For Quick Alerts
  ALLOW NOTIFICATIONS  
  For Daily Alerts

  ವಿಮಾನದಲ್ಲಿ ನಟಿಗೆ ಲೈಂಗಿಕ ಹಿಂಸೆ: ಉದ್ಯಮಿ ಬಂಧನ

  |

  ವಿಮಾನದಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಗಾಜಿಯಾಬಾದ್‌ನ ಉದ್ಯಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

  ಗಾಜಿಯಾಬಾದ್‌ನ ಉದ್ಯಮಿಯೊಬ್ಬಾತ ಅಕ್ಟೋಬರ್ 3 ರಂದು ಮುಂಬೈಗೆ ವಾಪಸ್ಸಾಗುತ್ತಿದ್ದ ವಿಮಾನದಲ್ಲಿ ನಟಿಯೊಬ್ಬರ ಪಕ್ಕದ ಸೀಟಿನಲ್ಲಿ ಕೂತು ಪ್ರಯಾಣ ಮಾಡುತ್ತಿದ್ದರು.

  ವಿಮಾನವು ಮುಂಬೈ ವಿಮಾನ ನಿಲ್ದಾಣ ತಲುಪಿದಾಗ ನಟಿಯು ತನ್ನ ಬ್ಯಾಗ್ ತೆಗೆದುಕೊಳ್ಳಲು ಸೀಟಿನಿಂದ ಮೇಲಕ್ಕೆದ್ದಿದ್ದಾರೆ, ಆಗ ಉದ್ಯಮಿಯು ನಟಿಯ ಸೊಂಟವನ್ನು ಹಿಡಿದು ತನ್ನತ್ತ ಎಳೆದಿದ್ದಾನೆ. ಕೂಡಲೇ ಪ್ರತಿಭಟಿಸಿದ ನಟಿ ವಿಮಾನದ ಸಿಬ್ಬಂದಿಗೆ ದೂರು ನೀಡಿದ್ದಾರೆ.

  ನಟಿಯ ಸಹಾಯಕ್ಕೆ ಬಂದ ಸಿಬ್ಬಂದಿ, ವಿಮಾನದ ಕಸ್ಟಮರ್ ಸಪೋರ್ಟ್‌ಗೆ ದೂರು ನೀಡುವಂತೆ ಹೇಳಿದ್ದಾರೆ. ಅಂತೆಯೇ ನಟಿಯು ಅದೇ ದಿನ ಮೇಲ್ ಮೂಲಕ ವಿಮಾನದ ಗ್ರಾಹಕ ಸೇವಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹಾಗೂ ವರ್ಸೋವಾ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಿದ್ದಾರೆ. ಅಲ್ಲದೆ, ಸಹಾರ್ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಿದ್ದಾರೆ.

  ''ಈ ಘಟನೆಯಿಂದ ನಾನು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೇನೆ. ನನಗೆ ಆ ಸಮಯದಲ್ಲಿ ನನ್ನ ಜೊತೆಯಲ್ಲಿದ್ದ ಗೆಳತಿ ಸಹಾಯ ಮಾಡಿದಳು'' ಎಂದು ಪೊಲೀಸರ ಬಳಿ ನಟಿ ಹೇಳಿಕೊಂಡಿದ್ದಾರೆ. ಅಲ್ಲದೆ ಕಿರುಕುಳ ನೀಡಿದ ವ್ಯಕ್ತಿಯ ಹೆಸರು, ವಿಮಾನ ಪ್ರಯಾಣದ ಮಾಹಿತಿ ಹಾಗೂ ಚಿತ್ರವನ್ನು ಪೊಲೀಸರಿಗೆ ನೀಡಿದ್ದಾರೆ.

  ನಟಿ ನೀಡಿದ ದಾಖಲೆ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ರಾಜೀವ್ ಎಂಬಾತ ದೊರಕಿದ್ದು, ಆತನು ತಾನು ತಪ್ಪಿತಸ್ಥನಲ್ಲ ನನ್ನ ಜೊತೆ ಕೂತಿದ್ದವರು ನಟಿಗೆ ಹೀಗೆ ಮಾಡಿದ್ದಾರೆ ಎಂದು ಹೇಳಿ ಆತನ ಜೊತೆ ಪ್ರಯಾಣಿಸಿದವರ ಮಾಹಿತಿ ನೀಡಿದ್ದಾರೆ. ಸಹ ಪ್ರಯಾಣಿಕರ ಚಿತ್ರಗಳನ್ನು ನಟಿಗೆ ಪೊಲೀಸರು ತೋರಿಸಲಾಗಿ, ನಿತಿನ್ ಎಂಬಾತನನ್ನು ನಟಿಯು ಗುರುತಿಸಿದ್ದು, ಆತನೇ ತನ್ನ ಸೊಂಟದ ಭಾಗ ಹಿಡಿದು ಎಳೆದನೆಂದು ಹೇಳಿದ್ದಾರೆ.

  ನಟಿಯ ಹೇಳಿಕೆ ಮೇಲೆ ಎಫ್‌ಐಆರ್ ದಾಖಲಿಸಿರುವ ಪೊಲೀಸರು ನಿತಿನ್‌ ಅನ್ನು ಮುಖ್ಯ ಆರೋಪಿಯನ್ನಾಗಿ ಮಾಡಿ ಆತನನ್ನು ಅಕ್ಟೋಬರ್ 14 ರಂದು ಬಂಧಿಸಿ, ಬೊಯ್‌ವಾಡಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

  English summary
  A Businessman arrested for molesting actress in flight. Actress gave complaint in Versova police station, Businessman identified as Nitin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X