ಮದ್ವೆ ಮೊದ್ಲೇ ತಾಯಿಯಾಗಿದ್ದ ಆ್ಯಮಿ ಜಾಕ್ಸನ್‌ ಮತ್ತೊಮ್ಮೆ ಹಸೆಮಣೆ ಏರಲು ರೆಡಿ ..!

ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ. ಯೌವ್ವನದ ಹುಚ್ಚುಕೊಡಿ ಮನಸಿನ ಇವತ್ತಿನ ಅನೇಕ ಯುವಕ-ಯುವತಿಯರಿಗೆ ಲವ್ ಅನ್ನೋದು ಶೋಕಿ. ಇವಳಿಲ್ಲದ್ರೆ ಅವಳು, ಅವನು ಇಲ್ಲಂದ್ರೆ ಮತ್ತೊಬ್ಬ.. ಹಂಗಾಗೇ ಈ ಪ್ರೀತೀಲೂ ನಾನಾ ವೆರೈಟಿಗಳು ಬಂದ್ಬಿಟ್ಟಿವೆ.ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ ಅಂತೆಲ್ಲ ನಮ್ಮ ಯೂತ್ಸ್ ನಡೆಸ್ತಾರೆ.

ಕೆಲ ಹೆಣ್ ಮಕ್ಕಳೂ ಕೂಡ ಇವನಾ ಇಲ್ಲಾ ಅವನಾ ಅಂತ ಯೋಚ್ನೆ ಮಾಡ್ತಾನೇ ಮುಂದಿರುವ ಲೈಫ್‌ನೇ ಮರೆತು ಬಿಡ್ತಾರೆ. ಇಂಥೋರಗೆಲ್ಲ ಈ ಲೈಫೇ ಒಂದ್ ಥರಾ ಸೆಕೆಂಡ್ ಹ್ಯಾಂಡ್ ಇದ್ದಂಗೆ. ಇದಕ್ಕೆ ಆ್ಯಮಿ ಜಾಕ್ಸನ್ ಸದ್ಯದ ಉದಾಹರಣೆ.

Bride-to-be Amy Jackson celebrates her bachelorette on a private jet in France with her girls squad

ಹೌದು. 14 ವರ್ಷದ ಹಿಂದೆ ಕಾಲಿವುಡ್‌ ಸಿನಿಮಾ ಮೂಲಕ, ಚಿತ್ರರಂಗ ಪ್ರವೇಶಿಸಿದ ಲಂಡನ್ ಮೂಲದ ಆ್ಯಮಿ ಜಾಕ್ಸನ್.. ಕನ್ನಡದಲ್ಲಿ ದಿ ವಿಲನ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆದರೆ ವಿಲನ್‌ನಂಥಾ ದೊಡ್ಡ ಚಿತ್ರದಲ್ಲಿ ನಟಿಸಿ, ಅದು ಬಿಡುಯಗಡೆಯಾದರೂ ಕೂಡಾ ಆ್ಯಮಿ ಜಾಕ್ಸನ್ ಗೆ ತಾನು ಯಾವ ಭಾಷೆಯ ಚಿತ್ರದಲ್ಲಿ ನಟಿಸಿದ್ದೆಂಬುದೇ ಗೊತ್ತಿರಲಿಲ್ಲ ಅನ್ನುವುದು ಬೇರೆ ವಿಚಾರ. ಇಂಥ ಆ್ಯಮಿ ಜಾಕ್ಸನ್ ಮದುವೆ ಮುನ್ನವೇ ಗರ್ಭಿಣಿಯಾಗುವ ಮೂಲಕ ಅನೇಕರನ್ನ ನಿಬ್ಬೇರಗಾಗಿಸಿದ್ದರು.2019ರಲ್ಲಿ ವ್ಯಾಪಕ ಚರ್ಚೆಗೀಡಾದರು

