ಬಹುಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 'ಕೇರ್ ಆಫ್ ಫುಟ್‌ಪಾತ್ 2' ನಟಿ..!

ಪ್ರೀತಿ ಅಂದರೆ ಅದು ನಾಟಕವೂ ಅಲ್ಲ. ಆಟಿಕೆಯೂ ಅಲ್ಲ. ಈ ಪ್ರೀತಿ ಯಾರ ಮೇಲೆ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಆಗಬಹುದು. ಎಲ್ಲರೂ ತನ್ನ ಕೈಹಿಡಿಯುವ ಸಂಗಾತಿ ಹೀಗಿರಬೇಕು. ಹಾಗಿರಬೇಕು ಎಂದು ಕನಸಿನ ಮೂಟೆಯನ್ನೇ ಹೊತ್ತು ಸಾಗುತ್ತಾರೆ. ಚಿತ್ರರಂಗದಲ್ಲಿರುವವರು ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಬಣ್ಣದ ಲೋಕದಲ್ಲಿ ಅನೇಕರು ಪ್ರೀತಿಯಲ್ಲಿ ಬಿದ್ದಿದ್ದಾರೆ..

ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಅವಿಕಾ ಗೋರ್ ಕೂಡ ಈ ಸಾಲಿಗೆ ಸೇರಲು ಸದ್ಯ ಹವಣಿಸುತ್ತಿದ್ದಾರೆ. ತಮ್ಮ ಆರು ವರ್ಷಗಳ ಪ್ರೀತಿಯ ಮೇಲೆ ಮದುವೆಯ ಅಧಿಕೃತ ಮುದ್ರೆಯನ್ನು ಒತ್ತಲು ಸಿದ್ಧರಾಗಿದ್ದಾರೆ.

Care Of Footpath 2 Actress Avika Gor engaged to IIM graduate Milind Chandwani Here s Their Love Sto

ಹೌದು, ಅವಿಕಾ ಗೋರ್.. ಹಿಂದಿಯಲ್ಲಿ ಬಾಲಿಕಾ ವಧು ಎಂದೇ ಜನಪ್ರಿಯವಾದ ಚೆಲುವೆ. ಬಾಲಕಿ ಆನಂದಿ ಪಾತ್ರವನ್ನು ಇವರು ನಿರ್ವಹಿಸಿದ್ದರು.

ಆ ನಂತರ 2013ರಲ್ಲಿ 'ಉಯ್ಯಾಲಾ ಜಂಪಾಲಾ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ಅವಿಕಾ ಕನ್ನಡದಲ್ಲಿ ಮಾಸ್ಟರ್ ಕಿಶನ್ ನಿರ್ದೇಶನದ 'ಕೇರ್ ಆಫ್ ಫುಟ್‌ಫಾತ್ 2' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಈ ಮೂಲಕ ಕನ್ನಡದಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು.

ಅಪ್ಪು ಅಭಿನಯದ 'ನಟಸಾರ್ವಭೌಮ' ಚಿತ್ರದಲ್ಲಿನ ತಾಜಾ ಸಮಾಚಾರ ಹಾಡಿನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದರು.

ಇಂಥಾ ಅವಿಕಾ ಗೋರ್ ಸದ್ಯ ತಮ್ಮ ಬಹುಕಾಲದ ಗೆಳೆಯ ಮಿಲಿಂದ್ ಚಂದ್ವಾನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫೋಟೊ ಸಮೇತ ತಮ್ಮ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Care Of Footpath 2 Actress Avika Gor engaged to IIM graduate Milind Chandwani Here s Their Love Sto

ಅಂದ್ಹಾಗೇ ಅವಿಕಾ ಮತ್ತು ಮಿಲಿಂದ್ 2020ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಲವ್ ಅಟ್ ಫಸ್ಟ್ ಸೈಟ್ ಎಂಬಂತೆ ಮೊದಲ ನೋಟದಲ್ಲಿಯೇ ಅವಿಕಾ ಹೃದಯದಲ್ಲಿ ಪ್ರೀತಿ ಚಿಗುರಿತ್ತು. ಅಲ್ಲಿಂದ ಮಾನಸಿಕವಾಗಿ ಮಿಲಿಂದ್‌ಗೆ ಅವಿಕಾ ಶರಣಾಗಿದ್ದರು. ಖುದ್ದು ಈ ವಿಚಾರವನ್ನು ಅವಿಕಾ ಹೇಳಿದ್ದಾರೆ ಕೂಡ.

