ಬಾಲಿವುಡ್ ನಟಿಗೆ ಮಂಡಿಯೂರಿ ಪ್ರೇಮ ನಿವೇದಿಸಿದ ವಿದೇಶಿ ಚೆಲುವ.!
ಪ್ರೀತಿ ಒಂಥರಾ ಕಚಗುಳಿ ಅಂತಾರಲ್ಲ.... ಹಾಗೆ ಈ ಪ್ರೀತಿ ಎಂಬ ಕಚಗುಳಿಯ ಅನುಭವ ಸದ್ಯ ಆಗಿರುವುದು ಬಾಲಿವುಡ್ ನಟಿ ಬ್ರೂನಾ ಅಬ್ದುಲ್ಲಾ ಗೆ.!
ಯಾರೀ ಬ್ರೂನಾ ಅಬ್ದುಲ್ಲಾ ಅಂದ್ರಾ... ಒಮ್ಮೆ ಜಾನ್ ಅಬ್ರಾಹಂ ಹಾಗೂ ಅಕ್ಷಯ್ ಕುಮಾರ್ ಅಭಿನಯದ 'ದೇಸಿ ಬಾಯ್ಸ್' ಸಿನಿಮಾ ನೆನಪಿಸಿಕೊಳ್ಳಿ... ಆ ಚಿತ್ರದಲ್ಲಿ 'ಸುಭಾ ಹೋನೇ ನಾ ದೇ..' ಹಾಡಲ್ಲಿ ಬಳಕುವ ಬಳ್ಳಿಯಂತೆ ಸೊಂಟ ಬಳುಕಿಸಿರುವ ಕಿನ್ನರಿ ಬೇರೆ ಯಾರೂ ಅಲ್ಲ, ಇದೇ ಬ್ರೂನಾ ಅಬ್ದುಲ್ಲಾ.!
'ಕ್ಯಾಶ್', 'ಐ ಹೇಟ್ ಲವ್ ಸ್ಟೋರೀಸ್', 'ದೇಸಿ ಬಾಯ್ಸ್', 'ಗ್ರ್ಯಾಂಡ್ ಮಸ್ತಿ', 'ಜೈ ಹೋ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಬ್ರೂನಾ ಅಬ್ದುಲ್ಲಾ ಈಗ ಪ್ರೇಮದ ಅಮಲಿನಲ್ಲಿ ತೇಲಾಡುತ್ತಿದ್ದಾರೆ.
ಸ್ವಿಟ್ಜರ್ಲ್ಯಾಂಡ್ ಎಂಬ ಭೂಲೋಕದ ಸ್ವರ್ಗದಲ್ಲಿ ಸ್ಕಾಟ್ಲೆಂಡ್ ಯುವಕ ಬ್ರೂನಾ ಅಬ್ದುಲ್ಲಾ ಗೆ ಲವ್ ಪ್ರಪೋಸ್ ಮಾಡಿದ್ದಾರೆ. ಇದ್ಯಾವುದೋ ರೀಲ್ ಸ್ಟೋರಿ ಇರ್ಬೇಕು ಎಂದುಕೊಳ್ಳಬೇಡಿ. ರಿಯಲ್ಲಾಗಿ ಬ್ರೂನಾ ಅಬ್ದುಲ್ಲಾ ಗೆ ಲವ್ ಪ್ರಪೋಸ್ ಮಾಡಿರುವ ವಿಡಿಯೋ ಇಲ್ಲಿದೆ ನೋಡಿರಿ....
ಹೇಗಿದೆ ನೋಡಿ ಲವ್ ಪ್ರಪೋಸ್...
ನಿಸರ್ಗದ ಸಿರಿಯಲ್ಲಿ... ಪ್ರಕೃತಿಯ ಮಡಿಲಲ್ಲಿ... ಮಂಡಿಯೂರಿ ಕುಳಿತು... ಕೈಯಲ್ಲಿ ಉಂಗುರ ಹಿಡಿದು ''ನನ್ನನ್ನು ಮದುವೆ ಆಗುವೆಯಾ.?'' ಎಂದು ಸ್ಕಾಟ್ಲೆಂಡ್ ಮೂಲದ ಆಲ್ (AL) ಎಂಬಾತ ಬ್ರೂನಾ ಅಬ್ದುಲ್ಲಾಗೆ ಪ್ರಪೋಸ್ ಮಾಡಿದ್ದಾರೆ.

ಭಾವುಕರಾದ ಬ್ರೂನಾ ಅಬ್ದುಲ್ಲಾ
ಸ್ಕಾಟ್ಲೆಂಡ್ ಮೂಲದ ಆಲ್ (AL) ಲವ್ ಪ್ರಪೋಸ್ ಮಾಡುತ್ತಿದ್ದಂತೆಯೇ, ಬ್ರೂನಾ ಅಬ್ದುಲ್ಲಾ ಭಾವುಕರಾದರು. ಕಣ್ಣೀರಿಡಲು ಶುರು ಮಾಡಿದರು. ಆಲ್ ನಂತೆ ಬ್ರೂನಾ ಕೂಡ ಮಂಡಿಯೂರಿ ಲವ್ ಪ್ರಪೋಸ್ ನ ಒಪ್ಪಿಕೊಂಡರು.

ನಿಂತಲ್ಲೇ ಎಂಗೇಜ್ ಆದ ಜೋಡಿ...
ತಮ್ಮ ಪ್ರೀತಿಯನ್ನ ಆಲ್ ನಿವೇದಿಸಿಕೊಳ್ಳುತ್ತಿದ್ದಂತೆಯೇ ಬ್ರೂನಾ ಅಬ್ದುಲ್ಲಾ ಒಪ್ಪಿಕೊಂಡರು. ತಕ್ಷಣ ತಾವು ತಂದಿದ್ದ ಉಂಗುರವನ್ನ ಬ್ರೂನಾ ಅಬ್ದುಲ್ಲಾಗೆ ತೊಡಿಸಿ ಅಪ್ಪಿಕೊಂಡು ಮುತ್ತಿಟ್ಟರು. ನಿಂತ ಜಾಗದಲ್ಲಿಯೇ ಆಲ್-ಬ್ರೂನಾ ಅಬ್ದುಲ್ಲಾ ಎಂಗೇಜ್ ಆದರು.

ಅತ್ಯುತ್ತಮ ದಿನ.!
ಇಷ್ಟೆಲ್ಲಾ ಆದ್ಮೇಲೆ ಸೆಲ್ಫಿ ಕ್ಲಿಕ್ ಮಾಡಿಕೊಂಡ ಜೋಡಿ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ 'ಎಂಗೇಜ್ಮೆಂಟ್' ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ತನ್ನ ಜೀವಮಾನದಲ್ಲಿಯೇ ಇದು ಅತ್ಯುತ್ತಮ ದಿನ ಎಂದು ಬ್ರೂನಾ ಅಬ್ದುಲ್ಲಾ ಬಣ್ಣಿಸಿದ್ದಾರೆ. ಅಂದ್ಹಾಗೆ, ಬ್ರೂನಾ ಹಾಗೂ ಆಲ್ ಹಲವು ವರ್ಷಗಳಿಂದ ಸ್ನೇಹಿತರು. ಕೆಲಕಾಲದಿಂದ ಡೇಟಿಂಗ್ ಮಾಡುತ್ತಿರುವ ಈ ಜೋಡಿ ಇದೀಗ ಮದುವೆ ಆಗಲು ನಿರ್ಧರಿಸಿದ್ದಾರೆ.


Click it and Unblock the Notifications











