'ರಾಮಾಯಣ' ಚಿತ್ರದಲ್ಲಿ ರಣ್‌ಬೀರ್ ದ್ವಿಪಾತ್ರ? ಯಶ್ ರಾವಣನಾಗೋದು ಯಾವಾಗ?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಚಿತ್ರೀಕರಣ ಸದ್ದಿಲ್ಲದೇ ನಡೀತಿದೆ. ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ಹಾಗೂ ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಆದರೆ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿಲ್ಲ. ಸಿನಿಮಾ ತೆರೆಗೆ ಬರೋಕೆ ಕಡಿಮೆ ಅಂದ್ರು ಎರಡು ವರ್ಷ ಬೇಕು.
ನಿಮಿತ್ ಮಲ್ಹೋತ್ರಾ ಜೊತೆ ಸೇರಿ ರಾಕಿಂಗ್ ಸ್ಟಾರ್ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅವರು ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಇನ್ನು ಆಧುನಿಕ ತಂತ್ರಜ್ಞಾನ ಬಳಸಿ ಬಹಳ ಅದ್ಭುತವಾಗಿ 'ರಾಮಾಯಣ' ಕಾವ್ಯ ತೆರೆಗೆ ತರುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ಬಗ್ಗೆ ಬಾಲಿವುಡ್‌ನಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆ ಚಿತ್ರದ ಕೆಲ ಮೇಕಿಂಗ್ ಫೋಟೊಗಳು ಲೀಕ್ ಆಗಿತ್ತು.

ಸದ್ಯ ಯಶ್ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ 'ರಾಮಾಯಣ' ಚಿತ್ರತಂಡ ಸೇರಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚಿತ್ರದ ಸ್ಟಾರ್‌ಕಾಸ್ಟ್ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಿದೆ. ಹನುಮಂತನಾಗಿ ಸನ್ನಿ ಡಿಯೋಲ್, ದಶರಥನಾಗಿ ಅರುಣ್ ಗೋವಿಲ್, ಲಕ್ಷ್ಮಣನಾಗಿ ರವಿ ದುಬೆ ನಟಿಸುತ್ತಿದ್ದಾರೆ.
ಅಧಿಕೃತವಾಗಿ ಯಾರು ಕೂಡ 'ರಾಮಾಯಣ' ಚಿತ್ರದ ಬಗ್ಗೆ ಅಪ್‌ಡೇಟ್ ಕೊಡುತ್ತಿಲ್ಲ. ಅದೇ ಕಾರಣಕ್ಕೆ ಭಾರೀ ಗೊಂದಲ ಶುರುವಾಗಿದೆ. 2 ಭಾಗಗಳಾಗಿ ರಾಮಾಯಣ ಕಾವ್ಯವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. 'ದಂಗಲ್' ರೀತಿಯ ಅದ್ಭುತ ಸಿನಿಮಾ ಕಟ್ಟಿಕೊಟ್ಟ ನಿತೇಶ್ ತಿವಾರಿ ಈ ಬಾರಿ ಪೌರಾಣಿಕ ಕಾವ್ಯ ಕಟ್ಟಿಕೊಟ್ಟು ಮೋಡಿ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

'ರಾಮಾಯಣ' ಚಿತ್ರದಲ್ಲಿ ರಣ್‌ಬೀರ್ ಕಪೂರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಶ್ರೀರಾಮನಾಗಿ ಮಾತ್ರವಲ್ಲದೇ ಪರಶುರಾಮನ ಪಾತ್ರದಲ್ಲಿ ಕೂಡ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ. ಇದು ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಪರಶುರಾಮರ ಪಾತ್ರಕ್ಕಾಗಿ ರಣ್‌ಬೀರ್ ಬಹಳ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಅಮಿತಾಬ್ ಬಚ್ಚನ್ ಕೂಡ 'ರಾಮಾಯಣ' ಚಿತ್ರದ ಭಾಗವಾಗಲಿದ್ದಾರೆ. ಜಟಾಯು ಪಕ್ಷಿಗೆ ಬಿಗ್‌ಬಿ ವಾಯ್ಸ್ ಕೊಡಲಿದ್ದಾರೆ. ಅಂದರೆ ದೈಹಿಕವಾಗಿ ತೆರೆಮೇಲೆ ಕಾಣಿಸಿಕೊಳ್ಳದಿದ್ದರೂ ತಮ್ಮ ಧ್ವನಿಯಿಂದ ಜಟಾಯು ಪಾತ್ರವಾಗಿ ಅಮಿತಾಬ್ ಇರುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಇದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಬಿಗ್‌ಬಿ ಖಡಕ್ ವಾಯ್ಸ್ ಬಗ್ಗೆ ಹೇಳುವುದು ಬೇಕಾಗಿಲ್ಲ. ಜಟಾಯು ಪಾತ್ರಕ್ಕೆ ಇದಕ್ಕಿಂತ ಒಳ್ಳೆ ಆಯ್ಕೆ ಮತ್ತೊಂದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.
'ಕಲ್ಕಿ 2898 AD' ಚಿತ್ರದಲ್ಲಿ ಅಶ್ವತ್ಥಾಮನಾಗಿ ಬಿಗ್‌ಬಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಇದೀಗ ಅವರ ಕಣ್ಣುಗಳನ್ನು ಸ್ಕ್ಯಾನ್ ಮಾಡಿ ಜಟಾಯು ಪಕ್ಷಿಯ ಗ್ರಾಫಿಕ್ಸ್‌ಗೆ ಬಳಸಿಕೊಳ್ಳುವ ಲೆಕ್ಕಾಚಾರ ನಡೀತಿದೆಯಂತೆ. ಆ ಮೂಲಕ ಆ ಪಾತ್ರವನ್ನು ಮತ್ತಷ್ಟು ಸೊಗಸಾಗಿ ತೆರೆಮೇಲರ ತೋರಿಸುವ ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಸೀತಾಪರಣದ ವೇಳೆ ಜಟಾಯು ಪಕ್ಷಿ ರಾವಣನ ವಿರುದ್ಧ ನಿಂತಿತ್ತು. ಹಾಗಾಗಿ ಚಿತ್ರದಲ್ಲಿ ಈ ಸನ್ನಿವೇಶವನ್ನು ಚೆಂದವಾಗಿ ತೋರಿಸುವ ತಯಾರಿ ನಡೀತಿದೆ.
'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಬಹಳ ದಿನಗಳಿಂದ ಕೇಳಿಬರ್ತಿದೆ. ಆದರೆ ಆ ಬಗ್ಗೆ ಅವರು ಇನ್ನು ಮಾತನಾಡಿಲ್ಲ. ಡಿಸೆಂಬರ್ ವೇಳೆಗೆ ಯಶ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಸನ್ನಿ ಡಿಯೋಲ್ ಕೂಡ ಅದೇ ಸಮಯದಲ್ಲಿ ಹನುಮಂತನಾಗಿ ಬಣ್ಣ ಹಚ್ಚುತ್ತಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.
2026ರಲ್ಲಿ 'ರಾಮಾಯಣ' ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ವರ್ಷ ಸಿನಿಮಾ ಅಧಿಕೃವಾಗಿ ಘೋಷಣೆ ಆಗುವ ಸಾಧ್ಯತೆಯಿದೆ.


Click it and Unblock the Notifications











