For Quick Alerts
  ALLOW NOTIFICATIONS  
  For Daily Alerts

  ಬೀಚ್‌ನಲ್ಲಿ ಬೆತ್ತಲೆ ಓಡಿದ ಮಿಲಿಂದ್ ಸೋಮನ್ ವಿರುದ್ಧ ಎಫ್‌ಐಆರ್

  |

  ನಟ ಮಿಲಿಂದ್ ಸೊಮನ್ ಕೆಲವು ದಿನಗಳ ಹಿಂದೆ ಗೋವಾದ ಬೀಚ್‌ನಲ್ಲಿ ಬಟ್ಟೆ ಇಲ್ಲದೆ, ಬೆತ್ತಲಾಗಿ ಓಡಿದ್ದರು. ತಮ್ಮ ನಗ್ನ ಓಟದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ಆದರೆ ಮಿಲಿಂದ್ ಸೊಮನ್ ಅವರ ಈ ನಗ್ನ ಓಟ ಗೋವಾ ಪೊಲೀಸರ 'ಗಮನ' ಸೆಳೆದಿದೆ. ಪೊಲೀಸರು ಈಗ ಮಿಲಿಂದ್ ಸೊಮನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಅಶ್ಲೀಲ ವಿಡಿಯೋ: ಪೂನಂ ಪಾಂಡೆ ಬಂಧನ, ಬೆತ್ತಲೆ ಓಡಿದ ಮಿಲಿಂದ್ ಬಂಧನ ಏಕಿಲ್ಲ?ಅಶ್ಲೀಲ ವಿಡಿಯೋ: ಪೂನಂ ಪಾಂಡೆ ಬಂಧನ, ಬೆತ್ತಲೆ ಓಡಿದ ಮಿಲಿಂದ್ ಬಂಧನ ಏಕಿಲ್ಲ?

  ಗೋವಾದ ಪೊಲೀಸ್ ಅಧಿಕಾರಿ ಪಂಜಕ್ ಕುಮಾರ್ ಸಿಂಗ್, ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಮಿಲಿಂದ್ ಸೊಮನ್ ವಿರುದ್ಧ ಸೆಕ್ಷನ್ 294 ಹಾಗೂ ಇತರ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ಸಹ ದರ್ಜಾಗಿದೆ ಎಂದಿದ್ದಾರೆ.

  ಗೋವಾದಲ್ಲಿ ಅಸಭ್ಯ ವಿಡಿಯೋ ಚಿತ್ರೀಕರಿಸಿದ ಪೂನಂ ಪಾಂಡೆ ಅರೆಸ್ಟ್ಗೋವಾದಲ್ಲಿ ಅಸಭ್ಯ ವಿಡಿಯೋ ಚಿತ್ರೀಕರಿಸಿದ ಪೂನಂ ಪಾಂಡೆ ಅರೆಸ್ಟ್

  ಬೀಚ್‌ನಲ್ಲಿ ನಗ್ನ ಓಟ ನಡೆಸಿದ್ದ ಮಿಲಿಂದ್ ಸೊಮನ್

  ಬೀಚ್‌ನಲ್ಲಿ ನಗ್ನ ಓಟ ನಡೆಸಿದ್ದ ಮಿಲಿಂದ್ ಸೊಮನ್

  ಮಿಲಿಂದ್ ಸೊಮನ್, ನವೆಂಬರ್ 4 ರಂದು ತಮ್ಮ 55 ನೇ ಹುಟ್ಟುಹಬ್ಬದಂದು, ಗೋವಾದ ಬೀಚ್‌ನಲ್ಲಿ ಜಾಗಿಂಗ್ ಮಾಡಿದ್ದರು. ಆಗ ಬೆತ್ತಲೆಯಾಗಿ ಬೀಚ್‌ ನಲ್ಲಿ ಓಡಿದ್ದ ಮಿಲಿಂದ್ ಚಿತ್ರವನ್ನು ಅವರ ಪತ್ನಿ ಅಂಕಿತಾ ಸೆರೆ ಹಿಡಿದಿದ್ದರು. ಅದೇ ಚಿತ್ರವನ್ನು ಮಿಲಿಂದ್ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು.

  ಪೂನಂ ಪಾಂಡೆಯನ್ನು ಬಂಧಿಸಿದ್ದ ಗೋವಾ ಪೊಲೀಸ್

  ಪೂನಂ ಪಾಂಡೆಯನ್ನು ಬಂಧಿಸಿದ್ದ ಗೋವಾ ಪೊಲೀಸ್

  ಮಿಲಿಂದ್ ಘಟನೆ ಆದ ನಂತರ ನಟಿ ಪೂನಂ ಪಾಂಡೆ, ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಅವರನ್ನು ಗೋವಾ ಪೊಲೀಸರು ಬಂಧಿಸಿದ್ದರು. ಆಗ ಮಿಲಿಂದ್ 'ನಗ್ನ ಓಟ'ವೂ ಚರ್ಚೆಗೆ ಬಂದಿತ್ತು.

  ನವೆಂಬರ್ 5 ರಂದು ಬಂಧನ, 6 ಕ್ಕೆ ಜಾಮೀನು

  ನವೆಂಬರ್ 5 ರಂದು ಬಂಧನ, 6 ಕ್ಕೆ ಜಾಮೀನು

  ಪೂನಂ ಪಾಂಡೆ ಹಾಗೂ ಆಕೆಯ ಪತಿ ನಿಷೇಧಿತ ಪ್ರದೇಶದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ಇಬ್ಬರನ್ನೂ ನವೆಂಬರ್ 5 ರಂದು ಗೋವಾ ಪೊಲೀಸರು ಬಂಧಿಸಿದ್ದರು. ನಂತರ ನವೆಂಬರ್ ಆರರಂದು ಇಬ್ಬರಿಗೂ ಜಾಮೀನು ದೊರಕಿದೆ.

  ಮಿಲಿಂದ್ ಅನ್ನು ಬಂಧಿಸುತ್ತಾರೆಯೇ ಪೊಲೀಸರು?

  ಮಿಲಿಂದ್ ಅನ್ನು ಬಂಧಿಸುತ್ತಾರೆಯೇ ಪೊಲೀಸರು?

  ಪೂನಂ ಪಾಂಡೆ ಬಂಧನಕ್ಕೊಳಗಾದಾಗ, ನಗ್ನವಾಗಿ ಬೀಚ್‌ನಲ್ಲಿ ಓಡಿದ ಮಿಲಿಂದ್ ಅನ್ನೂ ಬಂಧಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಿಲಿಂದ್ ಅನ್ನು ಬಂಧಿಸುತ್ತಾರೆಯೋ ಇಲ್ಲವೋ ಕಾದು ನೋಡಬೇಕಿದೆ.

  English summary
  Case booked by Goa police against actor Milind Soman for posting nude picture of him on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X