ಅಕ್ಷಯ್ ಕುಮಾರ್ ಜೊತೆ ನಟಿಸಬೇಕಿತ್ತು ಬ್ರೂಸ್ ಲೀ ಮಗಳು; ಇಂಟರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕ

ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಾರತ ಸಿನಿಮಾರಂಗ ಮಾತ್ರವಲ್ಲದೆ ವಿಶ್ವದಲ್ಲೇ ಖ್ಯಾತ ನಟನಾಗಿ ಗಮನ ಸೆಳೆಯುತ್ತಿರುವ ಅಕ್ಷಯ್ ಕಮಾರ್ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿದ್ದಾರೆ. ಅಕ್ಷಯ್ ಕುಮಾರ್ ಜೊತೆ ನಟಸಲು ನಟಿಮಣಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.

ಬಾಲಿವುಡ್ ಸ್ಟಾರ್ ನಟನ ಜೊತೆ ವಿಶ್ವ ವಿಖ್ಯಾತ ನಟ ಬ್ರೂಸ್ ಲೀ ಮಗಳು ನಟಿಸಬೇಕಿತ್ತು. ಆದರೆ ಇದು ಸಾಧ್ಯವಾಗಿಲ್ಲ. ಈ ಬಗ್ಗೆ ನಟ ಮತ್ತು ನಿರ್ಮಾಪಕ ಗುಲ್ಶನ್ ಗ್ರೋವನ್ ಬಹಿರಂಗ ಪಡಿಸಿದ್ದಾರೆ. ಗುಲ್ಶನ್ ಹಳೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಒಂದಿಷ್ಟು ಇಂಟರೆಸ್ಟಿಂಗ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಇತ್ತೀಚಿಗೆ ಖ್ಯಾತ ನಟ ಬ್ರೂಸ್ ಲೀ ಮಗಳ ಫೋಟೋ ಶೇರ್ ಮಾಡಿ, ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ. ಬ್ರೂಸ್ ಮಗಳು ಶಾನನ್ ಲೀ ಬಾಲಿವುಡ್ ಸಿನಿಮಾ ಮಾಡಬೇಕಿತ್ತು, ಆದರೆ ಕಾರಣಾಂತರಗಳಿಂತ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

Bruce Lee Daughter Shannon Lee was to star in one of Akshay Kumar film

ಈ ಬಗ್ಗೆ ಗುಲ್ಶನ್ ಸಾಮಾಜಿಕ ಜಾಲತಾಣದಲ್ಲಿ, 'ಖ್ಯಾತ ನಟ ಬ್ರೂಸ್ ಲೀ ಪುತ್ರಿ ಶಾನನ್ ಲೀ ಜೊತೆ ನಾನು ಲಾಸ್ ಏಂಜಲೀಸ್ ನಲ್ಲಿ ತೆಗೆದುಕೊಂಡು ಫೋಟೋ. ಶಾನನ್ ಅವರನ್ನು ಬಾಲಿವುಡ್ ಗೆ ಕರೆತರಬೇಕು ಎಂದು ಪ್ರಯತ್ನಿಸಿದ್ದೆ. ಆಕ್ಷಯ್ ಕುಮಾರ್ ಎದುರು ನಟಿಸಬೇಕಿತ್ತು. ಅಕ್ಷಯ್ ಕುಮಾರ್ ಮತ್ತು ಶಾನನ್ ಲೀ ನಡುವೆ ಫೈಟಿಂಗ್ ದೃಶ್ಯದ ಮೂಲಕ ಸಿನಿಮಾ ಕೊನೆಗೊಳ್ಳಬೇಕಿತ್ತು. ಈ ಸಿನಿಮಾದಲ್ಲಿ ನಟಿಸಲು ಅಕ್ಷಯ್ ಕುಮಾರ್ ಸಹ ಉತ್ಸುಕರಾಗಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ' ಎಂದು ಬರೆದುಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಗುಲ್ಶನ್ ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ. ಇನ್ನು ನಟ ಅಕ್ಷಯ್ ಕುಮಾರ್ ಬಳಿ ಕೈತುಂಬ ಸಿನಿಮಾಗಳಿವೆ. ಸದ್ಯ ಅಕ್ಷಯ್ ಕುಮಾರ್ ಬೆಲ್ ಬಾಟಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.

ಪೃಥ್ವಿರಾಜ್, ಬಚ್ಚನ್ ಪಾಂಡೆ, ಅಂತರಿಂಗಿ ರೇ ಹಾಗೂ ಇತ್ತೀಚಿಗೆ ಅನೌನ್ಸ್ ಆದ ಹೊಸ ಸಿನಿಮಾ ರಾಮ್ ಸೇತು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್ ಕುಮಾರ್ ಕೊನೆಯದಾಗಿ ಲಕ್ಷ್ಮೀ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.

More from Filmibeat

English summary
Famous Actor Bruce Lee Daughter Shannon Lee was to star in Akshay Kumar film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X