ಕಾನ್ ಚಿತ್ರೋತ್ಸವದಲ್ಲಿ ಆಲಿಯಾ ಭಟ್‌ಗೆ ಅವಮಾನ ಆಯ್ತಾ? ವೈರಲ್ ವೀಡಿಯೋದಲ್ಲಿ ಏನಿದೆ?

ಫ್ರಾನ್ಸ್‌ನಲ್ಲಿ 79ನೇ ಕಾನ್ ಚಿತ್ರೋತ್ಸವ ರಂಗೇರಿದೆ. ಬಾಲಿವುಡ್ ತಾರೆಯರು ಕೂಡ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆಯುತ್ತಿದ್ದಾರೆ. ತಿಳಿ ಗುಲಾಬಿ ಬಣ್ಣದ ಗೌನ್ ಧರಿಸಿ ಬಿಟೌನ್ ಬೆಡಗಿ ಆಲಿಯಾ ಭಟ್ ಮಿಂಚಿದ್ದಾರೆ. ಆದರೆ ಆಕೆಗೆ ಅವಮಾನ ಆಗಿದೆ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಕಾನ್ ಚಿತ್ರೋತ್ಸವದ ರೆಕ್ ಕಾರ್ಪೆಟ್ ಮೇಲೆ ನಟ, ನಟಿಯರು ಭಿನ್ನ ವಿಭಿನ್ನ ಕಾಸ್ಟ್ಯೂಮ್ ಧರಿಸಿ ಕಾಣಿಸಿಕೊಳ್ಳುತ್ತಾರೆ. ಪಾಪರಾಜಿಗಳು (ಛಾಯಾಗ್ರಾಹಕರು) ಫೋಟೊ ಕ್ಲಿಕ್ಕಿಸಲು ಮುಗಿಬೀಳುತ್ತಾರೆ. ಆದರೆ ಆಲಿಯಾ ಭಟ್ ಅವರನ್ನು ಯಾರೊಬ್ಬರು ಆಕೆಯ ಕಡೆ ತಿರುಗಿ ನೋಡಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಆಲಿಯಾ ಬಂದಾಗ ಪಾಪರಾಜಿಗಳು ಆಕೆಯ ಫೋಟೊಗಳನ್ನು ಕ್ಲಿಕ್ಕಿಸಲು ಹಿಂದೇಟು ಹಾಕುತ್ತಿರುವಂತೆ ವೀಡಿಯೋವೊಂದು ವೈರಲ್ ಆಗ್ತಿದೆ.

Cannes Film Festival 2026 Was Bollywood Actress Alia Bhatt Ignored by the Paparazzi

ಬಾಲಿವುಡ್ ಸ್ಟಾರ್ ನಟಿಯನ್ನು ಕಾನ್ ವೇದಿಕೆಯಲ್ಲಿ ಯಾರೂ ಗುರ್ತಿಸಲಿಲ್ಲವೇ? ಎರಡನೇ ಬಾರಿ ಚಿತ್ರೋತ್ಸವದಲ್ಲಿ ಭಾಗಿ ಆಗಿರುವ ಆಕೆಯ ಬಗ್ಗೆ ಯಾರಿಗೂ ಗೊತ್ತಿಲ್ಲವೇ? ಪಾಪ ಆಲಿಯಾ ಅಷ್ಟು ಸುಂದರವಾದ ಗೌನ್ ಧರಿಸಿ ಪೋಸ್ ಕೊಟ್ಟರೂ ಬಹುತೇಕರು ಆಕೆಯನ್ನು ನೋಡದೇ, ಬೇರೆಡೆ ಕ್ಯಾಮರಾ ಕ್ಲಿಕ್ಕಿಸುತ್ತಿದ್ದರಲ್ಲ ಎಂದು ಚರ್ಚೆ ನಡೀತಿದೆ. ಸಹಜವಾಗಿಯೇ ಇದು ಆಲಿಯಾ ಅಭಿಮಾನಿಗಳು ಬೇಸರಕ್ಕೆ ಕಾರಣವಾಗಿದೆ.

ತಮಾರಾ ರಾಲ್ಫ್ ವಿನ್ಯಾಸಗೊಳಿಸಿದ ಬಸ್ಟಿಯರ್ ನೆಕ್‌ಲೈನ್ ಗೌನ್ ಧರಿಸಿ ಆಲಿಯಾ ಭಟ್ ಮೋಡಿ ಮಾಡಿದ್ದಾರೆ. ದೇಹದ ಆಕಾರಕ್ಕೆ ಹೊಂದುವಂತಹ ಸ್ಲೀವ್‌ಲೆಸ್ ಕಾಸ್ಟ್ಯೂಮ್ ಎಲ್ಲರ ಗಮನ ಸೆಳೆದಿದೆ. ಇನ್ನು ಕೈಯಲ್ಲಿ ಪಾರದರ್ಶನ ದುಪ್ಪಟ್ಟಾ ಹಿಡಿದು ಆಲಿಯಾ ಭಟ್ ರೆಡ್ ಕಾರ್ಪೆಟ್ ಮೇಲೆ ಓಡಾಡಿದ್ದಾರೆ.

