ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು

ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಮಂಜ್ರೇಕರ್ ವಿರುದ್ಧ ಪ್ರಕರಣ ದಾಖಲಾಗಿದೆ.

ವಾಹನ ಡಿಕ್ಕಿಯಾದ ಬಳಿಕ ಮಂಜ್ರೇಕರ್ ವ್ಯಕ್ತಿಯೊಬ್ಬರಿಗೆ ಕಪಾಳಕ್ಕೆ ಹೊಡೆದು, ಅವರನ್ನು ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಪುಣೆ ಮತ್ತು ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಯುವತ್ ಗ್ರಾಮದ ಬಳಿ ಕಳೆದ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

ದೂರುದಾರ ಕೈಲಾಸ್ ಸತ್ಪೂಟ್ ಕಾರಿನಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ನಟ ಮಹೇಶ್ ಮಂಜ್ರೇಕರ್ ತಮ್ಮ ಕಾರಿಗೆ ಸಡನ್ ಆಗಿ ಬ್ರೇಕ್ ಹಾಕಿದ್ದಾರೆ. ಹಾಗಾಗಿ ಅವರ ಕಾರಿಗೆ ನನ್ನ ಕಾರು ಹೋಗಿ ಗುದ್ದಿದೆ ಎಂದಿದ್ದಾರೆ.

Case filed against Actor Mahesh manjrekar for slapping person

ಬಳಿಕ ಮಂಜ್ರೇಕರ್ ಕಾರಿನಿಂದ ಇಳಿದು ಬಂದು ವಾಗ್ವಾದಕ್ಕೆ ಮುಂದಾಗಿದ್ದಾಕೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ನನ್ನ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಕೈಲಾಸ್ ಆರೋಪ ಮಾಡಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಹೇಶ್ ಮಂಜ್ರೇಕರ್ ವಿಮರ್ಶಾತ್ಮಕವಾಗಿ ಭಾರಿ ಮೆಚ್ಚುಗೆ ಪಡೆದ ವಾಸ್ತವ್ ಮತ್ತು ಅಸ್ತಿತ್ವ ಚಲನಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಹಿಂದಿ ಜೊತೆಗೆ ಅನೇಕ ಮರಾಠಿ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Case filed against Actor Mahesh manjrekar for slapping person in pune road incident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X