರೋಚಕ ಪ್ರೇಮ್ ಕಹಾನಿ ಬಗ್ಗೆ ಎಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದಾರೋ.. ಅಷ್ಟೇ ಮಂದಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಕೆಲವರಂತೂ ಈ ಜೋಡಿ ಹೆಚ್ಚು ದಿನ ಒಟ್ಟಿಗೆ ಇರೋಕೆ ಸಾಧ್ಯವಿಲ್ಲ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ.
ಇನ್ನು ಕೆಲವರು ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಯಾವಾಗ ಮದುವೆ ಆಗಬಹುದು ಅನ್ನೋದನ್ನು ಎದುರು ನೋಡುತ್ತಿದ್ದಾರೆ. ಈ ಮಧ್ಯೆ ಇಬ್ಬರ ಬ್ರೇಕಪ್ ಸುದ್ದಿ ಆಗಾಗ ಸದ್ದು ಮಾಡಿ ಕಣ್ಮರೆಯಾಗುತ್ತಲೇ ಇರುತ್ತೆ. ಕೆಲವು ದಿನಗಳ ಹಿಂದಷ್ಟೇ ಅರ್ಜುನ್ ಕಪೂರ್ ಹಾಗೂ ಮಲೈಕಾ ಬ್ರೇಕಪ್ ಸ್ಟೋರಿ ಹಲ್‌ಚಲ್ ಎಬ್ಬಿಸಿತ್ತು.

ಇಷ್ಟೆಲ್ಲ ಸುದ್ದಿಯಾಗುತ್ತಿದ್ದರೂ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದಕ್ಕೆ ಸರಿಯಾಗಿ ಅರ್ಜುನ್ ಕಪೂರ್ ಜೊತೆ ಸೋಶಿಯಲ್ ಮೀಡಿಯಾ ಸ್ಟಾರ್ ಕುಶಾ ಕಪಿಲಾ ಹೆಸರು ಬೇರೆ ತಳುಕು ಹಾಕಿಕೊಂಡಿತ್ತು. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನೆಟ್ಟಿಗರಿಗೆ ಈ ಜೋಡಿ ನಿಜಕ್ಕೂ ಬೇರೆ ಆಗಿದೆ ಅಂತಲೇ ಭಾವಿಸಿತ್ತು. ಆದ್ರೀಗ ಅರ್ಜುನ್ ಕಪೂರ್ ಒಂದೇ ಒಂದು ಕಮೆಂಟ್ ಎಲ್ಲದಕ್ಕೂ ತೆರೆ ಎಳೆದಂತಿದೆ.
ಬ್ರೇಕಪ್ ಸುದ್ದಿ ಆರಂಭ ಆಗಿದ್ದು ಎಲ್ಲಿಂದ?
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ವೀವ್ ಆಗಿರುತ್ತಾರೆ. ಇಬ್ಬರ ಪೋಸ್ಟ್‌ಗೆ ಇನ್ನೊಬ್ಬರು ಕಮೆಂಟ್ ಮಾಡುತ್ತಾರೆ. ಆದರೆ, ಕೆಲವು ದಿನಗಳಿಂದ ಅರ್ಜುನ್ ಮಾಡುವ ಪೋಸ್ಟ್‌ಗಳಿಗೆ ಮಲೈಕಾ ಕಮೆಂಟ್ ಮಾಡುತ್ತಿರಲಿಲ್ಲ. ಅಲ್ಲದೇ ಅರ್ಜುನ್ ಕಪೂರ್ ಒಂಟಿಯಾಗಿ ಪ್ರವಾಸ ಮಾಡಿದ್ದರೆ, ಇತ್ತ ಮಲೈಕಾ ಅರೋರಾ ಒಂಟಿಯಾಗಿ ಪಾರ್ಟಿಗೆ ಹೋಗಿದ್ದರು. ಇದು ನೆಟ್ಟಿಗರ ಬಲವಾದ ಅನುಮಾನಕ್ಕೆ ಕಾರಣವಾಗಿತ್ತು. ಇದರೊಂದಿಗೆ ಮಲೈಕಾ ಅರೋರಾ ಮತ್ತೊಂದು ನಡೆ ನೆಟ್ಟಿಗರ ತಲೆಕೆಡಿಸಿತ್ತು.
ಅರ್ಜುನ್ ಫ್ಯಾಮಿಲಿಯಿಂದ ಮಲೈಕಾ ದೂರ?