ಇನ್ನು. ಮಿಲಿಂದ್ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್‌ ನಲ್ಲಿ ಪದವಿಯನ್ನು ಪಡೆದವರು. ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೂಡ ಕೆಲಸವನ್ನು ಇವರು ಮಾಡಿದ್ದಾರೆ.

'ರಿಪಬ್ಲಿಕ್' ವರದಿಯ ಪ್ರಕಾರ ಸದ್ಯ ಕಾರ್ಪೋರೇಟ್ ಪ್ರಪಂಚಕ್ಕೆ ಗುಡ್ ಬೈ ಹೇಳಿರುವ ಮಿಲಿಂದ್ ಚಂದ್ವಾನಿ ಈಗ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ.

ಕ್ಯಾಂಪ್ ಡೈರೀಸ್ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿರುವ ಮಿಲಿಂದ್ ತಮ್ಮ ಈ ಸಂಸ್ಥೆಯ ಮೂಲಕ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದಲ್ಲದೇ ಟೀಚ್ ಫಾರ್ ಇಂಡಿಯಾ ಮತ್ತು ಐಟೀಚ್‌ ಸ್ಕೂಲ್‌ ಎಂಬ ಲಾಭರಹಿತ ಸಂಸ್ಥೆಗಳನ್ನು ಕೂಡ ಇವರು ಪ್ರಾರಂಭಿಸಿದ್ದಾರೆ.

ಅಂದ್ಹಾಗೇ ನಿನ್ನೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಅವಿಕಾ ಗೋರ್ ಮತ್ತು ಮಿಲಿಂದ್ ಚಂದ್ವಾನಿ ಪತಿ, ಪತಿ ಔರ್ ಪಂಗಾ ಎಂಬ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಲಿದ್ದಾರೆ. ಈಗಾಗಲೇ ಈ ರಿಯಾಲಿಟಿ ಶೋದ ಚಿತ್ರೀಕರಣ ಆರಂಭವಾಗಿದ್ದು ಸ್ಟಾರ್ ಜೋಡಿಗಳ ಕಥೆಯನ್ನು ಈ ರಿಯಾಲಿಟಿ ಶೋ ಅನಾವರಣಗೊಳಿಸಲಿದೆ. ಇನ್ನು ಇದಕ್ಕೂ ಮುನ್ನ 2019 ರಲ್ಲಿ ಎಂಟಿವಿ ರೋಡೀಸ್ ರಿಯಲ್ ಹೀರೋಸ್‌ನಲ್ಲಿ ಸ್ಪರ್ಧಿಯಾಗಿ ಮಿಲಿಂದ್ ಕಾಣಿಸಿಕೊಂಡಿದ್ದರು. ಕೊನೆಯವರೆಗೆ ಈ ಕಾರ್ಯಕ್ರಮದಲ್ಲಿ ಮಿಲಿಂದ್‌ಗೆ ಬರಲು ಸಾಧ್ಯವಾಗದಿದ್ದರೂ ಈ ಕಾರ್ಯಕ್ರಮದ ಮೂಲಕ ಅನೇಕರ ಹೃದಯ ಗೆಲ್ಲುವಲ್ಲಿ ಇವರು ಯಶಸ್ವಿಯಾಗಿದ್ದರು.

ಸದ್ಯ ಅವಿಕಾ ಗೋರ್ ಮತ್ತು ಮಿಲಿಂದ್ ನಿಶ್ಚಿತಾರ್ಥ ಸಮಾರಂಭ ಸರಳವಾಗಿ ನೆರವೇರಿದ್ದು ಇಬ್ಬರ ಮದುವೆ ಈ ವರ್ಷದ ಅಂತ್ಯದೊಳಗೆ ಅದ್ದೂರಿಯಾಗಿ ನಡೆಯುವ ಸಾಧ್ಯತೆ ಇದೆ. ಬೆಳ್ಳಿತೆರೆ ಮತ್ತು ಕಿರುತೆರೆಯ ಅನೇಕ ಗಣ್ಯರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

More from Filmibeat

English summary
Read about 'Care Of Footpath 2' actress Avika Gor and her engagement to IIM-Ahmedabad alumnus Milind Chandwani. Explore their complete love story.
Read more about: engagement love actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X