ಸಿನಿಮಾಗಳಿಂದ ನಟಿ ಕಿಯಾರಾ ಅದ್ವಾನಿ 2 ವರ್ಷ ಬ್ರೇಕ್; 'ಟಾಕ್ಸಿಕ್' ಕಥೆಯೇನು?

ಬಾಲಿವುಡ್ ನಟಿ ಕಿಯಾರಾ ಅದ್ವಾನಿ ತಾವು ಗರ್ಭಿಣಿ ಆಗಿರುವ ಸಂಗತಿಯನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ನಟ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಚೆಲುವೆಯ ವಿವಾಹ ನಡೆದಿತ್ತು. ದಂಪತಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮನೆಗೆ ಹೊಸ ಅತಿಥಿಯ ಆಗಮನದಲ್ಲಿರುವ ವಿಚಾರ ತಿಳಿಸಿದ್ದರು.

ಸಾಮಾನ್ಯವಾಗಿ ಮಹಿಳೆಯರು ಗರ್ಭಿಣಿಯಾದಾಗ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಹೊಟ್ಟೆಯಲ್ಲಿರುವ ಮಗುವಿನ ದೃಷ್ಟಿಯಿಂದ ದೂರದ ಪ್ರಯಾಣ, ಕಷ್ಟದ ಕೆಲಸಗಳನ್ನು ಮಾಡುವುದಿಲ್ಲ. ವೈದ್ಯರು ಕೂಡ ಇದೇ ಸಲಹೆ ನೀಡುತ್ತಾರೆ. ಇದೇ ಕಾರಣಕ್ಕೆ ನಟಿಯರು ಕೂಡ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಸಿನಿಮಾಗಳಿಂದ ಬ್ರೇಕ್ ಪಡೆಯುತ್ತಾರೆ. ಕೆಲವರು ಮಾತ್ರ ಸಾಧ್ಯವಾದಷ್ಟು ದಿನ ಕೆಲಸ ಮಾಡುತ್ತಾರೆ.

Buzz Kiara Advani exits Don 3 is her pregnancy affecting Yash s Toxic shooting

ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದ ಸಮಯದಲ್ಲಿ ಕೂಡ ಸಿನಿಮಾ ಚಿತ್ರೀಕರಣ ಹಾಗೂ ಪ್ರಮೋಷನ್‌ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದೀಗ ಕಿಯಾರಾ ಅದ್ವಾನಿ ಸಿನಿಮಾಗಳಿಂದ ಬ್ರೇಕ್ ಪಡೆಯುತ್ತಾರೆ. 'ಡಾನ್- 3' ಚಿತ್ರದಲ್ಲಿ ನಟಿಸುವುದಿಲ್ಲ ಎನ್ನುವ ಚರ್ಚೆ ಶುರುವಾಗಿದೆ. ರಣ್‌ವೀರ್ ಸಿಂಗ್ ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಫರ್ಹಾನ್ ಅಖ್ತರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಣ್‌ವೀರ್ ಸಿಂಗ್ ಬಿಟ್ಟರೆ 'ಡಾನ್‌- 3' ಚಿತ್ರಕ್ಕೆ ಕಲಾವಿದರ ಆಯ್ಕೆ ಆಗಿಲ್ಲ ಎನ್ನಲಾಗ್ತಿದೆ. ಆದರೆ ಕಿಯಾರಾ ಅದ್ವಾನಿ ಅವರನ್ನು ಪ್ರಮುಖ ಪಾತ್ರವೊಂದಕ್ಕೆ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೀತಿತ್ತು. ಇದೀಗ ಆಗಿ ಆ ಚಿತ್ರದಲ್ಲಿ ನಡಿಸದೇ ಇರಲು ತೀರ್ಮಾನಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೇ ವರ್ಷ 'ಡಾನ್- 3' ಸಿನಿಮಾ ಆರಂಭಿಸಲು ಚಿತ್ರತಂಡ ಮುಂದಾಗಿದೆ. ಆದರೆ ಕಿಯಾರಾ ಅಡ್ವಾನಿ ಸದ್ಯ ನಟಿಸುತ್ತಿರುವ 'ಟಾಕ್ಸಿಕ್' ಹಾಗೂ 'ವಾರ್'-2 ಸಿನಿಮಾಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ.

Buzz Kiara Advani exits Don 3 is her pregnancy affecting Yash s Toxic shooting

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಹೀರೊ ಆಗಿ ನಟಿಸುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಮುಂಬೈನಲ್ಲಿ ನಡೆದ ಚಿತ್ರೀಕರಣದಲ್ಲಿ ಕಿಯಾರಾ ಭಾಗಿ ಆಗಿದ್ದರು. ಆದರೆ ಅಧಿಕೃತವಾಗಿ ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ. ಇನ್ನು ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.

ಹೆಣ್ಣಿಗೆ ತಾಯ್ತನ ಒಂದು ವರ. ಪ್ರತಿಯೊಬ್ಬ ಮಹಿಳೆಗೆ ತಾಯ್ತನ ಜೀವನದ ಮಹತ್ವದ ಘಟ್ಟ. ಹಾಗಾಗಿ ತಾಯ್ತನ ಎಂಜಾಯ್ ಮನಸ್ಸು ಮಾಡಿರುವ ಕಿಯಾರಾ 2 ವರ್ಷ ಸಿನಿಮಾಗಳಿಂದ ದೂರ ಇರಲು ತೀರ್ಮಾನಿಸಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂದಹಾಗೆ 'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ನಟಿಸಬೇಕಿರುವ ಸನ್ನಿವೇಶಗಳ ಚಿತ್ರೀಕರಣ ಸಂಪೂರ್ಣವಾಗಿ ಕಂಪ್ಲೀಟ್ ಆಗಿದ್ಯಾ? ಇನ್ನು ಬಾಕಿ ಇದ್ಯಾ? ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಬಹಳ ದೊಡ್ಡಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್ ಹಾಕಿ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಪ್ರತಿ ದೃಶ್ಯವನ್ನು ತಿದ್ದಿ ತೀಡುವ ಕೆಲಸ ನಡೀತಿದೆ. ಈ ವರ್ಷ ಸಿನಿಮಾ ಬಿಡುಗಡೆ ಅನುಮಾನ ಎನ್ನುವಂತಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಬಹಳ ಮುತುವರ್ಜಿ ವಹಿಸಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.

ಕಿಯಾರಾ ಬದಲು ಕೃತಿ ಸನೂನ್ 'ಡಾನ್- 3' ಚಿತ್ರದಲ್ಲಿ ನಟಿಸಬಹುದು ಎನ್ನುವ ಚರ್ಚೆ ಶುರುವಾಗಿದೆ. ಇದೆಲ್ಲದರ ನಡುವೆ 'ಟಾಕ್ಸಿಕ್' ಸಿನಿಮಾ ಕಥೆಯೇನು? ಈ ಚಿತ್ರದ ವಿಚಾರದಲ್ಲಿ ಕಿಯಾರಾ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿಬಿಡುತ್ತಾರೆ ಎಂದು ಹೇಳಲಾಗ್ತಿದೆ.

More from Filmibeat

English summary
Kiara Advani steps out of Don 3, raising speculation about whether her pregnancy will have any impact on Yash's upcoming film Toxic;
Read more about: toxic kiara advani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X