ಇತ್ತೀಚೆಗೆ ಬಾಲಿವುಡ್ ನಟ ಅರ್ಜುನ್ ಕಪೂರ್ ಕುಟುಂಬದಿಂದ ಮಲೈಕಾ ಅರೋರಾ ದೂರ ಆಗಿದ್ದಾರೆ ಅನ್ನೋ ಸುದ್ದಿಯಿದೆ. ಇನ್‌ಸ್ಟಾಗ್ರಾಂನಲ್ಲಿ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಕಪೂರ್, ಜಾಹ್ನವಿ ಕಪೂರ್ ಹಾಗೂ ಖುಷಿ ಕಪೂರ್ ಅನ್ನು ಅನ್‌ಫಾಲೋ ಮಾಡಿದ್ದಾರೆ. ಇದು ನೆಟ್ಟಿಗರ ಅನುಮಾನಕ್ಕೆ ಮತ್ತಷ್ಟು ಎಡೆ ಮಾಡಿಕೊಟ್ಟಿತ್ತು. ಆದರೆ, ಅನಿಲ್ ಕಪೂರ್, ಬೋನಿ ಕಪೂರ್ ಹಾಗೂ ಅರ್ಜುನ್ ಕಪೂರ್ ಅನ್ನೂ ಇನ್ನೂ ಫಾಲೋ ಮಾಡುತ್ತಿರೋದು ಗೊಂದಲಕ್ಕೆ ಕಾರಣವಾಗಿದೆ.
ಒಂದೇ ಕಮೆಂಟ್‌ನಲ್ಲಿ ಗಾಳಿಸುದ್ದಿಗೆ ದಿ ಎಂಡ್?
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಬ್ರೇಕಪ್ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರೋದಂತೂ ನಿಜ. ಇಬ್ಬರೂ ಪ್ರತಿಕ್ರಿಯೆ ನೀಡದೇ ಇದ್ದಿದ್ದು ನೋಡಿ ನಿಜಕ್ಕೂ ಇಬ್ಬರೂ ಬೇರೆಯಾಗಿರಬಹುದೆಂಬ ಸುದ್ದಿ ಹಬ್ಬಿತ್ತು. ಆದ್ರೀಗ ಇಬ್ಬರ ನಡುವೆ ಎಲ್ಲವೂ ಸರಿಯಿದೆ ಅಂತ ಹಲವು ಮಾಧ್ಯಮಗಳು ವರದಿ ಮಾಡಿವೆ. ಅದಕ್ಕೆ ಕಾರಣ ಮಲೈಕಾ ಅರೋ ಮಾಡಿದ ಒಂದು ಪೋಸ್ಟ್‌ಗೆ ಅರ್ಜುನ್ ಕಪೂರ್ ಕಮೆಂಟ್ ಮಾಡಿದ್ದು, ಅಂತಹದ್ದೇನು ಆಗಿಲ್ಲ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ.
ಏನದು ಅರ್ಜುನ್ ಕಪೂರ್ ಕಮೆಂಟ್?
ಇಂದು (ಆಗಸ್ಟ್ 26) ಅಂತರಾಷ್ಟ್ರೀಯ ಶ್ವಾನ ದಿನ. ಹೀಗಾಗಿ ತಮ್ಮ ನೆಚ್ಚಿ ಸಾಕು ನಾಯಿ ಕ್ಯಾಸ್ಪರ್ ಫೋಟೊವನ್ನು ಮಲೈಕಾ ಅರೋರಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. " ಶೂಟಿಂಗ್ ಸಮಯದಲ್ಲಿ ಇದಕ್ಕಿಂತ ಉತ್ತಮ ಒಡನಾಡಿಯನ್ನು ಕೇಳಲು ಸಾಧ್ಯವೇ.. ತುಂಬಾ ಸಹಜ ಅಂತ ಅನಿಸುವುದಿಲ್ಲವೇ?" ಎಂದು ವಿಡಿಯೋ ಜೊತೆಗೆ ಬರೆದು ಪೋಸ್ಟ್ ಮಾಡಿದ್ದರು. ಅದಕ್ಕೆ ಅರ್ಜುನ್ ಕಪೂರ್ ಕಮೆಂಟ್ ಮಾಡಿದ್ದು "ನಮ್ಮ ಬದುಕಿನ ರಿಯಲ್ ಸ್ಟಾರ್" ಎಂದು ಕಮೆಂಟ್ ಮಾಡಿದ್ದಾರೆ. ಈ ಮೂಲಕ ಬ್ರೇಕಪ್ ಸುದ್ದಿಗೆ ತಿಲಾಂಜಲಿ ಇಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಮಲೈಕಾ ಅರೋರಾ ಮಾತ್ರ ಅರ್ಜುನ್ ಕಪೂರ್ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