ಆದರೆ, ಅದೇನಾಯ್ತೋ.. ಉದ್ಯಮಿ ಜಾರ್ಜ್‌ ಪನಯಿಟೊ ಜೊತೆ ಕೈ ಹಿಡಿದು ಸುತ್ತಾಡ್ತಾನೇ, ಮದುವೆ ಮುನ್ನವೇ ಗಂಡು ಮಗುಗೆ ಜನ್ಮ ನೀಡಿದ್ದ ಆ್ಯಮಿ ಜಾಕ್ಸನ್ ... ತಮ್ಮಿಬ್ಬರ ಪ್ರೀತಿಯ ಸಂಕೇತವಾದ ಮಗನಿಗೆ ಆ್ಯಂಡ್ರಿಯಾಸ್ ಎಂದು ನಾಮಕರಣ ಮಾಡಿ, ಜಾರ್ಜ್‌ ಜೊತೆ ಸಂಬಂಧ ಕಡಿದುಕೊಂಡರು. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜಾರ್ಜ್‌ ಜೊತೆ ಇದ್ದ ತಮ್ಮ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿದ್ದರು.

Bride-to-be Amy Jackson celebrates her bachelorette on a private jet in France with her girls squad

ಹೀಗೆ ಜಾರ್ಜ್ ಇಂದ ದೂರವಾದ ಆ್ಯಮಿ ಜಾಕ್ಸನ್ ಈಗ ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜೊತೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಮದುವೆ ಮುನ್ನ ತನ್ನ ಸ್ನೇಹಿತೆಯರ ಜೊತೆ ಪ್ರೈವೇಟ್ ಜೆಟ್‌ನಲ್ಲಿ ಬ್ಯಾಚುಲರ್ ಪಾರ್ಟಿಯನ್ನೂ ಮಾಡಿ ಸಂಭ್ರಮಿಸಿದ್ದಾರೆ.

ತಮ್ಮ ಬದುಕಿನ ಈ ಸುಂದರ ಕ್ಷಣಗಳನ್ನ ತಮ್ಮ ಅಭಿಮಾನಿಗಳ ಜೊತೆಯೂ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಆ್ಯಮಿ ಜಾಕ್ಸನ್ ಅವರ ಈ ಬ್ಯಾಚುಲರ್ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಥರಹೇವಾರಿ ಅಭಿಪ್ರಾಯಗಳೂ ಕೂಡ ವ್ಯಕ್ತವಾಗುತ್ತಿವೆ.

ಇನ್ನೂ ಸದ್ಯ ಬ್ಯಾಚುಲರ್ ಪಾರ್ಟಿಯನ್ನ ಮಾಡಿರುವ ಆ್ಯಮಿ ಜಾಕ್ಸನ್, ತಮ್ಮ ಎರಡು ವರ್ಷದ ಗೆಳೆಯ ಎಡ್ ವೆಸ್ಟ್ವಿಕ್ ಜೊತೆ ಯಾವಾಗ ಮದುವೆಯಾಗಲಿದ್ದಾರೆ ಅನ್ನುವ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಡೆಸ್ಟಿನೇಷನ್ ವೆಡ್ಡಿಂಗ್ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆಗೆ ಕೂಡ ಆ್ಯಮಿ ಜಾಕ್ಸನ್ ಉತ್ತರವನ್ನ ನೀಡಿಲ್ಲ.

ಒಟ್ನಲ್ಲಿ ಆ್ಯಮಿ ಜಾಕ್ಸನ್ ಮತ್ತೊಮ್ಮೆ ಖುಷಿ ಖುಷಿಯಾಗಿ ಮದುವೆಯಾಗಲು ಸಿದ್ಧರಾಗಿದ್ದಾರೆ. ಶೀಘ್ರದಲ್ಲಿಯೇ ಆರಂಭವಾಗಲಿರುವ ಎಡ್ ವೆಸ್ಟ್ವಿಕ್ ಮತ್ತು ಆ್ಯಮಿ ಜಾಕ್ಸನ್ ಅವರ ದಾಂಪತ್ಯ ಜೀವನಕ್ಕೆ ಯಾರ ಕಣ್ಣು ತಾಕದಿರಲಿ ಅನ್ನುವುದು ಇವರ ಅಭಿಮಾನಿಗಳ ಆಶಯ.

More from Filmibeat

English summary
Amy Jackson shares a glimpse of her Paris bachelorette party; Ed Westwick declares his love. Check out the photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X