For Quick Alerts
  ALLOW NOTIFICATIONS  
  For Daily Alerts

  ಕಾನ್‌ ಚಿತ್ರೋತ್ಸವ ಎರಡನೇ ದಿನ: ಭಾರತದ ತಾರೆಯರದ್ದೇ ದರ್ಬಾರ್

  |

  ಅಂತರಾರಾಷ್ಟ್ರೀಯ ಕಾನ್‌ ಫೆಸ್ಟಿವಲ್‌ನಲ್ಲಿ ಭಾರತದ ನಟ ನಟಿಯರು ಕೂಡ ಭಾಗಿಯಾಗಿ ಫೆಸ್ಟಿವಲ್‌ನ ಎಂಜಾಯ್ ಮಾಡ್ತಿದ್ದಾರೆ. ಫ್ಯಾನ್ಸ್‌ ಕಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಡೆಯುತ್ತಿರುವ ಈ ಚಿತ್ರೋತ್ಸವಕ್ಕೆ ಬೇರೆ ಬೇರೆ ರಾಷ್ಟ್ರಗಳಿಂದ ಸೆಲೆಬ್ರೆಟಿಗಳು ಭಾಗಿಯಾಗಿದ್ದು, ಮೇ 28 ರವರೆಗೂ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ.

  ಈ ಬಾರಿ ಭಾರತದ ತಾರೆ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ. ಇದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ. ಮೇ 17 ರಿಂದ ಆರಂಭವಾಗಿರುವ ಕಾನ್ ಚಿತ್ರೋತ್ಸವದಲ್ಲಿ ಈಗಾಗಲೇ ಹಲವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

  ಕಾನ್ ಚಿತ್ರೋತ್ಸವದಲ್ಲಿ ಭಾರತ ಪ್ರತಿನಿಧಿಸಿದ ದೀಪಿಕಾ ಪಡುಕೋಣೆ: ಈ ಹಿಂದೆ ಜ್ಯೂರಿ ಆಗಿದ್ಯಾರು?ಕಾನ್ ಚಿತ್ರೋತ್ಸವದಲ್ಲಿ ಭಾರತ ಪ್ರತಿನಿಧಿಸಿದ ದೀಪಿಕಾ ಪಡುಕೋಣೆ: ಈ ಹಿಂದೆ ಜ್ಯೂರಿ ಆಗಿದ್ಯಾರು?

  ಇಂದು (ಮೇ 19) ಕೂಡ ಭಾರತದ ಹಲವು ನಟ ನಟಿಯರು ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಅದರಲ್ಲಿ ಪ್ರಮುಖವಾಗಿ ನಟಿ ಐಶ್ವರ್ಯಾ ರೈ, ಪೂಜಾ ಹೆಗಡೆ, ಕಮಲ್ ಹಾಸನ್ ಸೇರಿದಂತೆ ಮುಂತಾದವರು ಯೂನಿಕ್ ಡ್ರೆಸ್‌ಗಳನ್ನು ಧರಿಸಿ, ನೆರೆದಿದ್ದ ಜನರ ಗಮನವನ್ನು ಸೆಳೆದಿದ್ದಾರೆ.

   'ಮಹಿಳೆಯರು ಚಿತ್ರರಂಗದ ಅವಿಭಾಜ್ಯ ಅಂಗ'

  'ಮಹಿಳೆಯರು ಚಿತ್ರರಂಗದ ಅವಿಭಾಜ್ಯ ಅಂಗ'

  ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದಾರೆ. ಇಂದು ತಮ್ಮ ಮೊದಲ ದಿನದ ಭಾಗವಾಗಿ ಬ್ಲಾಕ್ ಗೌನ್ ಧರಿಸಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ನಟಿ ಐಶ್ವರ್ಯಾ ರೈ ಅನುಪಮಾ ಚೋಪ್ರಾ ಜೊತೆ ಸಂವಾದ ನಡೆಸಿದ್ದಾರೆ. 'ಚಿತ್ರರಂಗದಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ನನ್ನ 20 ವರ್ಷಗಳ ಜರ್ನಿಯಲ್ಲಿ ನಾನು ಸಾಕಷ್ಟು ಏಳು ಬೀಳುಗಳನ್ನು ನೋಡಿ ಈ ಎತ್ತರಕ್ಕೆ ಬಂದಿದ್ದೇನೆ. ಮಹಿಳೆಯರಿಲ್ಲದೆ ಯಾವ ಚಿತ್ರರಂಗವೂ ಇಲ್ಲ. ಮಹಿಳೆ ಸಿನಿಮಾದ ಒಂದು ಭಾಗವಾಗಿದ್ದಾಳೆ. ಅದು ಕ್ಯಾಮರಾ ಮುಂದೆ ಇರಬಹುದು. ಇಲ್ಲಾ ಕ್ಯಾಮರಾ ಹಿಂದಿರುವ ಸಿಬ್ಬಂದಿಯಾಗಿರಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರತಿಭೆಗೆ ಬೆಂಬಲ ಬೇಕು ಮತ್ತು ಪ್ರತಿಭೆಗೆ ಅವಕಾಶ ನೀಡಬೇಕು,' ಎಂದು ಹೇಳಿದ್ದಾರೆ.

