Cannes 2023: ದೇಶಿ ಲುಕ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಸಾರಾ ರಂಗು: ಮಗಳ ಜೊತೆ ಫ್ರಾನ್ಸ್ ವಿಮಾನ ಏರಿದ ಐಶ್
76ನೇ ಕೇನ್ಸ್ ಚಿತ್ರೋತ್ಸವ ಬಹಳ ಸಡಗರ ಸಂಭ್ರಮದಿಂದ ಶುರುವಾಗಿದೆ. ಈಗಾಗಲೇ ಬಾಲಿವುಡ್ ತಾರೆಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ರಂಗೇರಿಸುತ್ತಿದ್ದಾರೆ. ನವಾಬ್ ಖಾಂದಾನ್ ಚೆಲುವೆ ಸಾರಾ ಅಲಿಖಾನ್ ಇದೇ ಮೊದಲ ಬಾರಿಗೆ ಫ್ರೆಂಚ್ ಸಿನಿಉತ್ಸವದಲ್ಲಿ ಭಾಗಿ ಆಗಿದ್ದಾರೆ. ಕೇನ್ಸ್ ಚಿತ್ರೋತ್ಸವಕ್ಕೆ ಹೋಗುವ ನಟ, ನಟಿಯರು, ತಂತ್ರಜ್ಞರ ಬಗ್ಗೆ ಭಾರೀ ಚರ್ಚೆ ಆಗ್ತಿತ್ತು.
ಸಾರಾ ಅಲಿಖಾನ್ ಉತ್ಸವದಲ್ಲಿ ಭಾಗಿ ಆಗುವ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ದಿಢೀರನೆ ದೇಶಿ ಲುಕ್‌ನಲ್ಲಿ ಸಾರಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಸೈಫ್ ಅಲಿಖಾನ್ ಪುತ್ರಿಯ ಅಂತರಾಷ್ಟ್ರೀಯ ಚಿತ್ರೋತ್ಸವದ ಮೊಮೆಂಟ್ ಸಖತ್ ವೈರಲ್ ಆಗ್ತಿದೆ. ಫ್ರೆಂಚ್ ರಿವೇರಿಯಾ ತೀರದಲ್ಲಿ ಕಲರ್‌ಫುಲ್ ಫೋಟೊಶೂಟ್ ಮಾಡಿಸಿ ಖುಷಿಪಟ್ಟಿದ್ದಾರೆ. ಇನ್‌ಸ್ಟಾ ಸ್ಟೋರಿಯಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.

ಅಬು ಜಾನಿ-ಸಂದೀಪ್ ಖೋಸ್ಲಾ ಡಿಸೈನ್ ಮಾಡಿದ ಲೆಹೆಂಗಾದಲ್ಲಿ ಸಾರಾ ಅಲಿ ಖಾನ್ ಮಿಂಚಿದ್ದಾರೆ. ಕೈಯಿಂದ ನೇಯ್ದ ಡಿಸೈನರ್ ಕಾಸ್ಟ್ಯೂಮ್ ಗಮನ ಸೆಳೆಯುತ್ತಿದೆ. ತಲೆ ಕೂದನ್ನು ಹಿಂದಕ್ಕೆ ಗಂಟು ಹಾಕಿ ಅದಕ್ಕೆ ಉದ್ದನೆಯ ದುಪ್ಪಟ್ಟಾವನ್ನು ಪಿನ್ ಮಾಡಿಕೊಂಡು ಅದನ್ನು ಹಿಂದೆ ಉದಕ್ಕೆ ಇಳಿಬಿಟ್ಟು ಕಾಣಿಸಿಕೊಂಡಿದ್ದಾರೆ. ಆಕೆಯ ಈ ಲುಕ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕೆಲವರು ವಧುವಿನ ಫೋಟೊಶೂಟ್ ತರ ಇದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಅಂತರಾಷ್ಟ್ರೀಯ ವೇದಿಕೆಯಲ್ಲಿ ದೇಶಿ ಲುಕ್ ಟ್ರೈ ಮಾಡಿದ್ದಕ್ಕೆ ಮೆಚ್ಚಿಕೊಳ್ತಿದ್ದಾರೆ.
ಸೋಮವಾರ ಸಾರಾ ಹಾಗೂ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲಾರ್ ಮುಂಬೈ ವಿಮಾನ ನಿಲ್ದಾಣದಿಂದ ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ್ದರು. ವಿಜಯ್ ವರ್ಮಾ ಹಾಗೂ ಊವರ್ಶಿ ರೌಟೇಲಾ ಕೂಡ ಈ ಬಾರಿ ಕೇನ್ಸ್ ಚಿತ್ರೋತ್ಸವದಲ್ಲಿ ಭಾಗಿ ಆಗುತ್ತಿದ್ದಾರೆ. ಅನುಷ್ಕಾ ಶರ್ಮಾ ಎಲ್ಲರಿಗಿಂತ ಮುಂಚೆ ಕೇನ್ಸ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕುವುದು ಕನ್ಫರ್ಮ್ ಆಗಿತ್ತು.
ಬಿಂದಾಸ್ ಲುಕ್‌ನಲ್ಲಿ ಇಶಾ ಮೋಡಿ
ಸಾರಾ ಅಲಿಖಾನ್‌ಗೂ ಮುನ್ನ ಇಶಾ ಗುಪ್ತಾ ಕೇನ್ಸ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಬಿಂದಾಸ್ ಲುಕ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ಆಕೆ ಗಮನ ಸೆಳೆದಿದ್ದಾರೆ. ತಿಳಿ ಗುಲಾಬಿ ಬಣ್ಣದ ಗೌನ್‌ನಲ್ಲಿ ಇಶಾ ಕಂಗೊಳಿಸಿದ್ದಾರೆ. ಥೈ ಹೈ ಸ್ಲಿಟ್ ಗೌನ್‌ಗೆ ಒಟಿಟಿ ಕಾಲರ್ ಹಾಗೂ ಒಂದು ಬದಿಯಲ್ಲಿ ಕುತ್ತಿಗೆಯಿಂದ ಎದೆ ಮೇಲೆ ಲೇಸ್ ಫ್ಲವರ್ ಡಿಸೈನ್ ಮೆರಗು ನೀಡಿತ್ತು.

