Cannes 2023: ಅಬ್ಬಬ್ಬಾ.. ಊರ್ವಶಿ ಧರಿಸಿದ್ದ ಮೊಸಳೆ ನೆಕ್ಲೆಸ್ ಬೆಲೆ 270 ಕೋಟಿ ರೂ.ಗಿಂತ ಹೆಚ್ಚು ಅಂತೆ!

76ನೇ ಕಾನ್‌ ಫಿಲ್ಮ್ ಫೆಸ್ಟಿವಲ್ ಅದ್ಧೂರಿಯಾಗಿ ಮುಂದುವರೆದಿದೆ. ಐಶ್ವರ್ಯ ರೈ, ಸಾರಾ ಅಲಿಖಾನ್, ಮಾನುಷಿ ಚಿಲ್ಲಾರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರೆಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಕಮಾಲ್ ಮಾಡಿದ್ದಾರೆ. ಈಗಾಗಲೇ ಐಶ್ ಮುಂಬೈಗೆ ವಾಪಸ್ ಆಗಿದ್ದಾರೆ. ಊರ್ವಶಿ ರೌಟೇಲಾ ದಿನಕ್ಕೊಂದು ವೇಷದಲ್ಲಿ ಭಿನ್ನ ವಿಭಿನ್ನ ಲುಕ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಈ ಬಾರಿ ಉತ್ಸವದಲ್ಲಿ ಮೊದಲ ಬಾರಿಗೆ ಊರ್ವಶಿ ಪಿಂಕ್ ಕಲರ್ ಗೌನ್‌ನಲ್ಲಿ ಮಿಂಚಿದ್ದರು. ಆ ಗೌನ್‌ಗಿಂತ ಗಮನ ಸೆಳೆದಿದ್ದು ಆಕೆಯ ಕುತ್ತಿಗೆಯಲ್ಲಿದ್ದ ಮೊಸಳೆ ವಿನ್ಯಾಸ್ ನೆಕ್ಲೆಸ್ ಹಾಗೂ ಅದೇ ತರಹದ ಕಿವಿಯೋಲೆ. ಸದ್ಯ ರೆಡ್ ಕಾರ್ಪೆಟ್ ಮೇಲೆ ಆಕೆ ಧರಿಸಿದ್ದ ಮೊಸಳೆ ವಿನ್ಯಾಸದ ನೆಕ್ಲೆಸ್ ದರದ ಬಗ್ಗೆ ಈಗ ಬಿಸಿಬಿಸಿ ಚರ್ಚೆ ನಡೀತಿದೆ. ಇದರ ಬೆಲೆ 200 ಕೋಟಿ ರೂ.ಗಿಂತ ಹೆಚ್ಚು ಎನ್ನುವ ವಿಚಾರ ಹಾಟ್ ಟಾಪಿಕ್ ಆಗಿದೆ. ಕೆಲವರಂತೂ ಈ ಸುದ್ದಿ ಕೇಳಿ ಒಂದು ಕ್ಷಣ ಶಾಕ್ ಆಗಿದ್ದಾರೆ.

Cannes 2023: UrvashiRautelas Team Claims Her Crocodile Necklace worth Rs 276 Cr

ದುಬಾರಿ ಕಾಸ್ಟ್ಯೂಮ್, ಆಕ್ಸಸರೀಸ್ ತೊಟ್ಟು ಊರ್ವಶಿ ರೌಟೇಲಾ ರ್ಯಾಂಪ್‌ ವಾಕ್ ಮಾಡುತ್ತಿರುತ್ತಾರೆ. ಈ ಹಿಂದೆ ಕೂಡ 40 ಕೋಟಿ ರೂ. ವೆಚ್ಚದ ಕಾಸ್ಟ್ಯೂಮ್‌ನಲ್ಲಿ ಆಕೆ ಹೆಜ್ಜೆ ಹಾಕಿದ್ದಾರೆ ಎನ್ನುವ ವಿಚಾರ ಸುದ್ದಿಯಾಗಿತ್ತು. ಇದೀಗ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ 'ಐರಾವತ'ನ ರಾಣಿಯ ನೆಕ್ಲೆಸ್‌ ಬೆಲೆ ಚರ್ಚೆ ಹುಟ್ಟಾಕ್ಕಿದೆ. ಸ್ವತಃ ಊರ್ವಶಿ ತಂಡವೇ ಈ ಬಗ್ಗೆ ಮಾಹಿತಿ ನೀಡಿದ್ದು ಇದನ್ನು ಒಪ್ಪಲು ಯಾರು ಸಿದ್ಧರಿಲ್ಲ.