  ಅಂತರಾಷ್ಟ್ರೀಯ ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಗಾಯನಅಂತರಾಷ್ಟ್ರೀಯ ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಗಾಯನ

   ಪೂಜಾ ಹೆಗೆಡೆ ಪೋಟೊಗಳು ವೈರಲ್

  ಪೂಜಾ ಹೆಗೆಡೆ ಪೋಟೊಗಳು ವೈರಲ್

  ದಕ್ಷಿಣ ಭಾರತದ ನಟಿ ಪೂಜಾ ಹೆಗಡೆ ಕಾನ್‌ ಚಿತ್ರೋತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು, ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಪೂಜಾ ಹೆಗಡೆಗೆ ಅಪಾರ ಪ್ರಮಾಣದ ಅಭಿಮಾನಿ ಬಳಗ ಇದೆ. ಸದ್ಯ ನಟಿ ಪೂಜಾ ಹೆಗಡೆ ಇಂದು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಸೆಲೆಬ್ರೆಟಿಗಳು ವಿಭಿನ್ನ ರೀತಿಯ ಕಾಸ್ಟ್ಯೂಮ್‌ನಲ್ಲಿ ಕಾಣಸಿಕೊಳ್ಳುತ್ತಾರೆ. ನಟಿ ಪೂಜಾ ಹೆಗಡೆ ಕೂಡ ಗುಲಾಬಿ ಬಣ್ಣದ ಗ್ರ್ಯಾಂಡ್ ಗೌನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ಪೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

   ಕಾನ್‌ ಫೆಸ್ಟಿವಲ್‌ನಲ್ಲಿ ಕಮಲ್ ಹಾಸನ್

  ಕಾನ್‌ ಫೆಸ್ಟಿವಲ್‌ನಲ್ಲಿ ಕಮಲ್ ಹಾಸನ್

  ಬಹುಭಾಷಾ ನಟ ಕಮಲ್‌ ಹಾಸನ್‌ ಕೂಡ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದಾರೆ. ಅಲ್ಲಿಯೂ ಕೂಡ ತಮ್ಮ ಮುಂಬರುವ ಸಿನಿಮಾ 'ವಿಕ್ರಮ್' ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂದು (ಮೇ 19) ಅವರೂ ಕೂಡ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿ ಕ್ಯಾಮರಾಗೆ ಪೋಸ್‌ ನೀಡಿದ್ದಾರೆ. ವೈಟ್ ಟೀ ಶರ್ಟ್ ಅಂಡ್ ಬ್ಲೂ ಬ್ಲೇಜರ್‌ನಲ್ಲಿ ನಟ ಕಮಲ್ ಹಾಸನ್ ಮಿಂಚಿದ್ದು, ಫಾರ್ಮಲ್‌ ಡ್ರೆಸ್‌ನಲ್ಲಿ ಯಂಗ್‌ ಆಗಿ ಕಾಣುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಕಮಲ್ ಹಾಸನ್‌ ಅವರ ಈ ಹೊಸ ಲುಕ್‌ನ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ.

  'ಸಿನಿಮಾ ಮೌನವಾಗಿಲ್ಲ ಎಂದು ಸಾಬೀತು ಪಡಿಸಲು ಹೊಸ ಚಾರ್ಲಿ ಚಾಪ್ಲಿನ್ ಬರಬೇಕು': ಉಕ್ರೇನ್ ಅಧ್ಯಕ್ಷ'ಸಿನಿಮಾ ಮೌನವಾಗಿಲ್ಲ ಎಂದು ಸಾಬೀತು ಪಡಿಸಲು ಹೊಸ ಚಾರ್ಲಿ ಚಾಪ್ಲಿನ್ ಬರಬೇಕು': ಉಕ್ರೇನ್ ಅಧ್ಯಕ್ಷ

   ಕಾನ್‌ ಚಿತ್ರೋತ್ಸವದಲ್ಲಿ ದಕ್ಷಿಣ ಭಾರತದ ದಂಡು

  ಕಾನ್‌ ಚಿತ್ರೋತ್ಸವದಲ್ಲಿ ದಕ್ಷಿಣ ಭಾರತದ ದಂಡು

  ಮೇ 17 ರಿಂದಲೇ ಕಾನ್ ಚಿತ್ರೋತ್ಸವ ಫ್ರಾನ್ಸ್‌ನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಪ್ರತಿದಿನ ನಟ ನಟಿಯರು ವೈರೆಟಿ ಡ್ರೆಸ್‌ಗಳನ್ನು ಧರಿಸಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ನಿನ್ನೆ (ಮೇ 18) ಕೂಡ ನಟಿ ದೀಪಿಕಾ ಪಡುಕೋಣೆ, ತಮನ್ನಾ ಭಾಟಿಯಾ, ಅನುರಾಗ್ ಠಾಕೂರ್, ಎ.ಆರ್ ರೆಹಮಾನ್‌ ರೆಡ್ ಕಾರ್ಪೆಟ್‌ ಮೇಲೆ ಹಜ್ಜೆ ಹಾಕಿದ್ದಾರೆ. ಮೇ 28ರವರೆಗೂ ಈ ಉತ್ಸವ ನಡೆಯಲಿದ್ದು, ನಟಿಯರು ವಿಭಿನ್ನ ಕಾಸ್ಟೂಮ್‌ ಧರಿಸಿ ರೆಡ್ ಕಾರ್ಪೆಟ್‌ ಮೇಲೆ ನಡೆದು ಎಲ್ಲರ ಗಮನ ಸೆಳೆಯಲಿದ್ದಾರೆ.

  English summary
  Cannes Film Festival 2022: Indian Celebrities Shining at The Cannes Film Festival, Know More.
  Thursday, May 19, 2022, 19:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X