twitter
    For Quick Alerts
    ALLOW NOTIFICATIONS  
    For Daily Alerts

    ಹೈದರಾಬಾದ್ ರೇಪ್- ಕೊಲೆ ಪ್ರಕರಣ: 38 ಸಿನಿ ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲು

    By ಫಿಲ್ಮಿಬೀಟ್ ಡೆಸ್ಕ್
    |

    2019, ಹೈದರಾಬಾದ್‌ನ ಹೊರವಲಯದಲ್ಲಿ ಪಶುವೈದ್ಯೆ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿ, ಜೀವಂತವಾಗಿ ಸುಟ್ಟುಹಾಕಿದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಭಯಾನಕ ಘಟನೆಗೆ ದೇಶದ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

    ನೆಟ್ಟಿಗರು, ಸಿನಿಮಾ ಸೆಲೆಬ್ರಿಟಿಗಳು ಈ ಹೀನ ಕೃತ್ಯ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ದುಃಖ ವ್ಯಕ್ತಪಡಿಸಿದ್ದರು. ಸಮಾಜದಲ್ಲಿ ಇಂಥ ನೀಚ ಕೃತ್ಯ ನಡೆದ ಸಮಯದಲ್ಲಿ ಸೆಲೆಬ್ರಿಟಿಗಳು ರೋಷಾವೇಶದಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಅಂಥ ಸಮಯದಲ್ಲಿ ವ್ಯಕ್ತಪಡಿಸುವ ಆಕ್ರೋಶದ ಮಾತುಗಳು, ಹೇಳಿಕೆಗಳಿಂದ ಕೆಲಮೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಇದೀಗ ಅದೇ ರೀತಿಯ ಕಾನೂನು ತೊಂದರೆಯಲ್ಲಿ ಸಿಲುಕಿದ್ದಾರೆ 38 ಸಿನಿ ಸೆಲೆಬ್ರಿಟಿಗಳು.

    ಅಷ್ಟಕ್ಕೂ ಇವರೆಲ್ಲ ಮಾಡಿದ ತಪ್ಪೇನು ಅಂತೀರಾ?, ಅತ್ಯಾಚಾರ ಸಂತ್ರಸ್ತೆಯ ಹೆಸರು ಮತ್ತು ಗುರುತು ಬಹಿರಂಗ ಪಡಿಸಿದ್ದಕ್ಕಾಗಿ 38 ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲಾಗಿದೆ. ನಟ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅನುಪಮ್ ಖೇರ್, ಅಜಯ್ ದೇವಗನ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಒಟ್ಟು 38 ಮಂದಿಯ ವಿರುದ್ಧ ದೂರು ದಾಖಲಾಗಿದ್ದು, ಇವರನ್ನು ಬಂಧಿಸುವಂತೆ ಒತ್ತಾಯ ಮಾಡಲಾಗುತ್ತಿದೆ.

    Case filed against Salman Khan, Akshay Kumar and others 36 celebs for revealing rape victims identity

    ಈ ಸಂಬಂಧ ದೆಹಲಿ ಮೂಲದ ವಕೀಲರೊಬ್ಬರು ಪ್ರಕರಣ ದಾಖಲಿಸಿದ್ದು, ಟಾಲಿವುಡ್ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಒಟ್ಟು 38 ಸಿನಿಮಾ ಮಂದಿಯನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ಕಾನೂನಿನ ಪ್ರಕಾರ ಅತ್ಯಾಚಾರಿ ಸಂತ್ರಸ್ತೆಯ ನಿಜವಾದ ಹೇಸರನ್ನು ಮಾಧ್ಯಮ ಅಥವಾ ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಬಳಸುವ ಹಾಗಿಲ್ಲ. ಆದರೆ ಈ 38 ಮಂದಿ ಸೆಲೆಬ್ರಿಟಿಗಳು ಹೀನ ಕೃತ್ಯದ ವಿರುದ್ಧ ಆಕ್ರೋಶ ಹೊರಹಾಕುವ ಭರದಲ್ಲಿ ಸಂತ್ರಸ್ತೆಯ ಗುರುತು ಬಹಿರಂಗ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆೆ.

    ಅನುಪಮ್​ ಖೇರ್​, ಅಜಯ್​ ದೇವಗನ್​, ಫರ್ಹಾನ್​ ಅಖ್ತರ್​, ಅಕ್ಷಯ್​ ಕುಮಾರ್, ಸಲ್ಮಾನ್​ ಖಾನ್​, ರವಿತೇಜ, ರಕುಲ್​ ಪ್ರೀತ್​ ಸಿಂಗ್, ಅಲ್ಲು ಸಿರೀಶ್​, ಚಾರ್ಮಿ ಕೌರ್​ ಸೇರಿದಂತೆ ಹಲವು ಸೆಲೆಬ್ರಿಟಿಗಳು ಟ್ವಿಟರ್​, ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಮುಂತಾದ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ರೇಪ್​ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ್ದರು ಎನ್ನಲಾಗಿದೆ.

    ಈ ಸಂಬಂಧ ವಕೀಲರು ದೆಹಲಿಯ ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 22 ಎ ಅಡಿಯಲ್ಲಿ ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಮತ್ತು ಈ ಸೆಲೆಬ್ರಿಟಿಗಳು ಜವಾಬ್ದಾರಿಯುತ ಪ್ರಜೆಗಳಲ್ಲ ಎಂದು ಆರೋಪಿಸಿ ತೀಸ್ ಹದಾರಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    English summary
    Case filed against Salman Khan, Akshay Kumar and others 36 celebs for revealing rape victim's identity.
    Tuesday, September 7, 2021, 13:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X