ಮಹಿಳೆ ಮೇಲೆ ಉಗಿದ ಆರೋಪ, ಸೆಲೆಬ್ರಿಟಿ ಕೇಶವಿನ್ಯಾಸಕನ ಮೇಲೆ ಎಫ್‌ಐಆರ್

ಬಾಲಿವುಡ್‌ನ ಜನಪ್ರಿಯ ಕೇಶ ವಿನ್ಯಾಸಕ ಜಾವೇದ್ ಹಬೀಬ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಿಳೆಯೊಬ್ಬರ ಕೂದಲಿನ ಮೇಲೆ ಉಗಿದ ಆರೋಪದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಕೇಶ ವಿನ್ಯಾಸದ ಬಗ್ಗೆ ಸೆಮಿನಾರ್‌ಗಳನ್ನು ಮಾಡುವ ಜಾವೇದ್ ಹಬೀಬ್ ಇತ್ತೀಚೆಗೆ ನಡೆದ ಸೆಮಿನಾರ್ ಒಂದರಲ್ಲಿ ಕೇಶ ವಿನ್ಯಾಸದ ಬಗ್ಗೆ ಉಪನ್ಯಾಸ ನೀಡುತ್ತಾ, ಮಹಿಳೆಯೊಬ್ಬರನ್ನು ವೇದಿಕೆ ಮೇಲೆ ಕರೆದಿದ್ದಾರೆ. ಕೂದಲನ್ನು ನೀರಿನಿಂದ ಮಾತ್ರವಲ್ಲ ಉಗುಳುನಿಂದಲೂ ತೊಳೆಯ ಬಹುದು ಎಂದು ಹೇಳಿ ಆಕೆಯ ಕೂದಲಿಗೆ ಉಗಿದಿದ್ದಾರೆ.

ಪೂಜಾ ಗುಪ್ತಾ ಎಂಬ ಆ ಮಹಿಳೆ ವೇದಿಕೆ ಮೇಲೆಯೇ ಇದನ್ನು ಖಂಡಿಸಿದ್ದಾರೆ ಎನ್ನಲಾಗಿದೆ. ನಂತರ ದೂರು ಸಹ ನೀಡಿದ್ದಾರೆ. ಕೇವಲ ಉಗಿದಿದ್ದು ಮಾತ್ರವೇ ಅಲ್ಲದೆ ಪೂಜಾ ಗುಪ್ತಾರ ಕೂದಲಿನ ಬಗ್ಗೆ ಸೌಂದರ್ಯದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.

Case Against Jawed Habib For Spiting On A Womans Hair
ಜಾವೇದ್ ಹಬೀಬ್ ವಿರುದ್ಧ, ಮಹಿಳೆಯ ಮೇಲೆ ಹಲ್ಲೆ ಯತ್ನ ಅಥವಾ ವ್ಯಕ್ತಿಯನ್ನು ಅಪಮಾನ ಮಾಡುವ ಯತ್ನ, ಶಾಂತಿ ಭಂಗ ತರಲು ವ್ಯಕ್ತಿಯನ್ನು ಅಪಮಾನಿಸಲು ಯತ್ನ ಐಪಿಸಿ 355, 504 ಅಡಿಯಲ್ಲಿ ಮುಜಫ್ಪರ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯ ಅಡಿಯೂ ದೂರು ದಾಖಲಾಗಿದೆ.

ಘಟನೆ ಬಗ್ಗೆ ಕ್ಷಮೆ ಕೇಳಿರುವ ಜಾವೇದ್ ಹಬೀಬ್, ''ನಮ್ಮ ಸೆಮಿನಾರ್‌ಗಳು ಬಹಳ ಸಮಯ ನಡೆಯುತ್ತವೆ, ಕೇಳುಗರನ್ನು ಎಂಗೇಜ್ ಆಗಿ ಇಡಲು ಒಮ್ಮೊಮ್ಮೆ ಹಾಸ್ಯ ಮಾಡಬೇಕಾಗುತ್ತದೆ. ಹಾಸ್ಯ ಮಾಡಲು ಹೋಗಿ ಆ ಕೃತ್ಯವಾಗಿದೆ. ಆಗಿದ್ದು ಆಗಿಬಿಟ್ಟಿದೆ, ನಾನು ನನ್ನ ಹೃದಯದಿಂದ ಕ್ಷಮೆ ಕೇಳುತ್ತೇನೆ. ಕ್ಷಮಿಸಿಬಿಡಿ'' ಎಂದಿದ್ದಾರೆ ಜಾವೇದ್ ಹಬೀಬ್.

ಜಾವೇದ್ ಹಬೀಬ್ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಆತನನ್ನು ಬಂಧಿಸಬೇಕೆಂದು, ಆತನಿಗೆ ಬಾಲಿವುಡ್‌ನವರು ಯಾವುದೇ ಕೆಲಸ ಕೊಡಬಾರದೆಂದು ಒತ್ತಾಯಗಳು ಕೇಳಿ ಬಂದಿವೆ.

ಒಬೆರಾಯ್ ಹೋಟೆಲ್‌ನಲ್ಲಿ ಹೇರ್‌ಸ್ಟೈಲಿಸ್ಟ್ ಆಗಿದ್ದ ಜಾವೇದ್ ಹಬೀಬ್ ಬಳಿಕ ವಿದೇಶಗಳಲ್ಲಿ ಕೇಶ ವಿನ್ಯಾಸವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ಭಾರತಕ್ಕೆ ಮರಳಿ ಇಲ್ಲಿ 'ಜಾವೇದ್ ಹಬೀಬ್ ಹೇರ್' ಮತ್ತು 'ಬ್ಯೂಟಿ' ಹೆಸರಿನ ಸೆಲೂನ್‌ ತೆರೆದರು. ಸನ್‌ಸಿಲ್ಕ್ ಹಾಗೂ ಯೂನಿಲಿವರ್‌ ಸಂಸ್ಥೆಯ ಮಾಲಿಕತ್ವದ ಇತರ ಕೆಲವು ಶಾಂಪು, ಹೇರ್‌ ಆಯಿಲ್ ಉತ್ಪನ್ನಗಳಿಗೆ ರಾಯಭಾರಿ ಆಗಿದ್ದರು ಹಾಗೂ ಸಂಶೋಧಕ ತಂಡದ ಸದಸ್ಯರಾಗಿಯೂ ಇದ್ದರು. ಜೊತೆಗೆ 24 ಗಂಟೆಯಲ್ಲಿ 410 ಕೇಶವಿನ್ಯಾಸ ಮಾಡಿದ ಲಿಮ್ಕಾ ದಾಖಲೆಯೂ ಜಾವೇದ್ ಹಬೀಬ್ ಹೆಸರಿನಲ್ಲಿದೆ.

More from Filmibeat

English summary
FIR registered against Bollywood hair stylist Jawed Habib for spiting on a woman's hair.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X