ಮಗಳ ಜೊತೆ ಫ್ರಾನ್ಸ್‌ಗೆ ಹೊರಟ ಐಶ್
ಐಶ್ವರ್ಯ ರೈ ಹೆಜ್ಜೆ ಹಾಕದೇ ಕೇನ್ಸ್ ಚಿತ್ರೋತ್ಸವ ಅಪೂರ್ಣ ಎನಿಸಿಬಿಡುತ್ತದೆ. ಹಲವು ಬಾರಿ ಗ್ಲಾಮರಸ್ ರೆಡ್ ಕಾರ್ಪೆಟ್ ಮೇಲೆ ಐಶ್ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ಕೇನ್ಸ್ ಚಿತ್ರೋತ್ಸವದ ರಾಣಿ ಎಂದೇ ಕರೆಯುತ್ತಾರೆ. ಈಗಾಗಲೇ ಮಗಳು ಆರಾಧ್ಯ ಜೊತೆ ಐಶ್ವರ್ಯ ರೈ ಫ್ರಾನ್ಸ್ ಫ್ಲೈಟ್ ಏರಿದ್ದಾರೆ. ಶೀಘ್ರದಲ್ಲೇ ಐಶ್ ರೆಡ್ ಕಾರ್ಪೆಟ್ ಮೇಲೆ ಡಿಸೈನರ್ ಕಾಸ್ಟ್ಯೂಮ್‌ನಲ್ಲಿ ಮಿಂಚಲಿದ್ದಾರೆ.
ಮೇ 27ರವರೆಗೆ ಕೇನ್ಸ್ ಚಿತ್ರೋತ್ಸವ
ಇದು ಕೇವಲ ಆರಂಭ ಅಷ್ಟೇ. ಇನ್ನು 10 ದಿನಗಳ ಕಾಲ ಈ ಫ್ರಾನ್ಸ್ ಸಿನಿಉತ್ಸವ ಬಹಳ ಸಡಗರದಿಂದ ಮುಂದುವರೆಯಲಿದೆ. ಇನ್ನು ಆಸ್ಕರ್ ಪ್ರಶಸ್ತಿ ವಿಜೇತ ಭಾರತೀಯ ನಿರ್ಮಾಪಕಿ ಗುಣೀತ್ ಮೊಂಗಾ, ಕಂಗಬಮ್ ತೊಂಬಾ ಮತ್ತು ಸೋಷಿಯಲ್ ಮೀಡಿಯಾ ಸ್ಟಾರ್ ಮತ್ತು ಕಾಂಟೆಂಟ್ ಕ್ರಿಯೇಟರ್ ಡಾಲಿ ಸಿಂಗ್ ಸೇರಿದಂತೆ ಹಲವರು ಕೇನ್ಸ್ ಚಿತ್ರೋತ್ಸವದಲ್ಲಿ ಭಾಗಿ ಆಗಲಿದ್ದಾರೆ.


Click it and Unblock the Notifications