ಫೇಕ್ ನೆಕ್ಲೆಸ್ ಎಂದ ಜ್ಯುವೆಲ್ಲರಿ ಎಕ್ಸ್‌ಫರ್ಟ್

ಅರುಂಧತಿ ದೆ ಸೇತ್ ಎಂಬ ಜ್ಯುವೆಲ್ಲರಿ ಎಕ್ಸ್‌ಫರ್ಟ್ ಊವರ್ಶಿ ತೊಟ್ಟಿದ್ದ ನೆಕ್ಲೆಸ್ ಬಗ್ಗೆ ಕಾಮೆಂಟ್ ಮಾಡಿದ್ದರು. "ನೆಕ್ಲೇಸ್ ಕೇವಲ ಕಾರ್ಟಿಯರ್ ಮೊಸಳೆ ನೆಕ್‌ಪೀಸ್‌ನ ನಕಲು, ಒರಿಜಿನಲ್ ಬೇರೆ ಇದೆ ಎಂದು ಆಕೆಗೆ ಹೇಳಿ" ಎಂದು ಬರೆದುಕೊಂಡಿದ್ದರು. "ಫ್ರಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವಾಗ ಐತಿಹಾಸಿಕ ಮಾದರಿಯನ್ನು ಕೆಟ್ಟದಾಗಿ ಕಾಪಿ ಮಾಡಿದ್ದು ಎಷ್ಟು ಸರಿ? ಇದನ್ನು ಮಾಡುವಾಗ ನೀವು ಯಾವುದೇ ಹೋಮ್‌ವರ್ಕ್ ಮಾಡಿಲ್ಲ. ನಮ್ಮದು ಅತ್ಯಂತ ವಿಶೇಷವಾದ ಸಂಪತ್ತು ಮತ್ತು ಆಭರಣಗಳ ಭೂಮಿಯಾಗಿದ್ದು, ಇದರ ಬದಲಿಗೆ ಆಕೆ ಬೇರೆ ಧರಿಸಬಹುದಿತ್ತು" ಮತ್ತೊಂದು ಪೋಸ್ಟ್ ಮಾಡಿದ್ದರು.

Cannes 2023: UrvashiRautelas Team Claims Her Crocodile Necklace worth Rs 276 Cr

ಊರ್ವಶಿ ತಂಡದಿಂದ ಸ್ಪಷ್ಟನೆ

ಕಾನ್ ಫೆಸ್ಟಿವಲ್‌ನಲ್ಲಿ ಊವರ್ಶಿ ತೊಟ್ಟಿರೋದು ನಕಲಿ ನೆಕ್ಲೆಸ್ ಎನ್ನುವ ಆರೋಪ ಕೇಳಿಬರ್ತಿದ್ದಂತೆ ಊರ್ವಶಿ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಆಕೆಯ ತಂಡ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದೆ. "ಊರ್ವಶಿ ಧರಿಸಿರುವ ನೆಕ್ಲೆಸ್ ಬೆಲೆ 200 ಕೋಟಿ ರೂಪಾಯಿ. ಅದನ್ನು ಊರ್ವಶಿ ಧರಿಸಿದ ಬಳಿಕ ಅದರ 276 ಕೋಟಿ ರೂಪಾಯಿ ಆಗಿದೆ. ಆಕೆಯ ಫ್ಯಾಷನ್ ಅಭಿರುಚಿಯನ್ನು ಇದು ತಿಳಿಸುತ್ತದೆ. ಮಹಿಳೆಯರು ಎದುರಿಸುವ ಸವಾಲು, ಗೆಲುವು ಎರಡಕ್ಕೂ ಇದು ಸಂಕೇತವಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.

ಸಿಕ್ಕಾಪಟ್ಟೆ ಟ್ರೋಲ್

ಇನ್ನು ಊರ್ವಶಿ ತೊಟ್ಟಿದ್ದ ಮೊಸಳೆ ವಿನ್ಯಾಸದ ನೆಕ್ಲೆಸ್ ಬೆಲೆ 270 ಕೋಟಿ ರೂ. ಎನ್ನುತ್ತಿದ್ದಂತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ನಿಮಗೆ ಜೋಕ್ ಮಾಡೋಕೆ ಬೇರೆ ವಿಷಯ ಸಿಗಲಿಲ್ಲವೇ? ನಿಜಕ್ಕೂ ಇದು ಅದು ಬೆಲೆ ಬಾಳುತ್ತಾ? ಅಂಥದ್ದು ಈ ನೆಕ್ಲೆಸ್‌ನಲ್ಲಿ ಏನಿದೆ? ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

Cannes 2023: UrvashiRautelas Team Claims Her Crocodile Necklace worth Rs 276 Cr

ನೆಕ್ಲೆಸ್ ವಿನ್ಯಾಸದ ಹಿನ್ನೆಲೆ

ಅಂದಹಾಗೆ ಈ ವಿನ್ಯಾಸವು 1975ರಷ್ಟು ಹಿಂದಿನದ್ದು. ಮೆಕ್ಸಿಕನ್ ತಾರೆ ಮಾರಿಯಾ ಫೆಲಿಕ್ಸ್ ತನ್ನ ಮುದ್ದಿನ ಮರಿ ಮೊಸಳೆಯೊಂದಿಗೆ ಐಷಾರಾಮಿ ಬ್ರಾಂಡ್‌ನ ಪ್ಯಾರಿಸ್ ಅಂಗಡಿಗೆ ಹೋದಾಗ ಮೊಸಳೆಯ ಮುಖ ಮತ್ತು ದೇಹವನ್ನು ಹೋಲುವ ವಿಶೇಷ ಹಾರವನ್ನು ಕೇಳಿದರು. ನಿಖರವಾಗಿ ಸಾಧ್ಯವಾದಷ್ಟು. ವಾಯ್ಲಾ ಕಾರ್ಟಿಯರ್ ಈ ವಿಶೇಷ ವಿನ್ಯಾಸದ ನೆಕ್ಲೆಸ್ ವಿನ್ಯಾಸಗೊಳಿಸಿದ್ದು ಅದನ್ನು ಪ್ರತ್ಯೇಕ ಬ್ರೋಚ್‌ಗಳಾಗಿಯೂ ಧರಿಸಬಹುದು. ಊವರ್ಶಿಗೂ ಮುನ್ನ ಈ ವಿನ್ಯಾಸದ ನೆಕ್ಲೆಸ್ ಅನ್ನು 2006ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಇಟಾಲಿಯನ್ ನಟಿ ಮೋನಿಕಾ ಬೆಲ್ಲುಸಿ ಧರಿಸಿದ್ದರು.

More from Filmibeat

English summary
Cannes 2023: Urvashi Rautela's Team Claims Her Crocodile Necklace worth Rs 276 Cr. jewellery expert accused the piece which worn bollywood actress being fake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X