ರೆಡ್ ಕಾರ್ಪೆಟ್ ಮೇಲೆ ಆಲಿಯಾ ಬಹಳ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದ್ದಾರೆ. ಕೈ ಬೀಸಿದ್ದಾರೆ, ಗಾಳಿಯಲ್ಲಿ ಮುತ್ತು ತೇಲಿಬಿಟ್ಟಿದ್ದಾರೆ, ಆದರೆ ಪಾಪರಾಜಿಗಳು ಮಾತ್ರ ಬೇರೊಬ್ಬ ವಿದೇಶಿ ನಟಿಯ ಫೋಟೊಗಳನ್ನು ಕ್ಲಿಕ್ಕಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಛೇ, ಯಾಕೆ ಹೀಗಾಯ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕಾನ್ ಚಿತ್ರೋತ್ಸವದ ಸಂದರ್ಶನದಲ್ಲಿ ಭಾರತೀಯ ಚಿತ್ರರಂಗ ಇನ್ನು ಪುರುಷ ಪ್ರಧಾನವಾಗಿದೆ ಯಾಕೆ? ಎಂದು ಪ್ರಶ್ನಿಸಿ ಆಲಿಯಾ ಚರ್ಚೆ ಹುಟ್ಟಾಕ್ಕಿದ್ದಾರೆ.

ಆಲಿಯಾ ಭಟ್ ಮಾತನಾಡಿ ನಾವು ಈಗ ಒಳ್ಳೆ ಕಾಲಘಟ್ಟದಲ್ಲಿ ಇದ್ದೀವಿ. 'ಬಾರ್ಬಿ', 'ವುದರಿಂಗ್ ಹೈಟ್ಸ್' ಮತ್ತು 'ದಿ ಡೆವಿಲ್ ವೇರ್ಸ್ ಪ್ರಾಡಾ' ರೀತಿಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಆ ಸಿನಿಮಾಗಳ ಪ್ರಮುಖ ಪ್ರೇಕ್ಷಕರು ಮಹಿಳೆಯರು. ದೊಡ್ಡಮಟ್ಟದಲ್ಲಿ ಮಹಿಳೆಯರು ಈ ಸಿನಿಮಾಗಳನ್ನು ನೋಡಿ ಗೆದ್ದಿವೆ ಎಂದಿದ್ದಾರೆ.

ಮಾತು ಮುಂದುವೆರೆಸಿರುವ ಆಲಿಯಾ "ಭಾರತದಲ್ಲಿ ನಾವು ಬಾಕ್ಸಾಫೀಸ್ ಕಲೆಕ್ಷನ್ ವಿಚಾರದ ಬಗ್ಗೆ ಮಾತನಾಡಿದರೆ ಒಂದು ವಿಚಾರ ಚರ್ಚೆಗೆ ಬರುತ್ತದೆ. ಅದು ಏನಂದ್ರೆ ಸಿನಿಮಾ ನೋಡುವ 75% ಮಂದಿ ಪುರುಷರು. ಹಾಗಾಗಿ ನಾವು ಅವರಿಗೆ ಅನುಗುಣವಾಗಿ ಸಿನಿಮಾ ಮಾಡಬೇಕು. ಇದು ಪದೇ ಪದೆ ನಡೆಯುವ ಚರ್ಚೆ. ನಾವು ಪುರುಷರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡ್ತಿದ್ರೆ, ಮಹಿಳೆಯರ ಕಥೆ ಏನು ಎಂದು ನನಗೆ ಅಚ್ಚರಿ ಆಗುತ್ತದೆ?" ಎಂದು ಹೇಳಿದ್ದಾರೆ. ಸದ್ಯ ಆಲಿಯಾ ಹೇಳಿಕೆ ವೈರಲ್ ಆಗ್ತಿದೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಮದುವೆ ಬಳಿಕ ಆಲಿಯಾ ಕೊಂಚ ಬ್ರೇಕ್ ಪಡೆದಿದ್ದರು. ಮಗು, ಫ್ಯಾಮಿಲಿ ಅಂತ ಬ್ಯುಸಿಯಾಗಿಬಿಟ್ಟಿದ್ದರು. ಆದರೂ ಸಾಧ್ಯವಾದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ. 'ಜಿಗ್ರಾ' ಸಿನಿಮಾ ನಿರ್ಮಿಸಿ ನಟಿಸಿದ್ದ ಆಲಿಯಾ 'ಆಲ್ಫಾ' ಎಂಬ ಮತ್ತೊಂದು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜುಲೈ 10ರಂದು ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರಲಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಲವ್ & ವಾರ್' ಚಿತ್ರದಲ್ಲೂ ನಟಿಸುತ್ತಿದ್ದಾರೆ.

Read more about: cannes alia bhatt
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X