For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಷನ್ ನಟನೆಯ 'ರಾಮಾಯಣ' ರಿಜೆಕ್ಟ್ ಮಾಡಿದ ಮಹೇಶ್ ಬಾಬು; ಕಾರಣವೇನು?

  |

  ಬಾಲಿವುಡ್ ನಲ್ಲಿ ಈಗಾಗಲೇ ರಾಮಾಯಣ ಆಧರಿಸಿ ಆದಿಪುರುಷ್ ಎನ್ನುವ ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಆದ್ರೆ ಈ ಸಿನಿಮಾ ಪ್ರಾರಂಭವಾಗುವ ಮೊದಲೇ ಬಾಲಿವುಡ್ ನಲ್ಲಿ ರಾಮಾಯಣದ ಬಗ್ಗೆ ಬಿಗ್ ಬಜೆಟ್ ನ 3ಡಿ ಸಿನಿಮಾ ಮಾಡುವುದಾಗಿ ದೊಡ್ಡ ಮಟ್ಟದ ಯೋಜನೆ ಹಾಕಿದ್ರು ನಿರ್ಮಾಪಕ ಮಧು ಮಂಟೇನಾ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.

  ಇನ್ನು ವಿಶೇಷ ಎಂದರೆ ತೆಲುಗು ಸ್ಟಾರ್ ಮಹೇಶ್ ಬಾಬು ಅವರನ್ನು ಈ ಚಿತ್ರದಲ್ಲಿ ಹಾಕಿಕೊಳ್ಳಬೇಕು ಎನ್ನುವುದು ಮಧು ಅವರ ಆಸೆಯಾಗಿತ್ತು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಟ ಮಹೇಶ್ ಬಾಬು ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಧು ಅವರು ನೀಡಿದ ಬಿಗ್ ಆಫರ್ ಅನ್ನು ಮಹೇಶ್ ಬಾಬು ತಿರಸ್ಕರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮುಂದೆ ಓದಿ...

  ರಾಮನಾಗಲು ಮಹೇಶ್ ಬಾಬು ತಿರಸ್ಕರಿಸಿದ್ದೇಕೆ?

  ರಾಮನಾಗಲು ಮಹೇಶ್ ಬಾಬು ತಿರಸ್ಕರಿಸಿದ್ದೇಕೆ?

  ಅಂದಹಾಗೆ ಮಹೇಶ್ ಬಾಬು ಇಷ್ಟು ದೊಡ್ಡ ಆಫರ್ ಅನ್ನು ರಿಜೆಕ್ಟ್ ಮಾಡಲು ಕಾರಣ ರಾಜಮೌಳಿ ಎನ್ನುವ ಮಾತು ಕೇಳಿಬರುತ್ತಿದೆ. ಮಹೇಶ್ ಮುಂದಿನ ಸಿನಿಮಾಗೆ ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಪ್ರಾರಂಭವಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ನಿತೇಶ್ ನಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ರಾಮಾಯಣ ಕೂಡ ಪ್ರಾರಂಭ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಹಾಗಾಗಿ ಡೇಟ್ ಸಮಸ್ಯೆ ಕಾರಣದಿಂದ ಮಹೇಶ್ ಬಾಬು ರಾಮಾಯಣ ಸಿನಿಮಾ ಕೈಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

  ರಾವಣನ ಪಾತ್ರದಲ್ಲಿ ಹೃತಿಕ್

  ರಾವಣನ ಪಾತ್ರದಲ್ಲಿ ಹೃತಿಕ್

  ಅಂದಹಾಗೆ ಸಿನಿಮಾದಲ್ಲಿ ಹೃತಿಕ್ ರೋಷನ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದು, ಮಹೇಶ್ ಬಾಬು ರಾಮನಾಗಿ ಕಾಣಿಸಿಕೊಳ್ಳಬೇಕಿತ್ತು. ಸೀತೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಬಣ್ಣ ಹಚ್ಚುತ್ತಿದ್ದಾರೆ. ಮಹೇಶ್ ಬಾಬು ರಾಮನಾಗಬೇಕು ಎನ್ನುವುದು ನಿರ್ಮಾಪಕ ಮಧು ಅವರ ಆಸೆಯಾಗಿತ್ತು. ಆದರೀಗ ಮಹೇಶ್ ಬಾಬು ರಿಜೆಕ್ಟ್ ಮಾಡಿದ್ದಾರೆ. ಹಾಗಾಗಿ ರಾಮನ ಪಾತ್ರಕ್ಕೆ ಹೊಸ ನಟನ ಹುಡುಕಾಟದಲ್ಲಿದೆ ಸಿನಿಮಾತಂಡ.

  ಮಹೇಶ್ ಬಾಬು- ರಾಜಮೌಳಿ ಸಿನಿಮಾ

  ಮಹೇಶ್ ಬಾಬು- ರಾಜಮೌಳಿ ಸಿನಿಮಾ

  ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ರಾಜಮೌಳಿ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಖ್ಯಾತ ಬರಹಗಾರ ಕೆ.ವಿ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದು, ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದೆ.

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ
  ಹೃತಿಕ್ ಮತ್ತು ದೀಪಿಕಾ ಬಳಿ ಇರುವ ಸಿನಿಮಾಗಳು

  ಹೃತಿಕ್ ಮತ್ತು ದೀಪಿಕಾ ಬಳಿ ಇರುವ ಸಿನಿಮಾಗಳು

  ಇತ್ತ ನಟ ಹೃತಿಕ್ ರೋಷನ್ ವಿಕ್ರಂ ವೇದ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹೃತಿಕ್ ಮತ್ತು ದೀಪಿಕಾ ತಮ್ಮ ಕೈಯಲ್ಲಿರುವ ಪ್ರಾಜೆಕ್ಟ್ ಮುಗಿಸಿ ರಾಮಾಯಣ ಸೆಟ್ ಸೇರಿಕೊಳ್ಳುವ ಸಾಧ್ಯತೆ ಇದೆ.

  English summary
  Telugu Actor Mahesh Babu rejects Hrithik Roshan’s Ramayana Movie Offer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X